ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಮುಖ್ಯ: ಪಿಎಸ್ಐ ಚಂದ್ರಶೇಖರ್

Published : 2 ಅಕ್ಟೋಬರ್ 2024, 14:24 IST
Last Updated : 2 ಅಕ್ಟೋಬರ್ 2024, 14:24 IST
ಫಾಲೋ ಮಾಡಿ
Comments

ಸುಂಟಿಕೊಪ್ಪ: ‘ಭಾರತದಿಂದ ವಿದೇಶಕ್ಕೆ ತೆರಳಬೇಕಾದರೆ ಕಾನೂನುಬದ್ಧ ಮೂಲ ದಾಖಲೆಗಳ ಅವಶ್ಯಕತೆ ಇದ್ದು, ಅದನ್ನು ಪರಿಶೀಲನೆ ನಡೆಸಿ ತಿರಸ್ಕರಿಸುವ ಮತ್ತು ಒಪ್ಪಿಕೊಳ್ಳುವ ಅಧಿಕಾರ ಪೊಲೀಸ್ ಇಲಾಖೆಗೆ ಸೇರಿದೆ’ ಎಂದು ಸುಂಟಿಕೊಪ್ಪ ಪೊಲೀಸ್ ಠಾಣೆ ಪಿಎಸ್ಐ ಚಂದ್ರಶೇಖರ್ ಹೇಳಿದರು.

ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಮಾದಾಪುರ ಡಿ‌.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಿಂದ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ‘ಪೊಲೀಸ್ ನಮ್ಮ ಸ್ನೇಹಿತ’ ಎಂಬ ವಿಷಯ ಕುರಿತು ಮಾತನಾಡಿದರು.

‘ವ್ಯಕ್ತಿಯ ಪಾಸ್‌ಪೋರ್ಟ್ ಪರಿಶೀಲನೆಗೆ ಬಂದಾಗ ಆತ ಯಾವುದಾದರೂ ಪ್ರಕರಣಗಳಲ್ಲಿ ಶಾಮೀಲಾಗಿದ್ದರೆ ಯಾವುದೇ ಪ್ರಭಾವಿಗಳ ಒತ್ತಡವಿದ್ದರೂ ಅದನ್ನು ಪುರಸ್ಕರಿಸಲು ಸಾಧ್ಯವಿಲ್ಲ. ಹಾಗಾಗಿ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗದಂತೆ ನೋಡಿಕೊಳ್ಳಬೇಕು’ ಎಂದರು.

‘ಕಾಲೇಜಿನಲ್ಲಿ ಗುರುಗಳು ಕಲಿಸಿದ ಪಾಠವು ಔಪಚಾರಿಕವಾಗಿದ್ದರೆ, ನಾವು ಪರಿಸರದಲ್ಲಿ ಕಂಡುಕೊಳ್ಳುವ
ಹಲವು ಘಟನೆಗಳು ಅನೌಪಚಾರಿಕ ಶಿಕ್ಷಣವಾಗಿದೆ. ಕಾನೂನಿನ ಮಾರ್ಗದಲ್ಲಿ ಬದುಕು ಸಾಧಿಸಬೇಕು. ರಸ್ತೆ ದಾಟುವಾಗ, ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಕಾನೂನು ಪಾಲನೆ ಮಾಡಬೇಕು. ಪೊಲೀಸರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡರೆ‌ ಸ್ನೇಹಿತರಂತೆ ಕಾಣುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT