ಕುಶಾಲನಗರ: ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಜೇನು ಕುರುಬ ಹಾಗೂ ಕೊರಗ ಸಮುದಾಯಗಳ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಮಂಡಳಿ ರಚನೆ ಮಾಡಬೇಕು ಎಂದು ಜೇನು ಕುರುಬ ಹಾಗೂ ಕೊರಗ ಸಮುದಾಯ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಮಂಗಳೂರಿನ ಎಂ.ಸುಂದರ್ ದಳುವಾಯಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ತಾಲ್ಲೂಕಿನ ಬಸವನಹಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ಜೇನು ಕುರುಬ ಹಾಗೂ ಕೊರಗ ಸಮುದಾಯಗಳ ಒಕ್ಕೂಟದ ರಾಜ್ಯ ಕಾರ್ಯಕಾರಿಣಿಯಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಬಂದು 79 ವರ್ಷಗಳು ಕಳೆದರೂ ಮಲೆನಾಡಿನ ಮೂಲನಿವಾಸಿಗಳ ಜೇನು ಕುರುಬ ಹಾಗೂ ಕರಾವಳಿಯ ಮೂಲನಿವಾಸಿಗಳಾಗಿ ಈಗಲೂ ತೀರಾ ಹಿಂದುಳಿದ ಕೊರಗ ಸಮುದಾಯಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿವೆ ಎಂದು ಆಕ್ರೋಶಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ಈ ಎರಡು ಸಮುದಾಯಗಳನ್ನು ನೈಜ ದುರ್ಬಲ ಬುಡಕಟ್ಟು ಸಮುದಾಯ ಎಂದು ಘೋಷಿಸಿವೆ.ಜೊತೆಗೆ ಬುಡಕಟ್ಟು ಕಲಂ 51ನಂತೆ ಸಮುದಾಯಗಳು ಶಿಕ್ಷಣದಿಂದ ವಂಚಿತಗೊಂಡಿವೆ. ಸರ್ಕಾರಗಳ ಎಲ್ಲಾ ಯೋಜನೆಗಳು ಭೂಮಿಯ ಆಧಾರಿತವಾಗಿರುವುದರಿಂದ ನಮ್ಮ ಈ ಸಮುದಾಯ ಗಳಲ್ಲಿ ಭೂಮಿಯೇ ಇಲ್ಲದ ಕಾರಣ ಸರ್ಕಾರದ ಯಾವ ಯೋಜನೆಗಳು ಇದುವರೆಗೂ ತಲುಪಿಲ್ಲ. ಈ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳಿಗೆ ಒಕ್ಕೂಟದಿಂದ ಮನವಿ ಸಲ್ಲಿದ್ದು, ಸರ್ಕಾರ ಮನವಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಜೇನು ಕುರುಬ ಹಾಗೂ ಕೊರಗ ಸಮುದಾಯಗಳ ಅಭಿವೃದ್ಧಿಗೆ ನಿಗಮ, ಮಂಡಳಿ ರಚಿಸಬೇಕು ಎಂದು ಅವರು ಆಗ್ರಹಿಸಿದರು.

ಒಕ್ಕೂಟದ ಉಪಾಧ್ಯಕ್ಷ ಹುಣಸೂರಿನ ಜೆ.ಟಿ.ರಾಜಪ್ಪ ಮಾತನಾಡಿ, ಜೇನು ಕುರುಬರು ಚಾಮರಾಜನಗರ, ಮೈಸೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೊರಗ ಸಮುದಾಯದವರು ದಕ್ಷಿಣ ಕನ್ನಡ ಹಾಗೂ ಉಡುಪಿ ಯಲ್ಲಿದ್ದಾರೆ. ಈ ಎರಡೂ ಸಮುದಾಯಗಳ ಮಕ್ಕಳು ಶಿಕ್ಷಣ ಪಡೆದರೂ ಸರ್ಕಾರದಿಂದ ಉದ್ಯೋಗ ಸಿಗುತ್ತಿಲ್ಲ. 1967 ರಲ್ಲಿ ಹುಣಸೂರಿನಲ್ಲಿ ಇದ್ದಂತಹ ಜೇನುಕುರುಬರ ಸಂಘದ ಕಾರ್ಯಾಲಯವನ್ನು 2010ರಲ್ಲಿ ಮುಚ್ಚಲಾಗಿದ್ದು, ಕೂಡಲೇ ಕಚೇರಿಯನ್ನು ಆರಂಭಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯ ಜೇನು ಕುರುಬರ ಅಭಿವೃದ್ಧಿ ಸಂಘದ ಕೊಡಗು ಘಟಕದ ಅಧ್ಯಕ್ಷ ಜೆ.ಟಿ.ಕಾಳಿಂಗ ಮಾತನಾಡಿ, ಕೊರಗ ಹಾಗೂ ಜೇನು ಕುರುಬ ಸಮುದಾಯಗಳನ್ನು ಸರ್ಕಾರಗಳು ಕಡೆಗಣಿಸಿರುವ ಕಾರಣ ಅಭಿವೃದ್ಧಿ ಸಾಧ್ಯವಾಗಿಲ್ಲ. ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ದೊರಕುತ್ತಿಲ್ಲ. ಸಮಗ್ರ ಸೌಲಭ್ಯಗಳು ಶೋಷಿತರು ಹಾಗೂ ಸಮಾಜದ ಕಟ್ಟಕಡೆಯ ಈ ಸಮುದಾಯಗಳಿಗೆ ನೀಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಚಳವಳಿ ನಡೆಸುವುದಾಗಿ ಎಚ್ಚಸಿದರು.

ನಾಲ್ಕೇರಿ ಗ್ರಾಮಪಂಚಾಯಿತಿ ಅಧ್ಯಕ್ಷ ಒಕ್ಕೂಟದ ಸದಸ್ಯ ಜೆ.ಎಂ.ಸೋಮಯ್ಯ, ಕಾರ್ಯದರ್ಶಿ ಜೆ.ಟಿ.ಚಂದ್ರು, ಮನೋಜ್, ತಿತಿಮತಿ ಪುಷ್ಪ, ಪಿರಿಯಾಪಟ್ಟಣದ ಗೌರಮ್ಮ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.