ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್‌ ವಂಚಿತರ ಅಸಮಾಧಾನ ಸರಿಪಡಿಸಲು ನಾಯಕರು ಮುಂದಾಗಿದ್ದಾರೆ: ಸುರೇಶ್ ಕುಮಾರ್

Published 14 ಮಾರ್ಚ್ 2024, 9:56 IST
Last Updated 14 ಮಾರ್ಚ್ 2024, 9:56 IST
ಅಕ್ಷರ ಗಾತ್ರ

ಮಡಿಕೇರಿ: ಬಿಜೆಪಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಸಹಜವಾಗಿ ಟಿಕೆಟ್ ವಂಚಿತರು ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ. ಅಸಮಾಧಾನವನ್ನು ಹೋಗಲಾಡಿಸಲು ಈಗಾಗಲೇ ನಮ್ಮ ನಾಯಕರು ಮುಂದಾಗಿದ್ದಾರೆ ಎಂದು ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ತಿಳಿಸಿದರು.

ಈಶ್ವರಪ್ಪ ಅವರಿಗೆ ಪಕ್ಷದಲ್ಲಿ ಜವಬ್ದಾರಿಯುತ ಸ್ಥಾನ ಇದೆ‌. ಅವರು ಕೂಡ ತಮ್ಮ ವೇದನೆ ಹೇಳಿಕೊಂಡಿದ್ದಾರೆ. ಅದನ್ನೂ ಕೂಡ ನಮ್ಮ ನಾಯರು ಸರಿಪಡಿಸುತ್ತಾರೆ ಎಂದು ಅವರು ಇಲ್ಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ನಳಿನ್ ಕುಮಾರ್ ಕಟೀಲ್ ಹಾಗೂ ಪ್ರತಾಪ್ ಸಿಂಹ ಹೇಳಿಕೆ ನಮಗೆ ಖುಷಿ ಕೊಟ್ಟಿದೆ.

ಮೂರನೇ ಬಾರಿಗೆ ಕಮಲ‌ ಅರಳಬೇಕು, ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂಬ ಗುರಿ ನಮ್ಮದು ಎಂದು ಅವರು ಹೇಳಿದರು.

ಬಿಜೆಪಿಯಲ್ಲಿ ಒಕ್ಕಲಿಗರಿಗೆ ಸ್ಥಾನ ಇಲ್ಲ ಎಂದು ಕೆಲವರು ಆರೋಪ ಮಾಡುತ್ತಾರೆ. ಆದರೆ ಅದು ಸುಳ್ಳು. ಬಿಜೆಪಿ ಬಗ್ಗೆ ಆರೋಪ ಮಾಡುವ ದೊಡ್ಡದೊಂದು ಫ್ಯಾಕ್ಟರಿಯೇ ಇದೆ‌. ಅದರ ಕೆಲಸ ಕೇವಲ ಹುಸಿ ಆರೋಪಗಳನ್ನು ಮಾಡುವುದಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT