ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ- ಅಮೆರಿಕ ಸಂಬಂಧ ವೃದ್ಧಿ: ಜುಡಿತ್ ರವಿನ್

ಮರ್ಕೆರಾ ಡೇರಿಯನ್ ಅಸೋಸಿಯೇಷನ್‌ನ 68ನೇ ಮಹಾಸಭೆಯಲ್ಲಿ ಜುಡಿತ್ ರವಿನ್ ಹೇಳಿಕೆ
Last Updated 12 ಆಗಸ್ಟ್ 2022, 22:45 IST
ಅಕ್ಷರ ಗಾತ್ರ

ಮಡಿಕೇರಿ: ‘ಭಾರತ ಮತ್ತು ಅಮೆರಿಕ ನಡುವೆ 75 ವರ್ಷಗಳ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಂಬಂಧ ವೃದ್ಧಿಯಾಗುತ್ತಲೇ ಬಂದಿದ್ದು, ಪ್ರಸ್ತುತ ನಿರೀಕ್ಷೆಗೂ ಮೀರಿ ಉತ್ತಮ ಸಂಬಂಧ ಏರ್ಪಟ್ಟಿದೆ’ ಎಂದು ಚೆನ್ನೈನಲ್ಲಿರುವ ಅಮೆರಿಕದ ಕೌನ್ಸಲ್ ಜನರಲ್ ಜುಡಿತ್ ರವಿನ್ ತಿಳಿಸಿದರು.

ನಗರದ ನಾರ್ಥ್ ಕೂರ್ಗ್ ಕ್ಲಬ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಮರ್ಕೆರಾ ಡೇರಿಯನ್ ಅಸೋಸಿಯೇಷನ್‌ನ 68ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಭಾರತದ ಭವಿಷ್ಯ ಯುವ ಪೀಳಿಗೆಯನ್ನು ಅವಲಂಬಿಸಿದೆ. ಯುವಕ, ಯುವತಿಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಸಶಕ್ತವಾಗಿ ಮುಂದುವರಿಸಿಕೊಂಡು ಸಾಗುವಲ್ಲಿ ಶಕ್ತರಾಗಿದ್ದಾರೆ’ ಎಂದು ಹೇಳಿದರು.

‘ಭಾರತದ ಲಕ್ಷಾಂತರ ಉದ್ಯೋಗಿಗಳಿಗೆ ಅಮೆರಿಕ ಆಶ್ರಯ ನೀಡಿದ್ದರೆ, ಭಾರತ ಕೂಡ ಅಮೆರಿಕದ ಅನೇಕ ಪ್ರಮುಖ ಸಂಸ್ಥೆಗಳಿಗೆ ತನ್ನ ದೇಶದಲ್ಲಿ ವಿವಿಧ ವಹಿವಾಟಿಗೆ ಅವಕಾಶ ನೀಡಿ ಸ್ನೇಹದ ಬೆಸುಗೆವೃದ್ಧಿಸಿದೆ’ ಎಂದರು.

‘ಇತ್ತೀಚಿನ ವರ್ಷಗಳಲ್ಲಿ ಭಾರತೀಯರು ಅಮೆರಿಕದ ರಾಜಕೀಯ ಕ್ಷೇತ್ರದಲ್ಲಿಯೂ ಮಹತ್ವ ಪಡೆದಿದ್ದಾರೆ. ಅಮೆರಿಕಕ್ಕೆ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣಕ್ಕಾಗಿ ಕಳುಹಿಸುವಲ್ಲಿ ವಿಶ್ವದಲ್ಲಿಯೇ ಭಾರತ ಎರಡನೇ ಸ್ಥಾನದಲ್ಲಿದೆ’ ಎಂದು ತಿಳಿಸಿದರು.

ಕೊಡಗು ಪೊಲೀಸ್ವರಿಷ್ಠಾಧಿಕಾರಿ ಕ್ಯಾಪ್ಟನ್ ಮಲ್ಚೀರ ಎ.ಅಯ್ಯಪ್ಪ ಮಾತನಾಡಿ, ‘ಎರಡೂ ದೇಶಗಳ ಎರಡು ನಗರಗಳಾದ ಮಡಿಕೇರಿ ಹಾಗೂ ಡೇರಿಯನ್ ನಡುವೆ ಪರಸ್ಪರ ಸೌಹಾರ್ದ ಸಂಬಂಧ ಬೆಸೆಯುವಲ್ಲಿ ಮರ್ಕೆರ ಡೇರಿಯನ್ ಅಸೋಸಿಯೇಷನ್ ಅತ್ಯುತ್ತಮ ಕಾರ್ಯನಿರ್ವಹಿಸಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆಯ ಬೆಳವಣಿಗೆಯಲ್ಲಿ ಯುವಪೀಳಿಗೆ ಹೆಚ್ಚಿನ ಪಾತ್ರ ವಹಿಸಬೇಕು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಸೋಸಿಯೇಷನ್‌ನ ನೂತನ ಅಧ್ಯಕ್ಷರಾಗಿ ಮಡಿಕೇರಿಯ ಡಾ.ಅನಿಲ್ ಚಂಗಪ್ಪ ಅವರನ್ನು ಆಯ್ಕೆ ಮಾಡಲಾಯಿತು.

ಅಸೋಸಿಯೇಷನ್‌ನ ಅಧ್ಯಕ್ಷ ಕೂತಂಡ ಪಿ.ಉತ್ತಪ್ಪ, ಕಾರ್ಯದರ್ಶಿಸುನೀಲ್ ಗಣಪತಿ, ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ, ಚೆನ್ನೈನ ಅಮೆರಿಕ ರಾಯಭಾರಿ ಕಚೇರಿ ಅಧಿಕಾರಿ ಬೃಂದಾ ಜಯಕಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT