ಮಡಿಕೇರಿ: ಕೊಡಗು ವಿಶ್ವವಿದ್ಯಾಲಯವು ಸ್ನಾತಕೋತ್ತರ ಪದವಿಗಳ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿದ್ದು, ಪದವಿ ಮುಗಿಸಿದ ಅರ್ಹರು ಸ್ನಾತಕೋತ್ತರ, ಡಿಪ್ಲೋಮಾ. ಸರ್ಟಿಫಿಕೇಟ್ ಕೋರ್ಸ್ಗಳ ಪ್ರವೇಶ ಪಡೆಯಬಹುದು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ ಸಂಗಪ್ಪ ಆಲೂರ ತಿಳಿಸಿದರು.

ಈಗ ಚಿಕ್ಕಆಳುವಾರದ ಜ್ಞಾನ ಕಾವೇರಿ ಆವರಣ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು, ವಿರಾಜಪೇಟೆಯ ಸೆಂಟ್ ಆ್ಯನ್ಸ್ ಕಾಲೇಜು ಹಾಗೂ ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ಸ್ನಾತಕೋತ್ತರ ಕೋರ್ಸ್ಗಳಿಗೆ ಪ್ರವೇಶಾತಿ ಪಡೆಯಬಹುದು ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೌಶಲ ಕೋರ್ಸ್ಗಳನ್ನೂ ಪರಿಚಯಿಸಲಾಗುತ್ತಿದೆ. ಈಗ ಇಂಟೆಲ್ ಸಂಸ್ಥೆಯವರು ವಿವಿಧ ಕೌಶಲ ಕೋರ್ಸ್ಗಳಿಗೆ ತರಬೇತಿ ನೀಡಿದ್ದಾರೆ. ಕೌಶಲ ಕೋರ್ಸ್ಗಳಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯವು ಎನ್ಇಎಫ್, ಇನ್ಫೋಸಿಸ್, ಒರೆಕಲ್, ಇಂಟೆಲ್ ಸಂಸ್ಥೆಯವರೊಂದಿಗೆ ಈಗಾಗಲೇ ಒಡಂಬಡಿಕೆ ಮಾಡಿಕೊಂಡಿದೆ ಎಂದರು.

ಇಲ್ಲಿ ಅಧ್ಯಯನ ಮಾಡುವ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಉದ್ಯಮ ಸಂಸ್ಥೆಗಳ ಜೊತೆಗೂ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಈಗ ಸದ್ಯ 15 ಸ್ನಾತಕೋತ್ತರ ಕೋರ್ಸ್ಗಳಿಗೆ ಪ್ರವೇಶಾತಿ ಇದೆ. ಆದರೆ, 15 ವಿದ್ಯಾರ್ಥಿಗಳು ಯಾವುದಾದರೂ ಹೊಸ ಕೋರ್ಸ್ಗೆ ಸೇರಿದರೆ ಆ ಕೋರ್ಸ್ ಅನ್ನೂ ಆರಂಭಿಸಲಾಗುವುದು. ಕೊಡಗಿನಲ್ಲೇ ಸ್ನಾತಕೋತ್ತರ ಪದವಿ ಪಡೆಯುವ ಅವಕಾಶ ಇರುವುದರಿಂದ ಪದವಿ ಪಡೆದ ವಿದ್ಯಾರ್ಥಿಗಳು ಸೇರ್ಪಡೆಯಾಗಿ ಉನ್ನತ ಶಿಕ್ಷಣ ಪಡೆಯಬೇಕು ಎಂದು ಮನವಿ ಮಾಡಿದರು.

ಈಗ ಕೊಡಗು ವಿಶ್ವವಿದ್ಯಾಲಯದಲ್ಲಿ ಬೋಧಕರ ಕೊರತೆ ಇಲ್ಲ. ಬೋಧಕರಿಗೂ ಸಂಬಳ ವಿಳಂಬವಾಗುತ್ತಿಲ್ಲ. ಆರ್ಥಿಕ ಸಂಪನ್ಮೂಲಗಳ ಕ್ರೋಢೀಕರಣದಿಂದ ವಿಶ್ವವಿದ್ಯಾಲಯವು ಸುಸ್ಥಿತಿಯಲ್ಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕುಲಸಚಿವ ಸುರೇಶ್ ಮಾತನಾಡಿ, ‘ಕೊಡಗು ವಿಶ್ವವಿದ್ಯಾಲಯವು ರಾಜ್ಯ
ದಲ್ಲೇ ಅತ್ಯಂತ ಬೇಗ ಫಲಿತಾಂಶ ಪ್ರಕಟಿಸುವ ವಿಶ್ವವಿದ್ಯಾಲಯ ಎಂಬ ಮಾನ್ಯತೆಗೆ ಪಾತ್ರವಾಗಿದೆ.ವಿಶ್ವವಿದ್ಯಾಲಯ ಸುಪರ್ದಿಯಲ್ಲಿ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯವೂ ಇದೆ. ಪ್ರವೇಶಾತಿಗಾಗಿ ಸಹಾಯ ಕೇಂದ್ರವನ್ನೂ ಆರಂಭಿಸಲಾಗು
ತ್ತಿದೆ. ಉತ್ತಮ ಆಟದ ಮೈದಾನವನ್ನೂ ನಿರ್ಮಿಸಲಾಗುತ್ತಿದೆ. ವಿದ್ಯಾರ್ಥಿಗಳು ಇವುಗಳ ಸದುಪಯೋಗ ಪಡೆಯಬೇಕು’ ಎಂದು ಮನವಿ ಮಾಡಿದರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ರಾಘವ್, ಉಪನ್ಯಾಸಕ ರವಿಶಂಕರ್ ಭಾಗವಹಿಸಿದ್ದರು.

ಮಾಹಿತಿಗೆ www.kuk.karnataka.gov.in ನೋಡಬಹುದು. ಮೊಬೈಲ್ ಸಂಖ್ಯೆ 9035476889, 9845821071, 8088272689 ಸಂಪರ್ಕಿಸಬಹುದು

ಸ್ನಾತಕೋತ್ತರ ಕೋರ್ಸ್ಗಳ ವಿವರ

ಚಿಕ್ಕಅಳುವಾರದ ಜ್ಞಾನಕಾವೇರಿ ಆವರಣ: ವಿಜ್ಞಾನ ವಿಭಾಗ - ಎಂ.ಎಸ್ಸಿ: ಸೂಕ್ಷ್ಮಾಣು ಜೀವವಿಜ್ಞಾನ ಜೀವರಸಾಯನಶಾಸ್ತ್ರ ಯೋಗ ವಿಜ್ಞಾನ ರಸಾಯನಶಾಸ್ತ್ರ ಕಂಪ್ಯೂಟರ್ ವಿಜ್ಞಾನ ಸಸ್ಯಶಾಸ್ತ್ರ ಪರಿಸರ ವಿಜ್ಞಾನ.

ವಾಣಿಜ್ಯ ವಿಭಾಗ: ಎಂಕಾಂ.

ಕಲಾ ವಿಭಾಗ: ಎಂಎಸ್ಡಬ್ಲೂ ಕನ್ನಡ ರಾಜ್ಯಶಾಸ್ತ್ರ ಇತಿಹಾಸ ಕೊಡವ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಮತ್ತು ಯೋಗ ವಿಜ್ಞಾನ ವಿಭಾಗದಿಂದ ಪಿಜಿ ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್ಗಳು ಕೊಡವ ಪಿಜಿ ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್ಗಳು ಹೀಗೆ ಒಟ್ಟು 15 ಕೋರ್ಸುಗಳು ಲಭ್ಯವಿದೆ. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು:

ವಿಜ್ಞಾನ ವಿಭಾಗ - ಎಂ.ಎಸ್ಸಿ: ಭೌತಶಾಸ್ತ್ರ ಎಂಬಿಎ (ಟಿಟಿಎಂ) ಎಂಕಾಂ ಹಾಗೂ ಎಂ.ಎ (ಅರ್ಥಶಾಸ್ತ್ರ/ಇಂಗ್ಲೀಷ್/ಕೊಡವ) ಕೋರ್ಸ್ಗಳು ಲಭ್ಯವಿವೆ.

ಕೊಡಗಿನಲ್ಲಿ ಉನ್ನತ ಶಿಕ್ಷಣದ ಪ್ರಮಾಣ ಶೇ 18 ಮಾತ್ರ!

ರಾಜ್ಯದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಶೇ 33 ಇದ್ದರೆ ಕೊಡಗಿನಲ್ಲಿ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಶೇ 18 ಮಾತ್ರ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ ಸಂಗಪ್ಪ ಆಲೂರ ತಿಳಿಸಿದರು. ಕೊಡಗು ವಿಶ್ವವಿದ್ಯಾಲಯ ಆರಂಭವಾದ ನಂತರ ಈಗ ಇಲ್ಲಿಯೇ ಉನ್ನತ ಶಿಕ್ಷಣ ಲಭ್ಯವಿದೆ. ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಈಗ ಅವಕಾಶ ಇದೆ. ಇದನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.