ಸುಂಟಿಕೊಪ್ಪ: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಸುಂಟಿಕೊಪ್ಪ ಕನ್ನಡ ವೃತ್ತದಲ್ಲಿ ಭಾನುವಾರ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಹಾಗೂ ‘ಕೊಡವ ಲ್ಯಾಂಡ್’ ಹಕ್ಕೊತ್ತಾಯಕ್ಕಾಗಿ ಮಾನವ ಸರಪಳಿ ನಿರ್ಮಿಸಲಾಯಿತು.

ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯಿಂದ ಕೊಡವ ಲ್ಯಾಂಡ್‌ಗೆ ಅಪಾಯ ಎದುರಾಗಿದ್ದು, ಕಪ್ಪು ಹಣದಿಂದ ನಿರ್ಮಾಣಗೊಂಡಿರುವ ರೆಸಾರ್ಟ್, ವಿಲ್ಲಾ ಟೌನ್ ಶಿಪ್‌ಗಳನ್ನು ತಕ್ಷಣ ತೆರವುಗೊಳಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಇದೇ ವೇಳೆ ಒತ್ತಾಯಿಸಿದ್ದಾರೆ.

‘ಕೊಡವರು ಯಾವುದೇ ಕಾರಣಕ್ಕಾಗಿಯೂ ಭೂಮಿಯನ್ನು ಮಾರಾಟ ಮಾಡಬಾರದು. ಕೊಡಗಿನ ನೆಲ ಜಲ ಸಂಸ್ಕೃತಿಯನ್ನು ಕೊಡವರು ಉಳಿಸಲು ಪಣ ತೊಡಬೇಕು. ಭೂಮಾಫಿಯದಿಂದ ಕೊಡವರ ಭೂಮಿ ಪರಭಾರೆಯಾಗುತ್ತಿದೆ. ಇದನ್ನು ತಡೆಗಟ್ಟಬೇಕು’ ಎಂದು ಆಗ್ರಹಿಸಿದರು.

ಸಿಎನ್‍ಸಿ ವತಿಯಿಂದ ಆ. 20ರಂದು ಕುಟ್ಟದಲ್ಲಿ, ಆ. 29 ಮೂರ್ನಾಡು, ಸೆ. 9 ನಾಪೋಕ್ಲು ಹಾಗೂ ಸೆ. 10ರಂದು ಚೇರಂಬಾಣೆಯಲ್ಲಿ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.

ಸುಂಟಿಕೊಪ್ಪದ ಹಿರಿಯ ಮುಖಂಡ ಎಂ.ಎ.ವಸಂತ ಅವರು ಮಾತನಾಡಿದರು.

ಸಿಎನ್‌ಸಿ ಸದಸ್ಯರಾದ ಪಿ.ಕೆ.ಮುತ್ತಣ್ಣ, ಬೊಟ್ಟೋಳಂಡ ಕುಮಾರ ಉತ್ತಪ್ಪ, ಚಿಕ್ಕಂಡ ಉತ್ತಪ್ಪ, ಚಿಕ್ಕಂಡ ಪೊನ್ನಪ್ಪ, ದಾಸಂಡ ಕಿರಣ್, ಶಿವು ಉತ್ತಯ್ಯ, ನಾಗಚೇಟ್ಟಿರ ಮನುಮಂದಣ್ಣ, ನಾಗಚೇಟ್ಟಿರ ನಂದ, ಕೇಚೀರ ಬಾಗೇಶ್, ಕೇಚೀರ ಪ್ರಿನ್ಸ್, ಕಲ್‌ಮಾಡಂಡ ಸುರೇಶ್, ಕಂಜಿತಂಡ ಐಯ್ಯಣ್ಣ, ದಾಸಂಡ ಜಗದೀಶ್, ಪುಲಿಯಂಡ ಮುತ್ತಣ್ಣ, ರಂಜೀತ್ ಕಾರ್ಯಪ್ಪ, ಕಾಯಪಂಡ ತಮ್ಮಯ್ಯ ಸೇರಿದಂತೆ ವಿವಿಧೆಡೆಗಳಿಂದ ಕೊಡವ ಜನಾಂಗದವರು ಬಂದಿದ್ದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ರಸ್ತೆ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು. ಭಾನುವಾರವಾದ್ದರಿಂದ ಸಂತೆಯೂ ಇತ್ತು. ಪ್ರವಾಸಿಗರ ವಾಹನಗಳು ಅಧಿಕವಾಗಿದ್ದವು. ಇದರಿಂದ ಸಂಚಾರದಟ್ಟಣೆ ಉಂಟಾಯಿತು.

ಬಳಿಕ, ಸಬ್‌ಇನ್‌ಸ್ಪೆಕ್ಟರ್‌ಗಳಾದ ಚಂದ್ರಶೇಖರ್ ಹಾಗೂ ಭಾರತಿ ಸಂಚಾರ ದಟ್ಟಣೆಯನ್ನು ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.