ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಆನೆ ಚೌಕೂರು ಗೇಟ್ ಬಂದ್ ಇಲ್ಲ’

ಆನೆಚೌಕೂರು ಗೇಟ್‌‌‌ಗೆ ಶಾಸಕ ಪೊನ್ನಣ್ಣ ಭೇಟಿ; ಪರಿಶೀಲನೆ
Published 29 ಜೂನ್ 2024, 6:35 IST
Last Updated 29 ಜೂನ್ 2024, 6:35 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಸಂಜೆ 6ರ ಬಳಿಕ ಆನೆಚೌಕೂರು ಹೆದ್ದಾರಿ ಬಂದ್ ಎಂಬ ವಿಷಯ ಅರಣ್ಯ ಇಲಾಖೆಯ ದಂಡ ಚೀಟಿಯಲ್ಲಿ ಪ್ರಕಟವಾದುದನ್ನು ಗಮನಿಸಿದ ಶಾಸಕ ಪೊನ್ನಣ್ಣ ಗೇಟ್‌‌‌ನ ಅರಣ್ಯ ಇಲಾಖೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ಮೂರು ದಿನಗಳ ಹಿಂದೆ ತಿತಿಮತಿ ವ್ಯಾಪ್ತಿಯ ರಾಷ್ಟ್ರೀಯ ಉದ್ಯಾನ ಹಾಗೂ ರಕ್ಷಿತಾ ಅರಣ್ಯದ ನಡುವೆ ಹಾದು ಹೋಗುವ ಮೈಸೂರು ರಸ್ತೆಯಲ್ಲಿ ಯುವಕರ ತಂಡ ಒಂದು ಫೋಟೋ ಶೂಟಿಂಗ್ ನಡೆಸುತ್ತಿದ್ದ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಹಚ್ಚಿ ದಂಡ ವಿಧಿಸಿ ರಶೀತಿ ನೀಡಿದ್ದರು. ಇದರಲ್ಲಿ ‘ನಾಗರಹೊಳೆ ವನ್ಯಜೀವಿ ವ್ಯಾಪ್ತಿಗೆ ಒಳಡಪಡುವ ಆನೆಚೌಕೂರು ಹೆದ್ದಾರಿ ಸಂಜೆ 6 ರಿಂದ ಬೆಳಿಗ್ಗೆ 6 ವರೆಗೆ ಸಂಚಾರ ಗೇಟ್ ಬಂದ್ ಮಾಡಲಾಗುತ್ತದೆ’ ಎಂದು ನಮೂದಿಸಲಾಗಿತ್ತು. ಇದರಿಂದ ಸಾರ್ವಜನಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು.

ಇದನ್ನು ಗಮನಿಸಿದ ಪೊನ್ನಣ್ಣ ದಿಢೀರ್ ಭೇಟಿ ನೀಡಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಷಿಸಿ ಪ್ರತ್ಯೇಕ ರಶೀದಿ ಮುದ್ರಿಸಿ ನೀಡುವಂತೆ ಸೂಚಿಸಿದರು. ಬಳಿಕ ತಿತಿಮಿತಿ ವಲಯ ಅರಣ್ಯಾಧಿಕಾರಿಳು ರಶೀತಿಯಲ್ಲಿ ಆನೆಚೌಕೂರು ಗೇಟ್ ಪ್ರವೇಶ ನಿಷೇಧ ನಿರ್ಬಂಧಕ್ಕೆ ಒಳಪಡುವುದಿಲ್ಲ ಎಂದು ಪ್ರಕಟಿಸಿ ಹೊಸ ರಶೀತಿ ನೀಡಲಾಯಿತು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT