ಮಡಿಕೇರಿ: ‘ಡ್ರಗ್ಸ್ ದಂಧೆಯಲ್ಲಿ ಸಚಿವರು ಅಥವಾ ಯಾವುದೇ ಪಕ್ಷದ ಶಾಸಕರಿದ್ದರೆ ಅವರನ್ನೂ ಒಳಗೆ ಹಾಕಬೇಕು’ ಎಂದು ಬಿಜೆಪಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಬುಧವಾರ ಇಲ್ಲಿ ಹೇಳಿದರು.

‘ನಾಲ್ಕು ಸಿನಿಮಾ ಮಾಡಿರುವ ನಟಿಯರು ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅದು ಹೇಗೆ ಸಾಧ್ಯವಾಯಿತು? ಆ ನಟಿಯರ ಸಂಭಾವನೆ ಎಷ್ಟಿತ್ತು ಎಂಬುದರ ಬಗ್ಗೆಯೂ ತನಿಖೆ ಆಗಬೇಕಿದೆ. ಅಕ್ರಮವಾಗಿ ಹಣ, ಆಸ್ತಿ ಸಂಪಾದನೆ ಮಾಡಿದ್ದರೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಡ್ರಗ್ಸ್ ಮಾರಾಟ, ಸೇವನೆ ಮಾಡಿದ್ದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದರು.

‘ಕೆಲ ಪೊಲೀಸ್ ಅಧಿಕಾರಿಗಳೇ ಗಾಂಜಾ ಮಾರಾಟಗಾರರ ಜೊತೆಗೆ ಶಾಮೀಲಾಗಿರುವ ಮಾಹಿತಿಯಿದೆ. ಪೊಲೀಸರು ಹಣ ಪಡೆದು ಪ್ರಕರಣ ದಾಖಲಿಸದೆ ಬಿಟ್ಟು ಕಳುಹಿಸಿದ್ದಾರೆ’ ಎಂದು ದೂರಿದ ಅವರು, ಡ್ರಗ್ಸ್ ದಂಧೆ ಕೊನೆಯಾಗಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.