ಗುರುವಾರ , ಜೂಲೈ 2, 2020
23 °C

ಕುಶಾಲನಗರ: ಮುತ್ತೂಟ್ ಫೈನಾನ್ಸ್‌ನಿಂದ ಯುವತಿಯ ವಿವಾಹಕ್ಕೆ ₹1 ಲಕ್ಷ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಶಾಲನಗರ: ಪಟ್ಟಣದ ಮುತ್ತೂಟ್ ಫೈನಾನ್ಸ್ ವತಿಯಿಂದ ‘ವಿವಾಹ ಸಮ್ಮಾನಂ’ ಯೋಜನೆಯಡಿ ಬಡ ಯುವತಿಯ ವಿವಾಹಕ್ಕೆ ₹1 ಲಕ್ಷ ಆರ್ಥಿಕ ನೆರವು ನೀಡಲಾಯಿತು.

ಸಂಸ್ಥೆಯ ಸಾಮಾಜಿಕ ಸೇವಾ ನಿಧಿಯಿಂದ ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಮದಲಾಪುರದ ಹರಿಣಿ ಎಂಬುವರ ಪುತ್ರಿ ಎಂ.ಆರ್. ವಿದ್ಯಾ ಅವರ ವಿವಾಹಕ್ಕೆ ನೆರವಾಗುವ ನಿಟ್ಟಿನಲ್ಲಿ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಲಿಬಿನ್ ಕೆ. ಆಂಟೋನಿ ₹1 ಲಕ್ಷ ಮೊತ್ತದ ಚೆಕ್ ವಿತರಿಸಿದರು.

ಬಳಿಕ ಮಾತನಾಡಿದ ಅವರು, ‘ಬಡ ವಿದ್ಯಾರ್ಥಿಗಳ ಶಿಕ್ಷಣ, ಕಡು ಬಡವರ ಅನಾರೋಗ್ಯ ಸಮಸ್ಯೆಗಳಿಗೆ ಸಂಸ್ಥೆ ಮೂಲಕ ಅಗತ್ಯ ನೆರವು ಒದಗಿಸಲಾಗುತ್ತಿದೆ. ಈ ಬಾರಿ ಕಡುಬಡ ಹೆಣ್ಣು ಮಗಳ ಮದುವೆಗೆ ಆರ್ಥಿಕ ನೆರವು ನೀಡಲಾಗಿದೆ. ಅಗತ್ಯ ಸಹಕಾರ ಕೋರಿ ಅರ್ಜಿಗಳು ಬಂದಲ್ಲಿ ಪರಿಶೀಲಿಸಿ ಮುಂದಿನ ದಿನಗಳಲ್ಲಿ ನೆರವು ನೀಡಲಾಗುವುದು’ ಎಂದು ತಿಳಿಸಿದರು.

ಕೂಡಿಗೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಮಾತನಾಡಿದರು. ಉಪಾಧ್ಯಕ್ಷ ಗಿರೀಶ್, ಮುತ್ತೂಟ್ ಸಂಸ್ಥೆಯ ಜೋಹನ್ ಪಿಂಟೋ, ರಕ್ಷಿತ್ ಕೆ. ಅಪ್ಪಣ್ಣ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು