ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ ವೈನ್‌ಮೇಳದಲ್ಲಿ ಗಮನ ಸೆಳೆಯುತ್ತಿವೆ ರೈತಮಿತ್ರ ಕೋವಿ

Last Updated 5 ಫೆಬ್ರುವರಿ 2023, 13:08 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಗಾಂಧಿ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ತೋಟಗಾರಿಕಾ ಇಲಾಖೆ ಆಯೋಜಿಸಿರುವ ವೈನ್‌ಮೇಳದಲ್ಲಿ ರೈತಮಿತ್ರ ಕೋವಿ ಗಮನ ಸೆಳೆಯುತ್ತಿವೆ.

ಇದನ್ನು ರೂಪಿಸಿರುವ ಪುತ್ತೂರಿನ ಪಾಂಡುರಂಗಭಟ್ಟ ಅವರು ಈ ಕೋವಿಯಿಂದ ಪಟಾಕಿ ಹಾರಿಸುವ ಮೂಲಕ ವನ್ಯಜೀವಿಗಳನ್ನು ಸುಲಭವಾಗಿ ಓಡಿಸಬಹುದು ಎಂದು ಹೇಳುತ್ತಾರೆ.

ಮಂಗಗಳು, ಹುಲಿ, ಚಿರತೆ, ಕರಡಿ, ಕಾಡಾನೆ ಸೇರಿದಂತೆ ಯಾವುದೇ ಬಗೆಯ ವನ್ಯಜೀವಿಗಳು ಎದುರಾದಾಗ, ತೋಟಗಳಿಗೆ ನುಗ್ಗಿದಾಗ ಈ ಕೋವಿಯ ಒಳಗೆ ಪಟಾಕಿ ಇಟ್ಟು, ಬಿರಡೆ ಹಾಕಿ ಬತ್ತಿ ಹೊತ್ತಿಸಬೇಕು. ಅದಕ್ಕೂ ಮುಂಚೆ ಕೋವಿಯ ನಳಿಕೆಯ ಒಳಗೆ 20ರಿಂದ 25 ಸಣ್ಣ ಗಾತ್ರದ ಕಲ್ಲುಗಳನ್ನು ತುಂಬಿರಬೇಕು. ಬತ್ತಿ ಹೊತ್ತಿಸುತ್ತಿದ್ದಂತೆ ಪಟಾಕಿ ಸಿಡಿದು ನಳಿಕೆಯ ಮೂಲಕ ಹೊಗೆ ರಭಸದಿಂದ ಹೊರಕ್ಕೆ ಬರುತ್ತದೆ. ಆಗ ನಳಿಕೆಯಲ್ಲಿ ತುಂಬಿರುವ ಕಲ್ಲುಗಳೂ ದೂರಕ್ಕೆ ಸಿಡಿಯುತ್ತವೆ.

ಈ ಕೋವಿಯಿಂದ ವನ್ಯಜೀವಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ, ಬಳಸುವವರಿಗೂ ಹಾನಿಯಾಗುವುದಿಲ್ಲ. ಅತ್ಯಂತ ಸುರಕ್ಷಿತವಾದ ಸಾಧನ ಇದಾಗಿದ್ದು, ವನ್ಯಜೀವಿಗಳನ್ನು ಕೊಲ್ಲದೇ ಓಡಿಸಲು ಬಳಸಬಹುದು ಎಂದು ಪಾಂಡುರಂಗಭಟ್ಟ ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT