ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾತೃಭಾಷೆ, ಸಂಸ್ಕೃತಿ ಅವಸಾನದತ್ತ: ಬಾಚರಣಿಯಂಡ ರಾಣು ಅಪ್ಪಣ್ಣ ಬೇಸರ

Published 25 ನವೆಂಬರ್ 2023, 6:13 IST
Last Updated 25 ನವೆಂಬರ್ 2023, 6:13 IST
ಅಕ್ಷರ ಗಾತ್ರ

ಮಡಿಕೇರಿ: ಮಾತೃಭಾಷೆ, ಪದ್ಧತಿ, ಪರಂಪರೆ, ಭೂಮಿ, ಐನ್‌ಮನೆಗಳು ಅವಸಾನದತ್ತ ಸಾಗುತ್ತಿವೆ ಎಂದು ಪೊಮ್ಮಕ್ಕಡ ಪರಿಷತ್ತಿನ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಶುಕ್ರವಾರ ವಿರಾಜಪೇಟೆ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್, ಕೊಡವ ಎಂ.ಎ.ಸ್ನಾತಕೋತ್ತರ ವಿಭಾಗ, ಎಫ್‌ಎಂಸಿ ಕಾಲೇಜು ಮತ್ತು ಕೊಡವ ಮಕ್ಕಡ ಕೂಟದ ವತಿಯಿಂದ ನಡೆದ ವಿಚಾರ ಮಂಡನೆ, ಸನ್ಮಾನ ಹಾಗೂ ‘ನಾಡ ಕೊಡಗ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಂದೆಡೆ ಪೋಷಕರು ಇಂಗ್ಲಿಷ್‌ ಭಾಷಾ ಮಾಧ್ಯಮದ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿ, ಮಾತೃಭಾಷೆಯನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಮತ್ತೊಂದೆಡೆ ವಿವಿಧ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಪದ್ಧತಿ ಪರಂಪರೆಯನ್ನೆ ಕೆಲವರು ಮರೆಯುತ್ತಿದ್ದಾರೆ. ಮತ್ತೆ ಕೆಲವರು ತಮ್ಮ ನೆಲವನ್ನು ಇತರರಿಗೆ ಮಾರಾಟ ಮಾಡಿ ಮಣ್ಣಿನ ಸಂಬಂಧವನ್ನು ಕಳೆದುಕೊಳ್ಳುತ್ತಿದ್ದಾರೆ, ಸಾಮಾಜಿಕ ಕಟ್ಟುಪಾಡುಗಳು ಸಡಿಲಗೊಂಡು ಐನ್‍ಮನೆಗಳೂ ನಾಶವಾಗುತ್ತಿವೆ ಎಂದು ಹೇಳಿದರು.

ನಮ್ಮ ನೆಲ, ಸಂಸ್ಕೃತಿಯನ್ನು ಬಿಟ್ಟು ವಿದೇಶಿಗರ ಸಂಸ್ಕೃತಿಗೆ ಮಾರು ಹೋಗುತ್ತಿರುವುದು, ವಿದೇಶಗಳಿಗೆ ತೆರಳುತ್ತಿರುವುದು ನಮ್ಮ ಸಂಸ್ಕೃತಿಯ ನಾಶಕ್ಕೆ ಮುಖ್ಯ ಕಾರಣ ಎನಿಸಿದೆ ಎಂದು ಅವರು ವಿಶ್ಲೇಷಿಸಿದರು.

ಕೊಡವ ಸಂಸ್ಕೃತಿ ಜಗ ಮೆಚ್ಚಿದ ಸಂಸ್ಕೃತಿ, ಅದನ್ನು ರಕ್ಷಣೆ ಮಾಡಿ ಮುಂದಿನ ಯುವ ಪೀಳಿಗೆಗೆ ಉಳಿಸಬೇಕು. ಬಾಲ್ಯದಿಂದಲೇ ತಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಮಾತನಾಡಿ, ‘ಒಂದೆಡೆ ಸಾಹಿತ್ಯ ಕ್ಷೇತ್ರ ಬೆಳೆಯುತ್ತಿದ್ದು, ಬರಹಗಾರರ ಸಂಖ್ಯೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ.ರಾಘವ ಬಿ. ಮಾತನಾಡಿ, ‘ವಿದ್ಯಾರ್ಥಿಗಳು ಮೊಬೈಲ್ ಗಳನ್ನು ಬಿಟ್ಟು ಓದಿನೆಡೆಗೆ ಹೆಚ್ಚು ಆಸಕ್ತಿ ವಹಿಸಬೇಕು’ ಎಂದರು. 

ಕೊಡವ ಎಂ.ಎ.ವಿದ್ಯಾರ್ಥಿ ಐಚಂಡ ರಶ್ಮಿ ಮೇದಪ್ಪ ‘ನಂಗಡ ಮಕ್ಕಳ ಸಂಸ್ಕಾರವಂತಂಗಳಾಯಿತ್ ಬೊಳ್ತುವಲ್ಲಿ ಅವ್ವಂಗಡ ಪಾತ್ರ’ ಎಂಬ ವಿಷಯದ ಕುರಿತು ವಿಚಾರ ಮಂಡನೆ ಮಾಡಿದರು. ಲೇಖಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರ ‘ನಾಡ ಕೊಡಗ್’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಕೊಡವ ಎಂ.ಎ ವಿದ್ಯಾರ್ಥಿಗಳಾದ ಬೊಪ್ಪಂಡ ಶ್ಯಾಮ್ ಪೂಣಚ್ಚ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಐಚಂಡ ರಶ್ಮಿ ಮೇದಪ್ಪ, ಪುತ್ತರಿರ ವನಿತಾ ಮುತ್ತಪ್ಪ, ಬೊಳ್ಳಾರ್‍ಪಂಡ ಎನ್.ಹೇಮಾವತಿ (ಜಾನ್ಸಿ), ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಚೌಂಡಿರ ಶಿಲ್ಪ ಪೊನ್ನಪ್ಪ, ಬೊಳ್ಳಜಿರ ಯಮುನಾ ಅಯ್ಯಪ್ಪ, ಕರವಂಡ ಸೀಮಾ ಗಣಪತಿ ಅವರನ್ನು  ಸನ್ಮಾನಿಸಲಾಯಿತು. ಕರವಂಡ ಪದ್ಮಿತಾ ತಂಗಮ್ಮ, ಕರವಂಡ ಕಲ್ಪಿತ ಮುತ್ತಮ್ಮ ನ್ಯತ್ಯ ಪ್ರದರ್ಶಿಸಿ ಗಮನ ಸೆಳೆದರು. ಕೊನೆಯಲ್ಲಿ ಆಶುಭಾಷಣ ಸ್ಪರ್ಧೆ ನಡೆಯಿತು. 

ಕೊಡವ ಎಂ.ಎ ವಿಭಾಗದ ಸಂಯೋಜಕ ಮೇಚಿರ ರವಿಶಂಕರ್ ನಾಣಯ್ಯ, ಪುಸ್ತಕದ ಲೇಖಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಉಪಾಧ್ಯಕ್ಷೆ ಪೂವಿ ಮುತ್ತಪ್ಪ, ಖಜಾಂಚಿ ಮೂವೇರ ಧರಣಿ ಗಣಪತಿ, ಎಂ.ಎ ವಿದ್ಯಾರ್ಥಿಗಳಾದ ಚಿಯಕ್‍ಪೂವಂಡ ಶ್ವೇತನ್ ಚೆಂಗಪ್ಪ, ಕರವಂಡ ಸೀಮಾ ಗಣಪತಿ, ಬೊಳ್ಳಜಿರ ಯಮುನಾ ಅಯ್ಯಪ್ಪ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ನಿರ್ದೇಶಕಿ ತಿತೀರ ಊರ್ಮಿಳಾ ಸೋಮಯ್, ಬೊಪ್ಪಂಡ ಶ್ಯಾಮ್ ಪೂಣಚ್ಚ ಇದ್ದರು.

ಸಮಾರಂಭದಲ್ಲಿ ಚೌಂಡಿರ ಶಿಲ್ಪ ಪೊನ್ನಪ್ಪ ಬೊಳ್ಳಾರ್‍ಪಂಡ ಎನ್.ಹೇಮಾವತಿ (ಜಾನ್ಸಿ) ಬೊಳ್ಳಜಿರ ಯಮುನಾ ಅಯ್ಯಪ್ಪ ಬೊಳ್ಳಜಿರ ಬಿ.ಅಯ್ಯಪ್ಪ ಬೊಪ್ಪಂಡ ಶ್ಯಾಮ್ ಪೂಣಚ್ಚ ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ ಐಚಂಡ ರಶ್ಮಿ ಮೇದಪ್ಪ ಪುತ್ತರಿರ ವನಿತಾ ಮುತ್ತಪ್ಪ ಕರವಂಡ ಸೀಮಾ ಗಣಪತಿ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಚೌಂಡಿರ ಶಿಲ್ಪ ಪೊನ್ನಪ್ಪ ಬೊಳ್ಳಾರ್‍ಪಂಡ ಎನ್.ಹೇಮಾವತಿ (ಜಾನ್ಸಿ) ಬೊಳ್ಳಜಿರ ಯಮುನಾ ಅಯ್ಯಪ್ಪ ಬೊಳ್ಳಜಿರ ಬಿ.ಅಯ್ಯಪ್ಪ ಬೊಪ್ಪಂಡ ಶ್ಯಾಮ್ ಪೂಣಚ್ಚ ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ ಐಚಂಡ ರಶ್ಮಿ ಮೇದಪ್ಪ ಪುತ್ತರಿರ ವನಿತಾ ಮುತ್ತಪ್ಪ ಕರವಂಡ ಸೀಮಾ ಗಣಪತಿ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT