ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಪೋಕ್ಲು: ರಸ್ತೆಗೆ ಉರುಳಿದ ಮರ

Published 17 ಮೇ 2024, 14:44 IST
Last Updated 17 ಮೇ 2024, 14:44 IST
ಅಕ್ಷರ ಗಾತ್ರ

ನಾಪೋಕ್ಲು: ಹೋಬಳಿ ವ್ಯಾಪ್ತಿಯ ವಿವಿಧೆಡೆ ಶುಕ್ರವಾರ ಸಾಧಾರಣ ಮಳೆಯಾಗಿದೆ. ಬೆಳಿಗ್ಗಿನಿಂದಲೇ ಮೋಡ ಕವಿದ ವಾತಾವರಣ ಇತ್ತು, ಮಧ್ಯಾಹ್ನ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮಳೆ ಸುರಿಯಿತು.

ಗುರುವಾರ ರಾತ್ರಿ ಹಲವೆಡೆ ಬಿರುಸಿನ ಮಳೆಯಾಗಿದೆ. ಗಾಳಿ-ಮಳೆಯಿಂದಾಗಿ ತೋಟಗಳಲ್ಲಿ ಮರಗಳು ಬುಡಸಹಿತ ಮುರಿದು ಬಿದ್ದಿವೆ. ಬೇತು, ಕಲ್ಲುಮೊಟ್ಟೆ, ಅಜ್ಜಿಮುಟ್ಟ ಸೇರಿದಂತೆ ಹಲವು ಭಾಗಗಳಲ್ಲಿ ಗ್ರಾಮೀಣ ರಸ್ತೆಗಳಿಗೆ ಅಡ್ಡಲಾಗಿ ಮರಗಳು ಮುರಿದು ಬಿದ್ದಿದ್ದವು. ಕಾಳುಮೆಣಸಿನ ಬಳ್ಳಿಗಳು ಹಬ್ಬಿದ್ದ ಮರಗಳೂ ಧರೆಗುರುಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT