ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂಟಿಕೊಪ್ಪ: ಮರಿಯಮ್ಮ ಜನ್ಮದಿನ, ಸರಳ ಆಚರಣೆ

ಸಂತ ಮೇರಿ ಶಾಲಾ ಆವರಣದಲ್ಲಿ ಕಾರ್ಯಕ್ರಮ
Last Updated 9 ಸೆಪ್ಟೆಂಬರ್ 2020, 1:34 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ಯೇಸುಕ್ರಿಸ್ತರ ತಾಯಿ ಕ್ಯಾಥೋಲಿಕ್ ಕ್ರೈಸ್ತರ ಮಾತೆ ಮರಿಯಮ್ಮನವರ ಜನ್ಮದಿನೋತ್ಸವ ಮತ್ತು ತೆನೆಹಬ್ಬವನ್ನು ಇಲ್ಲಿನ ಸಂತ ಮೇರಿ ಶಾಲಾ ಆವರಣದಲ್ಲಿ ಮಂಗಳವಾರ ಯಾವುದೇ ಸರಳವಾಗಿ ಆಚರಿಸಲಾಯಿತು.

ಮೋಂತಿ ಫೆಸ್ಟ್ (ತೆನೆಹಬ್ಬ)ನ ಅಂಗವಾಗಿ ಮಂಗಳವಾರ ಸಂತ ಅಂತೋಣಿ ದೇವಾಲಯದ ಧರ್ಮಗುರು ಫಾದರ್ ಅರುಳ್ ಸೆಲ್ವಕುಮಾರ್ ಹಾಗೂ ಸಹಾಯಕ ಧರ್ಮಗುರು ಮದಲೈ ಮುತ್ತು ಅವರು ದಿವ್ಯ ಬಲಿಪೂಜೆ ನಡೆಸಿ, ಪ್ರವಚನ ನೀಡಿ, ನೆರೆದ ಭಕ್ತರಿಗೆ ನೂತನ ತೆನೆಗಳನ್ನು ವಿತರಿಸಿದರು.

ಕೋವಿಡ್‌ ಹಿನ್ನೆಲೆಯಿಂದಾಗಿ ಸರ್ಕಾರದ ನಿರ್ದೇಶನದಂತೆ ಸರಳವಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಮಾತೆ ಮರಿಯಮ್ಮನವರ ಜನ್ಮದಿನದ ಬಲಿಪೂಜೆಗೂ ಮುನ್ನ ಶಾಲಾ ಆವರಣವನ್ನು ಸ್ಯಾನಿಟೈಸ್‌ ಮಾಡಿ ಅಗತ್ಯ ಕ್ರಮ ಕೈಗೊಂಡಿದ್ದರು.

ಮೇರಿ ಮಾತೆಯ ಜಯಂತಿ ಮತ್ತು ತೆನೆಹಬ್ಬ (ಮೋಂತಿ ಫೆಸ್ಟ್)ದ ಪ್ರಯುಕ್ತ ಪೂರ್ವಭಾವಿಯಾಗಿ ನಡೆಯುವ ಬಲಿಪೂಜೆ ಹಾಗೂ ನೊವೇನಾ ಪ್ರಾರ್ಥನೆಯನ್ನು ಆ. 30ರಿಂದ ಆರಂಭಿಸಿ ಸೆ. 8ರವರೆಗೆ ಚರ್ಚ್‌ನಲ್ಲಿ ಕ್ರೈಸ್ತರು ಶ್ರದ್ಧಾಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.

ನೊವೇನಾ ಪ್ರಾರ್ಥನೆಯ 9 ದಿನ ಮಾತೆಗೆ ವಿವಿಧ ಬಗೆಯ ಸೀರೆಗಳಿಂದ ಅಲಂಕಾರ ಮಾಡಲಾಗಿತ್ತು. ಚಿಕ್ಕಮಕ್ಕಳು, ಯುವಕ, ಯುವತಿಯರು ಹಾಗೂ ಹಿರಿಯರು ಪ್ರತಿ ದಿನ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ, ಗಾಯನ ಬಲಿಪೂಜೆಯಲ್ಲಿ ಪಾಲ್ಗೊಂಡು ನಂತರ ತಾವು ತಂದ ಹೂವುಗಳನ್ನು ಮರಿಯಮ್ಮನವರಿಗೆ ಸಮರ್ಪಿಸಿದರು.

10ನೇ ದಿನ ಹೊಸ ತೆನೆ ಹಬ್ಬವನ್ನು ಇಲ್ಲಿನ ದೇವಾಲಯಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ನಂತರ ಮನೆಗಳಲ್ಲಿ ಆಚರಿಸಿ ಸಂಭ್ರಮಿಸಿದರು.

ಶಾಲಾ ಆವರಣದಲ್ಲಿಯೇ ಮೆರವಣಿಗೆ ಮಾಡಿದ ಕ್ರೈಸ್ತರು, ತಮ್ಮ ಮನೆಗಳಿಂದ ತಂದಿದ್ದ ಪುಷ್ಪಗಳನ್ನು ಮಾತೆಗೆ ಸಮರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT