ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಓದದೆ ಯಾವುದೂ ಸುಲಭವಾಗಿ ಕೈ ದಕ್ಕುವುದಿಲ್ಲ: ಐಜಿಪಿ

ಕೊಡ್ಲಿಪೇಟೆ ವಿದ್ಯಾಸಂಸ್ಥೆಯಲ್ಲಿ ಅರಿವು ಕಾರ್ಯಕ್ರಮದಲ್ಲಿ ಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ ಪ್ರತಿಪಾದನೆ
Published 25 ಆಗಸ್ಟ್ 2024, 5:09 IST
Last Updated 25 ಆಗಸ್ಟ್ 2024, 5:09 IST
ಅಕ್ಷರ ಗಾತ್ರ

ಶನಿವಾರಸಂತೆ: ಓದದೆ, ಪರಿಶ್ರಮ ಇಲ್ಲದೇ ಯಾವುದೇ ಸ್ಥಾನಮಾನ ಸುಲಭವಾಗಿ ದಕ್ಕುವುದಿಲ್ಲ ಎಂದು ಮೈಸೂರು ವಿಭಾಗದ ಐಜಿಪಿ ಡಾ.ಎಂ.ಬಿ. ಬೋರಲಿಂಗಯ್ಯ ತಿಳಿಸಿದರು.

ಕೊಡ್ಲಿಪೇಟೆ ವಿದ್ಯಾ ಸಂಸ್ಥೆಯಿಂದ ಶನಿವಾರ ನಡೆದ ‘ಚಿಂತೆಯಿಂದ ಚಿಂತನೆಗೆ ಆರೋಗ್ಯ ಮನಸ್ಸುಗಳಿಗೆ’ ಎಂಬ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗುಡ್ಡಗಾಡು ಜಾಗದಲ್ಲಿ ಉತ್ತಮ ಶಾಲೆಗಳು ಸಮಾಜ ಅಭಿವೃದ್ಧಿ ಮಾಡುವಂತಹ ವ್ಯಕ್ತಿಗಳನ್ನು ನಿರ್ಮಾಣ ಮಾಡುತ್ತವೆ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಭಾಗಗಳಲ್ಲಿ ಹಿರಿಯರು ದೂರದೃಷ್ಟಿಯಿಂದ ವಿದ್ಯಾ ಸಂಸ್ಥೆಗಳನ್ನು ಆರಂಭಿಸಿದರು. ಅದರಿಂದ ಈಗ ಅಲ್ಲಿನ ಶಿಕ್ಷಣಕ್ಕೆ ಮಹತ್ವ ಬಂದಿದೆ’ ಎಂದರು.

‘ವಿದ್ಯಾರ್ಥಿಗಳು ಅವಕಾಶಗಳು ಎದುರು ಬಂದಾಗ ಯೋಚಿಸಿ ಮುನ್ನುಗ್ಗಬೇಕು. ವಿಫಲತೆ ಕಂಡರೆ ಧೃತಿಗೆಡದೆ ಮತ್ತೆ ಪ್ರಯತ್ನ ಮಾಡಬೇಕು. ಕೇವಲ ತರಗತಿಯಲ್ಲಿರುವ ಸ್ನೇಹಿತರನ್ನು ಸ್ಪರ್ಧಾರ್ಥಿಗಳು ಎಂದು ತಿಳಿಯದೇ, ಹೊರ ಪ್ರಪಂಚದಲ್ಲಿ ಸಾಕಷ್ಟು ಸ್ಪರ್ಧಾರ್ಥಿಗಳು ಇದ್ದಾರೆ ಎಂಬುದನ್ನು ಅರಿತು ಅವರನ್ನು ಎದುರಿಸುವ ಶಕ್ತಿಯನ್ನು ಪಡೆದುಕೊಳ್ಳಬೇಕು’ ಎಂದು ಅವರು ಮಾರ್ಗದರ್ಶನ ನೀಡಿದರು.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ಹಿಂಜರಿಕೆ ಇರಬಾರದು. ಸಾಮಾಜಿಕ ಜಾಲತಾಣದ ಹಿಂದೆ ಹೋಗಬಾರದು. ಸಮಾಜದಲ್ಲಿ ಬದಲಾವಣೆ ವೇಗವಾಗಿ ಆಗುತ್ತಿದೆ. ಅದಕ್ಕೆ ನಾವು ಬದಲಾವಣೆಯಾಗಿ, ಜೀವನದಲ್ಲಿ ಕಷ್ಟ ಇರುವುದರಿಂದ ಆತ್ಮವಿಶ್ವಾಸವನ್ನು ಹೊಂದಬೇಕು’ ಎಂದರು.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ‘ಜೀವನದಲ್ಲಿ ತಾವು ಮಾಡಿದ ತಪ್ಪನ್ನು ತಾವೇ ಸರಿಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಂಪೂರ್ಣವಾಗಿ ವಿದ್ಯಾಭ್ಯಾಸದ ಸಮಯದಲ್ಲಿ ತೊಡಗಿಸಿಕೊಳ್ಳಬೇಕು. ತಮಗಿಷ್ಟವಾದ ಗುರಿಯ ಜೀವನವನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಡ್ಲಿಪೇಟೆ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಚಂದ್ರಮೌಳಿ ಮಾತನಾಡಿ, ‘ನಿಮ್ಮಲ್ಲಿರುವ ಸೂಕ್ತ ಪ್ರತಿಭೆಗಳನ್ನು ಹೊರ ಹಾಕಲು ಉನ್ನತ ಸ್ಥಾನದಲ್ಲಿರುವವರ ಉಪನ್ಯಾಸ ಅಗತ್ಯವಿದೆ. ಈ ಸ್ಪೂರ್ತಿದಾಯಕವಾದ ಕಾರ್ಯಕ್ರಮವನ್ನು ಸದ್ಬಳಕೆ ಮಾಡಿಕೊಳ್ಳಿ’ ಎಂದರು.

ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಪರಮೇಶ್, ಖಜಾಂಚಿ ಡಾ.ಉದಯಕುಮಾರ್ ನಿರ್ದೇಶಕರಾದ ಯತೀಶ್ ಕುಮಾರ್, ಶಂಭುಲಿಂಗಪ್ಪ, ಮುಖಂಡರಾದ ಕೆ.ಪಿ.ಚಂದ್ರಕಲಾ, ಕೆ.ಎಂ.ಲೋಕೇಶ್, ಸತೀಶ್, ಭಾಗವಹಿಸಿದ್ದರು.

ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದ ಹಿಂದೆ ಬೀಳಬೇಡಿ ತಾವು ಮಾಡಿದ ತಪ್ಪನ್ನು ತಾವೇ ಸರಿ‍ಪಡಿಸಿಕೊಳ್ಳಬೇಕು ವಿದ್ಯಾರ್ಥಿಗಳಿಗೆ ಹಿಂಜರಿಕೆ ಬೇಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT