ವಿರಾಜಪೇಟೆ: ‘ಯಾವುದೇ ಸಮುದಾಯ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಅದರ ಸಂಘಟನೆ ಬಲಿಷ್ಠವಾಗಬೇಕು’ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ಅಭಿಪ್ರಾಯಪಟ್ಟರು.

ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ)ನ ಕಾರ್ಯಕಾರಿ ಸಮಿತಿಯಿಂದ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಕುಟುಂಬದವರಿಗಾಗಿ ಸಮೀಪದ ಕದನೂರಿನ ಖಾಸಗಿ ರೆಸಾರ್ಟ್ನಲ್ಲಿ ಈಚೆಗೆ ಆಯೋಜಿಸಿದ್ದ ಸಂತೋಷ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಸಂಘಟನೆ ಸಮಾಜದ ಶಕ್ತಿಯಾಗಿ ರೂಪುಗೊಳ್ಳಲು ಆಡಳಿತ ಮಂಡಳಿ ಪದಾಧಿಕಾರಿಗಳ ನಿಷ್ಠೆ ಮತ್ತು ಪ್ರಾಮಾಣಿಕತೆ ಪ್ರಮುಖ ಪಾತ್ರ ವಹಿಸುತ್ತದೆ. ಯಾವುದೇ ಸಂಘಟನೆಗಳಲ್ಲಿ ಪದಾಧಿಕಾರಿಗಳು ಪೂರ್ಣವಾಗಿ ತೊಡಗಿಸಿಕೊಳ್ಳಲು, ಅವರ ಕುಟುಂಬ ಸದಸ್ಯರ ಸಹಕಾರವೂ ಮುಖ್ಯ. ಸಮಾಜದ ಋಣ ತೀರಿಸುವ ಕನಿಷ್ಠ ಪ್ರಯತ್ನಕ್ಕೆ ಪ್ರತಿಯೊಬ್ಬರ ಮನಸ್ಸು ಸಿದ್ಧವಾಗಬೇಕು. ಸಮುದಾಯದ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಿ, ಸಾಮಾಜಿಕವಾಗಿ ಮೇಲೆತ್ತುವುದು ಪ್ರತಿಯೊಬ್ಬರ ಕರ್ತವ್ಯ’ ಎಂದರು.

ಹಿರಿಯ ಉಪಾಧ್ಯಕ್ಷ ಡಾ.ಜೋಯಿಪೆರ ಎ.ಕುಂಜ್ಹಬ್ದುಲ್ಲಾ ಮಾತನಾಡಿ, ‘ಸಮುದಾಯ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದಲು ದೂರದೃಷ್ಟಿಯಿಂದ ಕೆಲಸ ಮಾಡಬೇಕು. ಪ್ರತಿಯೊಬ್ಬರು ಸೇವಾಮನೋಭಾವನೆಯಿಂದ ತೊಡಗಿಸಿಕೊಂಡಾಗ ಮಾತ್ರ ಸಾಮಾಜಿಕ ಜೀವನದಲ್ಲಿ ಪ್ರಗತಿಯೆಡೆಗೆ ಸಾಗಲು ಸಾಧ್ಯ. ಕೌಟುಂಬಿಕ ಸಂತೋಷಕೂಟದಿಂದ ಸದಸ್ಯರ ಕುಟುಂಬ ವರ್ಗದವರ ಮಧ್ಯೆ ಪರಸ್ಪರ ಬಾಂಧವ್ಯ ಗಟ್ಟಿಗೊಳ್ಳುತ್ತದೆ. ಇದು ಸಂಘಟನೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ’ ಎಂದರು.

ಸಂಸ್ಥೆಯ ಉಪಾಧ್ಯಕ್ಷ ಅಕ್ಕಳತಂಡ ಎಸ್.ಮೊಯ್ದು ಮಾತನಾಡಿದರು.

ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವಕ್ಕೆ ರಾಜ್ಯ ಸರ್ಕಾರದ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಕೆ.ಎಂ.ಎ ಕೋಶಾಧಿಕಾರಿ ಹರಿಶ್ಚಂದ್ರ ಎ.ಹಂಸ, ರಾಜ್ಯಮಟ್ಟದ ಸದ್ಭಾವನಾ ಪ್ರಶಸ್ತಿ ಪುರಸ್ಕೃತ ಮೀತಲತಂಡ ಎಂ.ಇಸ್ಮಾಯಿಲ್, ತಾಲ್ಲೂಕು ಕೆಡಿಪಿ ಸದಸ್ಯರಾಗಿ ಆಯ್ಕೆಗೊಂಡ ಕೋಳುಮಂಡ ರಫೀಕ್, ಕೆದಮುಳ್ಳೂರು ವಿ.ಎಸ್.ಎಸ್.ಎನ್ ನಿರ್ದೇಶಕರಾಗಿ ಆಯ್ಕೆಗೊಂಡ ಕುವೇಂಡ ವೈ.ಆಲಿ, ಸಂಸ್ಥೆಗೆ ಹೆಚ್ಚು ಸದಸ್ಯರನ್ನು ನೋಂದಾಯಿಸಿದ ಹಾಗೂ ಕೊಂಡಂಗೇರಿ ವಿವಿಧೋದ್ದೇಶ ಸಹಕಾರ ದವಸ ಭಂಡಾರ ನಿಯಮಿತದ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಪುಡಿಯಂಡ ಇ.ಶಾದುಲಿ ಹಾಗೂ ಹಳ್ಳಿಗಟ್ಟು ಬದ್ರಿಯಾ ಜುಮಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಚಿಮ್ಮಿಚ್ಚಿರ ಕೆ.ಇಬ್ರಾಹಿಂ ಹಾಜಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಸಂಘಟನಾ ಕಾರ್ಯದರ್ಶಿ ಎಂ.ಎಂ.ಇಸ್ಮಾಯಿಲ್, ಕೋಶಾಧಿಕಾರಿ ಹರಿಶ್ಚಂದ್ರ ಎ.ಹಂಸ, ಜಂಟಿ ಕಾರ್ಯದರ್ಶಿ ಕರ್ತೊರೆರ ಮುಸ್ತಫಾ, ಪದಾಧಿಕಾರಿಗಳಾದ ಚಿಮ್ಮಿಚ್ಚಿರ ಕೆ.ಇಬ್ರಾಹಿಂ, ಪೊಯಕೆರ ಎಸ್.ಮೊಹಮ್ಮದ್ ರಫೀಕ್, ಮಂಡೇಂಡ ಎ.ಮೊಯ್ದು, ಪುದಿಯಾಣೆರ ಎಂ. ಹನೀಫ್, ಕುಪ್ಪೋಡಂಡ ಎ.ಅಬ್ದುಲ್ ರಶೀದ್ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ವಿವಿಧ ಸ್ಪರ್ಧೆಗಳ ವಿಜೇತರು

ಕುಟುಂಬದವರಿಗಾಗಿ ನಡೆದ ಪುಟಾಣಿಗಳ ಬಕೇಟಿಗೆ ಬಾಲ್ ಹಾಕುವ ಸ್ಪರ್ಧೆಯಲ್ಲಿ ಕರತೊರೆರ ಶಯಾನ್ ಶರ್ಫುದ್ದೀನ್ ಪ್ರಥಮ ಈತಲತಂಡ ರಿಫಾನ್ ರಫೀಕ್ ದ್ವಿತೀಯ ಮತ್ತು ಪುದಿಯಾಣೆರ ಆದಿಲ್ ಹನೀಫ್ ತೃತೀಯ ಬಹುಮಾನ ಪಡೆದರು. ಬಾಲಕರ ವಿಭಾಗದ 'ಪಾಸಿಂಗ್ ದ ಬಾಲ್' ಸ್ಪರ್ಧೆಯಲ್ಲಿ ದುದ್ದಿಯಂಡ ಮನ್ನಾನ್ ಮೊಯ್ದು ಪ್ರಥಮ ಮಂಡೆಂಡ ಮುಜ್ತಬ ಮೊಯ್ದು ದ್ವಿತೀಯ ಮತ್ತು ಕುಂಡಂಡ ರಜ್ಹಿನ್ ರಜಾಕ್ ತೃತೀಯ ಬಹುಮಾನ ಪಡೆದುಕೊಂಡರು. ಪುರುಷರ ಸಂಗೀತ ಕುರ್ಚಿಯಲ್ಲಿ ಕರ್ತೊರೆರ ಎಸ್.ಶರ್ಫುದ್ದೀನ್ ಪ್ರಥಮ ಕುಪ್ಪೋಡಂಡ ಅಬ್ದುಲ್ ರಶೀದ್ ದ್ವಿತೀಯ ಮತ್ತು ಕುವೇಂಡ ವೈ. ಆಲಿ ತೃತೀಯ ಮಹಿಳೆಯರ ವಿಭಾಗದಲ್ಲಿ ದುದ್ದಿಯಂಡ ಅಲ್ಫಿಯಾ ಮಾಶೂಕ್ ಪ್ರಥಮ ಅಕ್ಕಳತಂಡ ಫಿದಾ ಮೊಯ್ದು ದ್ವಿತೀಯ ಮತ್ತು ಚೆರುಮಾನಿಕಾರಂಡ ಜ್ಹರೀನಾ ಅಹಮದ್ ತೃತೀಯ ಸ್ಥಾನ ಪಡೆದುಕೊಂಡರು. ಪುರುಷರ ವಿಭಾಗದಲ್ಲಿ ಕರತೊರೆರ ಕೆ.ಮುಸ್ತಫಾ ಮುಶ್ರಫ್ ಮೊಯ್ದು ಕುಂಡಂಡ ರಜ್ಹಾಕ್ ಪ್ರಥಮ ಹರಿಶ್ಚಂದ್ರ ಎ.ಹಂಸ ಬಹುಮಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಕುವೇಂಡ ನಜ್ಮಾ ಆದಿಲ್ ಮಂಡೇಂಡ ರಶೀದ ಹರಿಶ್ಚಂದ್ರ ಶಮಾ ಹಂಸ ಸೂಫಿಯಾ ಮರಿಯಂ ಅಕ್ಕಳತಂಡ ಫಿದಾ ಮೊಯ್ದು ಬಹುಮಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.