ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿರಾಜಪೇಟೆ | ಕೇರಳದಿಂದ ತ್ಯಾಜ್ಯ; ವಾಹನ ಚಾಲಕನಿಗೆ ದಂಡ

Published 5 ಮಾರ್ಚ್ 2024, 5:00 IST
Last Updated 5 ಮಾರ್ಚ್ 2024, 5:00 IST
ಅಕ್ಷರ ಗಾತ್ರ

ವಿರಾಜಪೇಟೆ: ಕೇರಳದಿಂದ ಅಕ್ರಮವಾಗಿ ರಾಜ್ಯಕ್ಕೆ ತ್ಯಾಜ್ಯವನ್ನು ಸಾಗಿಸುತ್ತಿದ್ದ ಸರಕು ಸಾಗಣೆಯ ವಾಹನ ಚಾಲಕ,  ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ನಿವಾಸಿ ಬೈರ ಎಂಬುವವರಿಗೆ ಸಮೀಪದ ಮಾಕುಟ್ಟ ಚೆಕ್‌ಪೋಸ್ಟ್‌ನಲ್ಲಿ ಬೇಟೋಳಿ ಗ್ರಾಮ‌ ಪಂಚಾಯಿತಿ ಸಿಬ್ಬಂದಿ ₹ 1 ಸಾವಿರ ದಂಡ ವಿಧಿಸಿದರು.

ಪಂಚಾಯಿತಿ ಸಿಬ್ಬಂದಿ ದಿನೇಶ್ ಅವರ ಸಮ್ಮುಖದಲ್ಲಿ ತ್ಯಾಜ್ಯವನ್ನು ವಾಹನ ಸಹಿತ ಕೇರಳಕ್ಕೆ ವಾಪಸು ಕಳುಹಿಸಲಾಯಿತು.

‘ಕೇರಳದ ಕಣ್ಣೂರಿನ ವಿವಿಧೆಡೆಯಿಂದ ತ್ಯಾಜ್ಯವನ್ನು ಕೊಳ್ಳೆಗಾಲಕ್ಕೆ ಸಾಗಿಸುತ್ತಿರುವುದಾಗಿ ಚಾಲಕ ಮಾಹಿತಿ ನೀಡಿದ್ದಾರೆ. ತ್ಯಾಜ್ಯವನ್ನು ಮಾಕುಟ್ಟದಲ್ಲಿನ ರಕ್ಷಿತಾರಣ್ಯದಲ್ಲಿ ಸುರಿಯುತ್ತಿರುವ ಶಂಕೆಯೂ ಇದೆ’ ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ.

ವಲಯ ಅರಣ್ಯ ಅಧಿಕಾರಿ ಸುಹಾನ ಹರೀಶ್ ಅತ್ತಾವರ, ಉಪ ವಲಯ ಅರಣ್ಯ ಅಧಿಕಾರಿ ಚಂದ್ರಶೇಖರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT