ಭಾನುವಾರ, ಮೇ 16, 2021
23 °C
ಕುತೂಹಲ ಮೂಡಿದ ಅಬ್ಯರ್ಥಿಗಳ ಆಯ್ಕೆ

ಮಡಿಕೇರಿ ನಗರಸಭೆ ಚುನಾವಣೆ: ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಅಭ್ಯರ್ಥಿ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಮಡಿಕೇರಿ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಒಂದು ದಿನವಷ್ಟೇ ಬಾಕಿಯಿರುವಾಗ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ತಮ್ಮ ಪಕ್ಷ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ಮಡಿಕೇರಿ ನಗರಸಭಾ ಚುನಾವಣೆಗೆ 23 ವಾರ್ಡ್‍ಗಳ ಪೈಕಿ 22 ವಾರ್ಡ್‍ಗಳಿಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ.

ವಾರ್ಡ್ ಸಂಖ್ಯೆ ಒಂದರಿಂದ ಎನ್. ಪ್ರೇಮ, 2ನೇ ವಾರ್ಡ್‍ನಿಂದ ಮೋಹನ್, 3 ಕೆ.ವೈ.ಸಾಲಿ, 4 ಮಹಮ್ಮದ್ ಯೂಸುಫ್, 5 ವಾರ್ಡ್‌ನಿಂದ ಎಚ್.ಎಂ.ನಂದಕುಮಾರ್, 6ಕ್ಕೆ ಎ.ಜಿ.ರಮೇಶ್, 7ನೇ ವಾರ್ಡ್‌ ಪ್ರಭು ರೈ, 8ನೇ ವಾರ್ಡಿನಿಂದ ಮುಮ್ತಾಜ್ ಬೇಗಂ, 9ಕ್ಕೆ ಶಶಿ, 10ನೇ ವಾರ್ಡ್‌ಗೆ ಅಬ್ದುಲ್ ರಜಾಕ್, 11ಕ್ಕೆ ಫರ್ಜಾನ, 12ಕ್ಕೆ ಮುನೀರ್ ಅಹಮ್ಮದ್, 13ಕ್ಕೆ ಕಾವೇರಮ್ಮ ಸೋಮಣ್ಣ, 14 – ಡಿ.ಕೆ.ಕುಸುಮಾ, 15 ಸ್ವರ್ಣಲತಾ, 16 ಬಿ.ವೈ.ರಾಜೇಶ್, 17 ಎ.ಸಿ.ದೇವಯ್ಯ, 18 ಪ್ರಕಾಶ್ ಆಚಾರ್ಯ, 20 ಲಿಲ್ಲಿ, 21 ಜುಲೇಕಾಬಿ, 22 ಮಿನಾಜ್ ಪ್ರವೀಣ್ ಹಾಗೂ 23ನೇ ವಾರ್ಡ್‍ನಿಂದ ಶಿಲ್ಪಾರಾಣಿ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿಗಳು: ಬಿಜೆಪಿಯು 23 ವಾರ್ಡ್‌ಗಳ ಪೈಕಿ 21 ವಾರ್ಡ್‌ಗೆ ಅಭ್ಯರ್ಥಿ ಆಯ್ಕೆ ಮಾಡಿದೆ. 7 ಮತ್ತು 17ನೇ ವಾಡ್೯ ಹೊರತು ಪಡಿಸಿ ಉಳಿದ 21 ವಾಡ್೯ಗಳಿಗೆ ಅಭ್ಯಥಿ೯ಗಳ ಆಯ್ಕೆಯಾಗಿದೆ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿದೆ.

ಅಭ್ಯಥಿ೯ಗಳ ವಿವರ - ವಾರ್ಡ್‌ 1 - ಚಿತ್ರಾವತಿ, 2- ಮಹೇಶ್ ಜೈನಿ, 3- ಕವಿತಾ, 4- ದೀಪು, 5 - ಎಸ್.ಸಿ.ಸತೀಶ್, 6 - ಕೆ.ಎಸ್.ರಮೇಶ್, 8 - ಸವಿತಾ ರಾಕೇಶ್, 9- ಕಲಾವತಿ, ವಾರ್ಡ್‌ 10 - ಬಿ.ಕೆ.ಜಗದೀಶ್, 11 - ಶಿವಕುಮಾರಿ , 12- ಬಿ.ಎಂ.ರಾಜೇಶ್, 13- ಮಂಜುಳಾ, 14- ಉಷಾಕುಮಾರಿ, 15- ಚಂದ್ರ ಓಂಕಾರ್, 16- ಕವನ್ ಕಾವೇರಪ್ಪ, 18- ಉಮೇಶ್ ಸುಬ್ರಹ್ಮಣಿ, 19- ಕೆ.ಎಂ.ಅಪ್ಪಣ್ಣ, 20 - ಅನಿತಾ ಪೂವಯ್ಯ, 21- ಶ್ವೇತಾ ಪ್ರಶಾಂತ್, 22 - ಸಬಿತಾ, 23- ಶಾರದಾ ನಾಗರಾಜ್.

ಜೆಡಿಎಸ್ ಅಭ್ಯರ್ಥಿಗಳು: ಅಭ್ಯಥಿ೯ಗಳ ವಿವರ -1 - ಅನಿತಾ, 2- ಲೀಲಾ ಶೇಷಮ್ಮ, 4- ಕಲೀಲ್ ಭಾದಷಾ, 5- ರವಿಕುಮಾರ್ ಎಚ್.ಎ., 8- ಆಯಿಷಾ ಅಶ್ರಫ್, 9- ಸಲ್ಮಾ ಖಾನ್, 10- ಮುಸ್ತಫ ಎಂ.ಎ., 11 - ರಾಜೇಶ್ವರಿ, 12- ನಿಸಾರ್ ಅಹಮ್ಮದ್, 14- ಮೀನಾಕ್ಷಿ ಗಣೇಶ್, 16- ಕೆ.ಎ.ಮ್ಯಾಥ್ಯು, 17- ಅಜಿತ್ ಕುಮಾರ್, 18- ಎಂ.ಸಿ.ಸುನೀಲ್, 20- ರಶ್ಮಿ ಪ್ರಭಾಕರ್, 21- ಬಿ.ಎಸ್.ಪ್ರಥ್ಯುಷ, 22 - ಬಬಿತಾ, 23- ಪ್ರತಿಮಾ.
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು