ಮಡಿಕೇರಿ: ಕರ್ನಾಟಕದ ಗಡಿ ಜಿಲ್ಲೆ ಕೊಡಗಿನಲ್ಲಿ ಕಳೆದ 2 ವರ್ಷಗಳ ನಂತರ ಕನ್ನಡ ಸಾಹಿತ್ಯ ಸಮ್ಮೇಳನಗಳು ಆರಂಭವಾಗಿವೆ. ದಾನಿಗಳು ಹಾಗೂ ಸ್ಥಳೀಯರ ಸಹಕಾರದಿಂದ ಸೋಮವಾರಪೇಟೆ ತಾಲ್ಲೂಕು ಸಮ್ಮೇಳನವು ಐಗೂರಿನಲ್ಲಿ ಫೆ. 9ರಂದು ಆಯೋಜನೆಗೊಂಡಿದೆ. ಇದರ ನಂತರ ಎಲ್ಲ ತಾಲ್ಲೂಕುಗಳಲ್ಲಿಯೂ ಸಮ್ಮೇಳನ ನಡೆಸಲು ಪರಿಷತ್ತು ಉದ್ದೇಶಿಸಿದೆ.

2022–23ನೇ ಸಾಲಿನಲ್ಲಿ ಬೆಟ್ಟಗೇರಿ, ಆರ್ಜಿ, ಗೌಡಳ್ಳಿ, ಕುಶಾಲನಗರ, ಗೋಣಿಕೊಪ್ಪಲಿನಲ್ಲಿ ನಡೆದ ಸಮ್ಮೇಳನಗಳು ವಿಜೃಂಭಣೆಯಿಂದ ನಡೆದಿದ್ದವು. ಆ ಬಳಿಕ ಎಲ್ಲಿಯೂ ಜಿಲ್ಲಾ ಸಾಹಿತ್ಯ ಸಮ್ಮೇಳನಗಳಾಗಲಿ, ತಾಲ್ಲೂಕು ಸಮ್ಮೇಳನಗಳಾಗಲಿ ನಡೆದಿಲ್ಲ. ಇದು ಕೇವಲ ಕೊಡಗು ಜಿಲ್ಲೆ ಮಾತ್ರವಲ್ಲ ರಾಜ್ಯ ಕೆಲವು ಜಿಲ್ಲೆಗಳ ಸ್ಥಿತಿ ಹೀಗೆಯೇ ಇದೆ. ಸಮರ್ಪಕವಾಗಿ ಹಾಗೂ ಸಕಾಲದಲ್ಲಿ ಅನುದಾನ ಬಿಡುಗಡೆಯಾಗದೇ ಇರುವುದೇ ಈ ಸ್ಥಿತಿಗೆ ಕಾರಣ ಎಂದು ಕೆಲವು ಜಿಲ್ಲೆಗಳ ಕಸಾಪ ಅಧ್ಯಕ್ಷರ ಆರೋಪವಾಗಿದೆ.

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರತಿ ತಾಲ್ಲೂಕುಗಳಲ್ಲಿಯೂ ಹಾಗೂ ಜಿಲ್ಲೆಗಳಲ್ಲಿಯೂ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಯಿತು. ಅದಕ್ಕಾಗಿ ಪ್ರತಿ ತಾಲ್ಲೂಕಿಗೆ ₹ 1 ಲಕ್ಷ ಹಾಗೂ ಜಿಲ್ಲೆಗಳಿಗೆ ₹ 5 ಲಕ್ಷ ಅನುದಾನ ಬಿಡುಗಡೆ ಮಾಡಲಾಯಿತು. ಇಷ್ಟು ಹಣ ಒಂದು ಸಮ್ಮೇಳನಕ್ಕೆ ಸಾಕಾಗದೇ ಹೋದರೂ ದಾನಿಗಳ ನೆರವಿನಿಂದ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿಕೊಂಡು ಬರಲಾಗಿತ್ತು. ಇದರಿಂದ ತಾಲ್ಲೂಕುಗಳಲ್ಲಿಯೂ ಕನ್ನಡದ ಕಂಪು ಮೂಡಿತ್ತು. ಇಂತಹ ತಾಲ್ಲೂಕು ಸಮ್ಮೇಳನಗಳು ಗಡಿ ಜಿಲ್ಲೆಗಳಲ್ಲಿ ತೀರಾ ಅಗತ್ಯ ಮಾತ್ರವಲ್ಲ ಅನಿವಾರ್ಯವೂ ಆಗಿದೆ. ಗಡಿ ಜಿಲ್ಲೆಗಳಲ್ಲಿ ಬೇರೆ ರಾಜ್ಯಗಳ ಭಾಷಾ ಪ್ರಭಾವ ದಿನೇ ದಿನೇ ಹೆಚ್ಚುತ್ತಿದೆ. ಪರಭಾಷಾ ಮೋಹ ಆವರಿಸುತ್ತಿದೆ. ಕನ್ನಡದ ಉಳಿವು ಗಡಿ ಭಾಗದ ತಾಲ್ಲೂಕುಗಳಲ್ಲಿ ತೀರಾ ಕಷ್ಟಕರವಾಗಿ ಪರಿಣಮಿಸಿದೆ. ಹಾಗಾಗಿ, ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳ ಅಗತ್ಯತೆ ಇದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ‘ಪ್ರತಿ ವರ್ಷ ಫೆಬ್ರುವರಿ ಕೊನೆಯ ವಾರದಲ್ಲಿ ಸಭೆ ಕರೆದು ಮಾರ್ಚ್ 15ರ ಒಳಗೆ ಸಮ್ಮೇಳನ ನಡೆಸುವಂತೆ ಪರಿಷತ್ತಿನ ಕೇಂದ್ರ ಸಮಿತಿ ಹೇಳುತ್ತದೆ. ಆದರೆ, ಈ ಚಿಕ್ಕ ಅವಧಿಯಲ್ಲಿ ಸಮ್ಮೇಳನ ನಡೆಸುವುದು ತೀರಾ ಕಷ್ಟ. ನಡೆಸಲಿಲ್ಲ ಎಂಬ ಕಾರಣಕ್ಕೆ ಅನುದಾನ ವಾಪಸ್ ಹೋಗುತ್ತದೆ. ಅದೂ ಅಲ್ಲದೇ, ಆ ವೇಳೆ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳು ನಡೆಯುತ್ತಿರುತ್ತದೆ. ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಸಮ್ಮೇಳನಕ್ಕೆ ಆಗಮಿಸಲು ತೊಡಕಾಗುತ್ತದೆ. ಹೀಗಾಗಿ, ಕೇವಲ ಕೊಡಗು ಮಾತ್ರವಲ್ಲ, ಬಹುತೇಕ ಜಿಲ್ಲೆಗಳಲ್ಲಿ ಸಮ್ಮೇಳನಗಳು 2 ವರ್ಷಗಳಿಂದ ನಡೆದಿಲ್ಲ’ ಎಂದು ವಿವರಿಸಿದರು.

ಸಮ್ಮೇಳನದಿಂದ ಕನ್ನಡ ಜಾಗೃತಿ:

ಈಗಾಗಲೇ ಕೇರಳ ಗಡಿ ಭಾಗದಲ್ಲಿರುವ ಕೊಡಗಿನ ಪ್ರದೇಶಗಳಲ್ಲಿ ಕನ್ನಡ ಕಾಣೆಯಾಗುವ ಹಂತ ತಲುಪಿದೆ. ಮಲಯಾಳಂ ಭಾಷೆಯ ದಟ್ಟ ಪ್ರಭಾವ ವ್ಯಾಪಿಸಿದೆ. ಕೊಡಗಿನ ಭೂಮಿಯನ್ನೂ ಹೊರರಾಜ್ಯದವರು ಹೆಚ್ಚು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಹೊರರಾಜ್ಯದವರೇ ರೆಸಾರ್ಟ್ಗಳನ್ನು ಹೆಚ್ಚು ಹೆಚ್ಚು ತೆರೆಯುತ್ತಿದ್ದಾರೆ. ಇವರಿಗೆ ಕನ್ನಡವೂ ಬೇಕಿಲ್ಲ, ಕೊಡಗಿನ ಜನರೂ ಬೇಕಿಲ್ಲ. ಹೊರರಾಜ್ಯ ಮಾತ್ರವಲ್ಲ ವಿದೇಶದ ಸಂಸ್ಕೃತಿ ಹರಡುತ್ತಿದೆ. ಕನ್ನಡತನ, ಕನ್ನಡ ಸಂಸ್ಕ್ಕೃತಿ ಮರೆಯಾಗುತ್ತಿದೆ. ಸರ್ಕಾರ ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಇರಬೇಕು ಎಂದು ಆದೇಶ ಮಾಡಿರುವುದರಿಂದ ಮಾತ್ರವೇ ನಿಯಮ ಪಾಲನೆಗಾಗಿ ಕನ್ನಡದ ನಾಮಫಲಕಗಳು ಕಾಣಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೊಡಗಿನ ಪ್ರತಿ ತಾಲ್ಲೂಕು ಮಾತ್ರವಲ್ಲ ಪ್ರತಿ ಹೋಬಳಿಗಳಲ್ಲೂ ಸಮ್ಮೇಳನಗಳು ನಡೆಯಲೇ ಬೇಕಿದೆ.

ಸಮ್ಮೇಳನ ನಡೆಯುವುದರಿಂದ ಕನ್ನಡಕ್ಕೆ ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ. ಕನ್ನಡದ ಕೆಲಸ ಮಾಡುವವರಿಗೆ, ಸಾಹಿತಿಗಳಿಗೆ ಗೌರವ ದೊರೆಯುತ್ತದೆ. ಆ ಭಾಗದ ಇತಿಹಾಸ, ಸಂಸ್ಕ್ಕೃತಿ ಅವಲೋಕನ ನಡೆಯುತ್ತದೆ. ಕವಿಗೋಷ್ಠಿ, ಪುಸ್ತಕ ಬಿಡುಗಡೆ, ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕನ್ನಡತನ ಮೂಡುತ್ತದೆ. ಹಾಗಾಗಿ, ಸಾಹಿತ್ಯ ಸಮ್ಮೇಳನಗಳು ಕೇಂದ್ರೀಕರಣಗೊಳ್ಳುವುದಕ್ಕಿಂತ ವಿಕೇಂದ್ರಿಕರಣಗೊಳ್ಳಬೇಕು ಎನ್ನುವುದು ಸಾಹಿತ್ಯಾಭಿಮಾನಿಗಳ ಒತ್ತಾಯವಾಗಿದೆ.

ಸಾಹಿತ್ಯ ಸಮ್ಮೇಳನ:

