ಮಡಿಕೇರಿ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮೇಲುಕಾಮನಹಳ್ಳಿಯಲ್ಲಿ ಸೋಮವಾರ ಆರಂಭವಾದ ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ಶೃಂಗಸಭೆಗೆ ಕೊಡಗು ಜಿಲ್ಲೆಯ ನಾಗರಹೊಳೆ ನಾಣಚ್ಚಿ ಗೇಟ್ನಲ್ಲಿ ನಾಗರಹೊಳೆ ಆದಿವಾಸಿ ಜಮ್ಮಾಪಾಳೆ ಹಕ್ಕು ಸ್ಥಾಪನಾ ಸಮಿತಿ ಸದಸ್ಯರು ಸೋಮವಾರ ವಿರೋಧ ವ್ಯಕ್ತಪಡಿಸಿದರು.

‘ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ಶೃಂಗಸಭೆಯ ಆಹ್ವಾನ ಇಲ್ಲದ ಅತಿಥಿಗಳೆ ನೀವು ಯಾರು?’ ಹುಲಿ ಸಂರಕ್ಷಣೆಯ ಹೆಸರಿನಲ್ಲಿ ಆದಿವಾಸಿ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಿ, ‘ಕಾಡು, ಹುಲಿ ಮತ್ತು ಆದಿವಾಸಿ ಜನರ ಮೇಲೆ ನಡೆಯುತ್ತಿರುವ ಸಂರಕ್ಷಣೆಯ ಹಿಂಸೆ ನಿಲ್ಲಿಸಿ’ ಎಂಬುದು ಸೇರಿದಂತೆ ಅನೇಕ ಬರಹಗಳುಳ್ಳ ಭಿತ್ತಿಪತ್ರಗಳನ್ನು ಈ ವೇಳೆ ಪ್ರದರ್ಶಿಸಲಾಯಿತು.

ಕಾನೂನು ಪ್ರಕ್ರಿಯೆ ಪಾಲಿಸದೆ, ಗ್ರಾಮಸಭೆಗಳ ಒಪ್ಪಿಗೆ ಇಲ್ಲದೇ ಬಲವಂತವಾಗಿ ರಾಜೀವ್ಗಾಂಧಿ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ ಎಂದು ಅವರು ಆರೋಪಿಸಿದರು.

ನಾಗರಹೊಳೆ ಕಾಡುಗಳು ಜೇನುಕುರುಬ, ಬೆಟ್ಟಕುರುಬ, ಪಣಿಯ ಮತ್ತು ಯರವ ಸಮುದಾಯಗಳ ಪಾರಂಪರಿಕ ನೆಲೆಗಳಾಗಿವೆ ಎಂದು ಅವರು ಪ್ರತಿಪಾದಿಸಿದರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.