ಸೋಮವಾರ, ಸೆಪ್ಟೆಂಬರ್ 20, 2021
29 °C
ಕೊಡಗಿನ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ, ಮಳಿಗೆ ಬಳಿಕ ಸಂಚಾರಿ ವಾಹನ

ಸಂತ್ರಸ್ತ ಮಹಿಳೆಯರ ಮತ್ತೊಂದು ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ‘ನನ್ನ ಸ್ವಂತ ಊರಾದ ಕಾಲೂರಿನ ಮಹಿಳೆಯರನ್ನು ಸ್ವಾವಲಂಬಿಯತ್ತ ಕೊಂಡೊಯ್ಯಲು ವಿವಿಧೆಡೆಯಿಂದ ನೆರವು ಹಾಗೂ ಸೌಲಭ್ಯಗಳು ಲಭಿಸುತ್ತಿರುವುದು ತೃಪ್ತಿ ತಂದಿದೆ. ಸಂತೋಷದ ಜತೆಗೆ ಇದೊಂದು ಆಶಾದಾಯಕ ಬೆಳವಣಿಗೆ’ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಭಾರತೀಯ ವಿದ್ಯಾಭವನ ಪ್ರಾಜೆಕ್ಟ್ ಕೂರ್ಗ್‌ ಪ್ರಾಯೋಜಕತ್ವದ ಕಾಲೂರು ಗ್ರಾಮದ ಸಂತ್ರಸ್ತ ಮಹಿಳೆಯರು ಉತ್ಪಾದಿಸಿದ ಮಸಾಲೆ, ಸಂಬಾರ ಪದಾಥ೯ಗಳ ಮಾರಾಟಕ್ಕೆ ಅಮೆರಿಕದಲ್ಲಿನ ಕೊಡವ ಕೂಟದ ಪ್ರಾಯೋಜಕತ್ವದಲ್ಲಿ ದೊರಕಿರುವ ಸಂಚಾರಿ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಅಮೆರಿಕದಲ್ಲಿದ್ದರೂ ಕೊಡಗನ್ನು ಮರೆಯದೇ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ನೆರವು ನೀಡಲು ಮುಂದಾಗಿರುವ ಕೊಡವ ಕೂಟದ ಉದ್ದೇಶ ಶ್ಲಾಘನೀಯ’ ಎಂದು ಹೇಳಿದರು.

ಭಾರತೀಯ ವಿದ್ಯಾಭವನ ಕೊಡಗು ಘಟಕದ ಅಧ್ಯಕ್ಷ ಕೆ.ಎಸ್. ದೇವಯ್ಯ ಮಾತನಾಡಿ, ಕಾಲೂರಿನ ಜನರ ನೆರವಿಗೆ ಅಮೆರಿಕದ ಕೊಡವ ಕೂಟ ಮುಂದಾಗಿರುವುದು ಆ ಗ್ರಾಮಸ್ಥರ ಸಬಲೀಕರಣ ಉದ್ದೇಶದ ವೈವಿಧ್ಯಮಯ ಯೋಜನೆಗಳಿಗೆ ಮತ್ತಷ್ಟು ಬಲ ಬಂದಿದೆ’ ಎಂದು ಹೇಳಿದರು.

ಸಾಹಿತಿ ನಾಗೇಶ್ ಕಾಲೂರು ಮಾತನಾಡಿ, ಹಲವಾರು ವರ್ಷಗಳಿಂದ ದಿನವೂ ಕಾಣುತ್ತಿದ್ದ ಬೃಹತ್‌ ಬೆಟ್ಟಗಳೇ ಈ ರೀತಿ ಕುಸಿದೀತು ಎಂದು ಯಾರೂ ಅಂದುಕೊಂಡಿರಲಿಲ್ಲ. ಕಾಲೂರು ಗ್ರಾಮದಲ್ಲಿ ಗ್ರಾಮದೇವಿಯ ಅನುಗ್ರಹದಿಂದ ಯಾರದ್ದೇ  ಪ್ರಾಣ, ಜಾನುವಾರುಗಳಿಗೆ ಜೀವಹಾನಿಯಾಗಲಿಲ್ಲ ಎಂದು ಹೇಳಿದರು.

‘ಕತ್ತಿಹಿಡಿದು ಗದ್ದೆಯಲ್ಲಿ ಕೃಷಿ ಮಾಡಿದ್ದ, ಕಾಫಿ ಕೊಯ್ಲು ಮಾಡಿ ತಲೆಹೊರೆಯಲ್ಲಿ ಕೊಂಡೊಯ್ದು ಮಾರಾಟ ಮಾಡುತ್ತಿದ್ದ  ಗ್ರಾಮದ ಮಹಿಳೆಯರಿಗೆ ಸಂಕಷ್ಟ ಎದುರಾದಾಗ ಮಸಾಲೆ ಪದಾಥ೯ಗಳ ತಯಾರಿಕೆಯ ತರಬೇತಿ ನೀಡಲಾಯಿತು. ಕೊನೆಗೆ ಅವರಿಗೆ ಮಾರುಕಟ್ಟೆಗೆ ಎರಡು ಮಳಿಗೆಯ ವ್ಯವಸ್ಥೆಯನ್ನೂ ಮಾಡಲಾಯಿತು’ ಎಂದು ಹೇಳಿದರು.

‘ಸ್ಪೆಕ್’ ವ್ಯವಸ್ಥೆಯ ನೆರವಿನೊಂದಿಗೆ ಅಮೆರಿಕದಿಂದ ಮಡಿಕೇರಿ ಕಾಯ೯ಕ್ರಮ ಉದ್ದೇಶಿಸಿ ಮಾತನಾಡಿದ ಕೊಡವ ಕೂಟದ ಅಧ್ಯಕ್ಷೆ ಕೊಂಗಂಡ ಜಿನ, ಜಲಪ್ರಳಯದಿಂದ ತತ್ತರಿಸಿರುವ ಕೊಡಗಿನ ಹಲವಾರು ಗ್ರಾಮಗಳಿಗೆ ನೆರವಾಗುವ ನಿಟ್ಟಿನಲ್ಲಿ ಅಮೆರಿಕದಲ್ಲಿ ನೆಲೆಸಿರುವ ಕೊಡವ ಸಮುದಾಯವರು ಎಲ್ಲ ರೀತಿಯ ಆರ್ಥಿಕ ನೆರವು ನೀಡಲು ನಿರ್ಧರಿಸಿದ್ದಾರೆ ಎಂದು ಭರವಸೆ ನೀಡಿದರು.

ಪ್ರಾಜೆಕ್ಟ್ ಕೂಗ್೯ ವಿನೂತನ ರೀತಿಯಲ್ಲಿ ಮಹಿಳೆಯರನ್ನು ಸ್ವಾವಲಂಬಿಗಳಾಗಿಸುವ ಉದ್ದೇಶದಿಂದ ಮಸಾಲೆ ಪದಾಥ೯ಗಳ ತಯಾರಿಕೆಯ ತರಬೇತಿ ನೀಡಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿರುವುದು ಗಮನ ಸೆಳೆಯಿತು. ವಿಶೇಷವಾಗಿ ನೊಂದ ಮಹಿಳೆಯರಿಗೆ ಮಾನಸಿಕ ಧೈರ್ಯ ತುಂಬಿ ಆಥಿ೯ಕವಾಗಿ ಆ ಮಹಿಳೆಯರನ್ನು ಪ್ರಬಲಗೊಳಿಸುವ ಯೋಜನೆ ವಿನೂತನ ಎನಿಸಿತು. ಹೀಗಾಗಿ, ಕೊಡವ ಕೂಟದಿಂದ ಈ ಯೋಜನೆಗೆ ಸಂಚಾರಿ ವಾಹನ ಪ್ರಾಯೋಜಿಸಲು ನಿಧ೯ರಿಸಲಾಯಿತು ಎಂದು ಹೇಳಿದರು.

ಸ್ವಚ್ಛ ಹಾಗೂ ಹಸಿರು ಕೊಡಗಿನ (ಕ್ಲೀನ್ ಅಂಡ್ ಗ್ರೀನ್ ಕೂಗ್೯) ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೊಡವ ಕೂಟವು ವಿನೂತನವಾದ ಯೋಜನೆಯನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ. ಪ್ರಳಯಕ್ಕೊಳಗಾದ ಗ್ರಾಮಗಳಲ್ಲಿ ಸಸಿ ನೆಡುವ  ಉದ್ದೇಶವನ್ನೂ ಇಟ್ಟುಕೊಳ್ಳಲಾಗಿದೆ. ಪೊನ್ನಂಪೇಟೆಯ ಸಾಯಿಶಂಕರ ಶಾಲಾ ವಿದ್ಯಾಥಿ೯ಗಳಿಗೆ ಕೊಡವ ಕೂಟದಿಂದ 15 ಕಂಪ್ಯೂಟರ್ ನೀಡಲಾಗಿದೆ ಎಂದೂ ಜಿನ ಮಾಹಿತಿ ನೀಡಿದರು.

ಡಾ.ಮನೋಹರ್ ಜಿ. ಪಾಟ್ಕರ್,  ಪ್ರಾಜೆಕ್ಟ್ ಕೂರ್ಗ್‌ ಮುಖ್ಯಸ್ಥ ಬಾಲಾಜಿ ಕಶ್ಯಪ್, ನಿರ್ದೇಶಕರಾದ ಕೆ.ಎಸ್. ರಮೇಶ್ ಹೊಳ್ಳ, ವೇದಮೂತಿ೯, ಎಂ.ಇ. ಚಿಣ್ಣಪ್ಪ, ನಯನಾ ಕಶ್ಯಪ್, ಎಚ್‌.ಟಿ. ಅನಿಲ್, ಗೌರಿ ಕಶ್ಯಪ್, ಓಂಕಾರೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್, ರಘು ಮಾದಪ್ಪ, ಕಾಲೂರು ಪಾಲ್ಗೊಂಡಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು