ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು: ಚಿರತೆ ದಾಳಿಗೆ ಹಸು ಬಲಿ; ಶಂಕೆ

Published 21 ಫೆಬ್ರುವರಿ 2024, 12:53 IST
Last Updated 21 ಫೆಬ್ರುವರಿ 2024, 12:53 IST
ಅಕ್ಷರ ಗಾತ್ರ

ನಾಪೋಕ್ಲು: ಸಮೀಪದ ಕೊಟ್ಟ ಮುಡಿಯಲ್ಲಿ ಹಸುವಿನ ಕಳೇಬರ ಪತ್ತೆಯಾಗಿದ್ದು ಚಿರತೆ ದಾಳಿಯಿಂದ ಹಸು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಕೊಟ್ಟ ಮುಡಿಯ ಕಾಳಪ್ಪ ಮಾಡು ಎಂಬಲ್ಲಿರುವ ಯುಸೂಫ್ ಹಾಜಿ ಎಂಬವರ ದನದ ಕೊಟ್ಟಿಗೆಯಲ್ಲಿ ಒಂದು ವಾರದಿಂದ ನಾಲ್ಕು ಹಸುಗಳು ಕಾಣೆಯಾಗಿವೆ.

ಹಸುಗಳ ಪತ್ತೆಗಾಗಿ ತೆರಳಿದ ಯುಸೂಫ್  ಚಿರತೆಯ ಹೆಜ್ಜೆ ಗುರುತುಗಳನ್ನು ಕಾವೇರಿ ನದಿ ತಟದಲ್ಲಿ ಗಮನಿಸಿದ್ದಾರೆ. ಒಂದು ಹಸುವಿನ ಕಳೇಬರ ಪತ್ತೆಯಾಗಿದೆ. ಮೇಯಲು ತೆರಳಿದ್ದ ಮತ್ತೊಂದು ಹಸುವಿನ ಶರೀರದಲ್ಲಿ ಗಾಯಗಳಾಗಿದ್ದು ಚಿರತೆ ದಾಳಿಯಿಂದ ಆಗಿರಬಹುದು ಎಂದು ಶಂಕಿಸಲಾಗಿದೆ.

ಸಮೀಪದಲ್ಲಿ ದೇವರ ಕಾಡಿದ್ದು ಅಲ್ಲಿಂದ ಚಿರತೆ ನಾಡಿನ ಕಡೆಗೆ ಬಂದಿರಬಹುದು ಎಂದು ಶಂಕೆ ಗ್ರಾಮಸ್ಥರಲ್ಲಿ ಮೂಡಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಗಾಯಗೊಂಡ ಹಸುವಿಗೆ ಪಶು ಇಲಾಖೆಯ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT