ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೇ ತಿಂಗಳಿನಲ್ಲಿ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿ

Published : 10 ಫೆಬ್ರುವರಿ 2024, 7:31 IST
Last Updated : 10 ಫೆಬ್ರುವರಿ 2024, 7:31 IST
ಫಾಲೋ ಮಾಡಿ
Comments

ಮಡಿಕೇರಿ: ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಕೊಡವ ಯುವಕರಿಗೆ ಸೀಮಿತವಾಗಿ ಮೊದಲ ವರ್ಷದ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್-1 ಲೆದರ್ ಬಾಲ್ ಪಂದ್ಯಾವಳಿ ಮೇ ತಿಂಗಳ ಮೊದಲ ವಾರದಲ್ಲಿ ಇಲ್ಲಿನ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 20 ದಿನಗಳ ಕಾಲ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕ ಪೊರುಕೊಂಡ ಸುನಿಲ್ ತಿಳಿಸಿದರು.

14 ವರ್ಷ ತುಂಬಿದ ಆಟಗಾರರಿಗೆ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವಿಜೇತರಿಗೆ ಮೊದಲ ಬಹುಮಾನವಾಗಿ ₹ 1.50 ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನವಾಗಿ ₹ 75 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಲೀಗ್ ಮಾದರಿಯಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಒಟ್ಟು ಹತ್ತು ಫ್ರೆಂಚೈಸಿಗಳು ಇರಲಿದ್ದಾರೆ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪಂದ್ಯಾವಳಿಯ ಫ್ರೆಂಚೈಸಿಗಳಾಗಿ ಅವರೆಮಾದಂಡ ಶರಣ್ ಪೂಣಚ್ಚ, ಮಾದಂಡ ತಿಮ್ಮಯ್ಯ, ಬೊಪ್ಪಂಡ ಸೂರಾಜ್, ಮುಂಡ್ಯೋಳಂಡ ನಂದಾ ನಾಣಯ್ಯ, ಚೆಟ್ಟಿಯರಂಡ ನಿರನ್, ಕೋಟೇರ ಸುನಿಲ್, ಪಾಲಚಂಡ ಜಗನ್ ಉತ್ತಪ್ಪ, ಪರವಂಡ ಹೇಮಂತ್, ಪರವಂಡ ಮಿಥುನ್, ಬಾಚೆಟ್ಟಿರ ತೇಜಸ್ವಿ ತಿಮ್ಮಯ್ಯ, ತ್ಯಾಗಿ, ಹಂಚೆಟ್ಟಿರ ಶಿಪ್ರಜ್ ಸೋಮಣ್ಣ ಸಹಕಾರ ನೀಡಿದ್ದಾರೆ ಎಂದು ಹೇಳಿದರು.

ಚೇರಂಡ ಕಿಶನ್ ಮಾದಪ್ಪ, ಬಲ್ಯಾಟಂಡ ಕಾವೇರ್ ಪೂಣಚ್ಚ ಜಿಲ್ಲೆಯ ಶಾಸಕದ್ವಯರ ಸಹಕಾರ, ಪ್ರೋತ್ಸಾಹ ಕ್ರಿಕೆಟ್ ಪಂದ್ಯಾವಳಿಗೆ ಇದೆ ಎಂದರು.

ನಿರ್ದೇಶಕ ಮಡ್ಲಂಡ ದರ್ಶನ್ ಮಾತನಾಡಿ, ‘ಪಂದ್ಯಾವಳಿಯ ಅರ್ಜಿ ಶುಲ್ಕ ₹ 500 ಆಗಿದ್ದು, ಬಿಡ್ಡಿಂಗ್ ಪ್ರಕ್ರಿಯೆ ಮಾರ್ಚ್ ತಿಂಗಳಿನಲ್ಲಿ ನಡೆಯಲಿದೆ. ಆಟಗಾರರು ಮಾರ್ಚ್ 15 ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಆಸಕ್ತ ಆಟಗಾರರು ಮಡ್ಲಂಡ ದರ್ಶನ್ 7204702325, ಚರ್ಮಂದಂಡ ಡಾ.ಸೋಮಣ್ಣ 9980599861 ನ್ನು ಸಂಪರ್ಕಿಸಬಹುದು ಎಂದರು.

ಸಹ ಸಂಚಾಲಕ ಚಂಡೀರ ರಚನ್ ಚಿಣ್ಣಪ್ಪ ಮಾತನಾಡಿ, ‘ಕೊಡವ ಯುವಕರ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ’ ಎಂದು ಹೇಳಿದರು.

ನಿರ್ದೇಶಕರಾದ ಚರ್ಮಂದಂಡ ಡಾ.ಸೋಮಣ್ಣ ಹಾಗೂ ಪಾಲಚಂಡ ಜಗನ್ ಉತ್ತಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT