ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಬರೆ: ಮತ್ತೆ ಆತಂಕ

Last Updated 20 ಜುಲೈ 2021, 4:47 IST
ಅಕ್ಷರ ಗಾತ್ರ

ಸುಂಟಿಕೊಪ್ಪ: 2018ರಲ್ಲಿ ಪ್ರಕೃತಿ ವಿಕೋಪದಿಂದ ಸಂಭವಿಸಿದ್ದ ಬೆಟ್ಟ ಕುಸಿತದ ಭೀತಿಯು ಈ ಬಾರಿಯೂ ಪುನರಾವರ್ತನೆಯ ಸೂಚನೆ ಮತ್ತೊಮ್ಮೆ ಗೋಚರಿಸಿದೆ.

ಕಳೆದ 10 ದಿನಗಳಿಂದ ಮಕ್ಕಂದೂರು ಗ್ರಾಮದಲ್ಲಿ ಧಾರಾಕಾ ರವಾಗಿ ಮಳೆ ಸುರಿಯುತ್ತಿರುವುದರಿಂದ ಮತ್ತೊಮ್ಮೆ ಜನರಲ್ಲಿ ಆತಂಕ ಮೂಡಿದೆ. ಭಾನುವಾರ ರಾತ್ರಿ ಸಣ್ಣ ಶಬ್ದದೊಂದಿಗೆ ಕ್ಷಣ ಮಾತ್ರದಲ್ಲಿ ಗಾಳಿಯ ಆರ್ಭಟದೊಂದಿಗೆ ಬರೆ
ಕುಸಿದಿದೆ.

2018ರಲ್ಲಿ ಮಾದಾಪುರ – ಮಡಿಕೇರಿ ನಡುವಿನ ಮಕ್ಕಂದೂರುವಿನ ಬಾಲಾಜಿ ತೋಟದ ಬಳಿ ಭಾರಿ ಪ್ರಮಾಣದಲ್ಲಿ ಬರೆ ಕುಸಿದ ಪರಿಣಾಮ ಮನೆಗಳು ಸಂಪೂರ್ಣ ನೆಲಕಚ್ಚಿ, ಪ್ರಾಣಿಗಳು ಸಾವನ್ನಪ್ಪಿದ್ದವು. ಇದೀಗ ಅಂದು ಕುಸಿದ ಸ್ಥಳದಲ್ಲಿಯೇ ಮತ್ತೊಮ್ಮೆ ಬರೆ ಕುಸಿಯುತ್ತಿರುವುದು ಆತಂಕವನ್ನು ಸೃಷ್ಟಿ ಮಾಡಿದೆ.

ಮುಂದೆ ಅನಾಹುತ ಸಂಭವಿಸಬಾರದೆನ್ನುವ ನಿಟ್ಟಿನಲ್ಲಿ ಬರೆ ಸಮತಟ್ಟು ಮಾಡುವ ಕಾರ್ಯವೂ ಕೂಡ ನಡೆದಿದೆ. ಆದರೆ ಅವೈಜ್ಞಾನಿಕ ಕಾಮಗಾರಿಯಿಂದ ಈ ಅನಾಹುತ ಮರುಕಳಿಸುವ ಸೂಚನೆ ನೀಡಿದೆ.

ಬರೆ ಕುಸಿತದ ಪರಿಣಾಮವಾಗಿ ಚರಂಡಿ ಸಂಪೂರ್ಣ ಮುಚ್ಚಿ ಹೋಗಿದ್ದು, ಮಳೆ ನೀರು ರಸ್ತೆಯಲ್ಲಿ ಹರಿದು ಅವಘಡ ಸಂಭವಿಸುವ ಲಕ್ಷಣಗಳು ಕಂಡುಬಂದಿದೆ. ಅಲ್ಲದೇ, ಅಲ್ಲಲ್ಲಿ ಗುಡ್ಡಗಳು ಬಿರುಕು ಬಿಡುತ್ತಿದ್ದು ಮಳೆಯ ಪ್ರಮಾಣ ಏರಿಕೆಯಾದರೆ ಒಂದೆರಡು ದಿನಗಳಲ್ಲಿ ಬರೆ ಕುಸಿಯುವ ಭೀತಿ ಸ್ಥಳೀಯ ನಿವಾಸಿಗಳಲ್ಲಿ ಉಂಟುಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT