ನಾಪೋಕ್ಲು: ಚೆರಿಯ ಪರಂಬು ಮಖಾಂ ಉರುಸ್ ಅಂಗವಾಗಿ ಶುಕ್ರವಾರ ಜಮಾಅತ್ ಅಧ್ಯಕ್ಷ ಹಂಸ ಹಾಜಿ ಧಾರ್ಮಿಕ ಧ್ವಜಾರೋಹಣ ನೆರವೇರಿಸಿದರು.

ನಮಾಜ್ ಬಳಿಕ ಉರುಸ್ ಉದ್ಘಾಟಿಸಲಾಯಿತು. ರಾತ್ರಿ ಅಯ್ಯಂಗೇರಿಯ ರಾಫಿ ಹಿಮಾಮಿ ಕಾಮಿಲ್ ಸಖಾಫಿ ಮುಖ್ಯ ಭಾಷಣ , ಪ್ರಮುಖರಾದ ರಹೂಫ್ ಸಕಾಫಿ, ಜಾಫರ್ ಮಿಸ್ಟಾಯಿ, ಅಹಮದ್ ಪಾಪರಾಟ್, ಪಿ.ಎ.ಹಾರಿಸ್, ಪಿ.ಎಂ.ಮೊಯಿದು, ಎಂ.ಐ ಇಬ್ರಾಹಿಂ ಉಪಸ್ಥಿತರಿದ್ದರು.

ಶನಿವಾರ ರಾತ್ರಿ 8 ಗಂಟೆಗೆ ಜುಬೇರ್ ಮಾಸ್ಟರ್ ತೋಟಕಲ್ ಮತ್ತು ಸಂಗಡಿಗರು ಕಥಾಪ್ರಸಂಗ ನಡೆಸುವರು. ಭಾನುವಾರ ರಾತ್ರಿ 8 ಗಂಟೆಗೆ ಎಮ್ಮೆ ಮಾಡಿನ ಅಶ್ರಫ್ ಚೌಹರಿ ಭಾಷಣ ಮಾಡುವರು. ಸೋಮವಾರ ಮಧ್ಯಾಹ್ನ 2 ಗಂಟೆಗೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಜಮಾಅತ್ ಅಧ್ಯಕ್ಷ ಪಿ.ಎ. ಹಂಸ ಹಾಜಿ ಅಧ್ಯಕ್ಷತೆ ವಹಿಸುವರು. ಅಂದು ಕೊಳಕೇರಿಯ ಸುಹೇಬ್ ಫೈಜಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಫೆಬ್ರುವರಿ 17ರಂದು ಸೋಮವಾರ ಸಂಜೆ 4 ಗಂಟೆಗೆ ಪಾರಾಯಣ ಹಾಗೂ ಭಕ್ತರಿಗೆ ಅನ್ನದಾನ ನೆರವೇರಲಿದೆ. ರಾತ್ರಿ ತಿರುವನಂತಪುರದ ಹಾಫಿಳ್ ಮಾಹಿನ್ ಮನ್ನಾನಿ ಮುಖ್ಯ ಭಾಷಣ ಮಾಡುವರು.

ಫೆಬ್ರುವರಿ 18ರ ಮಂಗಳವಾರ ರಾತ್ರಿ ಸಮಾರೋಪ ಸಮಾರಂಭ ನಡೆಯಲಿದ್ದು, ಚೆರಿಯ ಪರಂಬು ಜಮಾಯತ್ ಉಪಾಧ್ಯಕ್ಷ ಪಿ.ಎಂ ಸಾಧಲಿ ಅಧ್ಯಕ್ಷತೆ ವಹಿಸುವರು. ಅಂದು ಎಡಪಾಲದ ಶೈಕುನಾ ಅಬ್ದುಲ್ ಫೈಜಿ ಮುಖ್ಯ ಭಾಷಣ ನೆರವೇರಿಸುವರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.