ನೆಲ್ಯಹುದಿಕೇರಿ ಗ್ರಾಮದ ಜೋಸ್ ಎಂಬವರ ಕಾರು ಆ. 22ರಂದು ಬೆಂಗಳೂರಿನಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ್ದಾರೆ ಎಂದು ₹ 1000 ದಂಡ ಪಾವತಿಸುವ ಬಗ್ಗೆ ಸಂದೇಶ ಬಂದಿದೆ. ಆದರೆ, ಆ. 22ರಂದು ಜೋಸ್ ಅವರು ತಮ್ಮ ಕಾರನ್ನು ಮನೆಯಲ್ಲೇ ನಿಲ್ಲಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜೋಸ್, ‘ನಾನು ಬೆಂಗಳೂರಿಗೆ ತೆರಳದೇ ಇದ್ದರೂ ನಿಯಮ ಉಲ್ಲಂಘನೆಗೆ ದಂಡ ವಿಧಿಸಲಾಗಿದೆ. ಯಾರೋ ಕಿಡಿಗೇಡಿಗಳು ವಾಹನದ ಸಂಖ್ಯೆಯನ್ನು ನಕಲಿ ಮಾಡಿ ಬಳಸಿರುವ ಸಾಧ್ಯತೆ ಇದೆ’ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.