ಜನಾಭಿಪ್ರಾಯ ದಾನಿಗಳು ಸ್ಥಳೀಯರ ನೆರವಿನಿಂದ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಅನುದಾನ ಬಂದರೂ ಅಥವಾ ಬಾರದಿದ್ದರೂ ಈ ವರ್ಷ ಸ್ಥಳೀಯರು ಮತ್ತು ದಾನಿಗಳ ನೆರವಿನಿಂದ ತಾಲ್ಲೂಕು ಸಮ್ಮೇಳನಗಳು ಹಾಗೂ ಜಿಲ್ಲಾ ಸಮ್ಮೇಳನ ಮಾಡಲು ಚಿಂತನೆ ನಡೆಸಿದ್ದೇವೆ. ಎಂ.ಪಿ.ಕೇಶವ ಕಾಮತ್ ಕಸಾಪ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ *** ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡಲಿ ಗಡಿನಾಡಿನಲ್ಲಿ ಕನ್ನಡ ಜಾಗೃತಿ ಶಕ್ತಿ ಹೆಚ್ಚಲು ಇಂತಹ ಸಮ್ಮೇಳನಗಳು ಅನಿವಾರ್ಯ. ಕೊಡಗಿನ ಜನರು ಎಲ್ಲ ಬಗೆಯ ಸಹಕಾರ ನೀಡಿದ್ದಾರೆ. ಐಗೂರಿನಲ್ಲಿ ಅಲ್ಲಿನ ಜನರು ಸಾಕಷ್ಟು ಸಹಕಾರ ನೆರವು ನೀಡಿದ್ದಾರೆ. ಬಹಳಷ್ಟು ಶ್ರಮ ಹಾಕಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಸಮಿತಿ ಇನ್ನು ಮುಂದಾದರೂ ಕಾಲಮಿತಿಯೊಳಗೆ ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡಿ ಸಮ್ಮೇಳನ ನಡೆಯಲು ಅನುವು ಮಾಡಿಕೊಡಬೇಕು. ಟಿ.ಪಿ.ರಮೇಶ್ ಕಸಾಪ// ಮಾಜಿ ಅಧ್ಯಕ್ಷ *** ಕೇಂದ್ರ ಸಮಿತಿ ನಿಗಾ ವಹಿಸಲಿ ಐಗೂರು ಸಮ್ಮೇಳನವು ದಾನಿಗಳು ಸ್ಥಳೀಯರ ಸಹಕಾರದಿಂದ ನಡೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ಇದರಲ್ಲಿ ಎಲ್ಲರೂ ಭಾಗವಹಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯೇ ರಾಜ್ಯದ ಎಲ್ಲ ಜಿಲ್ಲೆ ತಾಲ್ಲೂಕುಗಳಲ್ಲಿ ಸಮ್ಮೇಳನಗಳು ನಡೆಯುವಂತೆ ತೀವ್ರ ನಿಗಾ ವಹಿಸಬೇಕು. ಟಿ.ಜಿ.ಪ್ರೇಮ್ಕುಮಾರ್ ಕಸಾಪ ಸೋಮವಾರಪೇಟೆ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ *** ಕೊಡಗಿನ ಜನರು ಸಹಕಾರ ಕೊಡುತ್ತಾರೆ 2016ರಿಂದ 2021ರವರೆಗಿನ ಅವಧಿಯಲ್ಲಿ 20ಕ್ಕೂ ಹೆಚ್ಚು ಸಾಹಿತ್ಯ ಸಮ್ಮೇಳನಗಳನ್ನು ಮಾಡಲಾಗಿತ್ತು. ರಾಜ್ಯದಲ್ಲಿ 5 ವರ್ಷಕ್ಕೆ 5 ಜಿಲ್ಲಾ ಸಮ್ಮೇಳನ ಮಾಡಿದ ಏಕೈಕ ಜಿಲ್ಲೆ ಎಂಬ ಹೆಸರನ್ನು ಗಳಿಸಿತ್ತು. ಈ ಸಮ್ಮೇಳನದಲ್ಲಿ ಕೆಲವು ವಿಶೇಷ ಸಮ್ಮೇಳನಗಳಿಗೆ ಸರ್ಕಾರದ ಅನುದಾನ ಇರಲಿಲ್ಲ. ಕೊಡಗಿನ ಜನರು ಸಾಹಿತ್ಯ ಸಮ್ಮೇಳನಕ್ಕೆ ಹೆಚ್ಚಿನ ಸಹಕಾರ ಕೊಡುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ. ಇದೇ ತರಹ 2 ವರ್ಷಗಳಿಂದ ಸಮ್ಮೇಳನಗಳನ್ನು ಆಯೋಜಿಸುವ ಅವಕಾಶಗಳಿತ್ತು. ಕೆಲವು ಜಿಲ್ಲೆಗಳಲ್ಲಿ ಹಿಂದಿನ ವರ್ಷಗಳಂತೆ ಸಮ್ಮೇಳನ ಮಾಡಿದ ನಿದರ್ಶನಗಳೂ ಇವೆ. ಬಿ.ಎಸ್.ಲೋಕೇಶ್ ಸಾಗರ್ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಕಸಾಪ ನಿಕಟಪೂರ್ವ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.