ಬುಧವಾರ, ಅಕ್ಟೋಬರ್ 21, 2020
21 °C

ಕೊಡವ ಉಡುಗೆ ಧರಿಸಿ ಸಲಿಂಗ ವಿವಾಹ: ಕೊಡವ ಸಮುದಾಯದ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡವ ಯುವಕನೊಬ್ಬ ಅಮೆರಿಕದಲ್ಲಿ ಸಲಿಂಗ ವಿವಾಹ ಮಾಡಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ. ಆತ ಕೊಡವ ಉಡುಗೆ ತೊಟ್ಟು ಸಲಿಂಗ ವಿವಾಹವಾಗಿದ್ದು ಕೊಡಗು ಜಿಲ್ಲೆಯ  ಕೊಡವ ಸಮುದಾಯಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ವಿರಾಜಪೇಟೆ ತಾಲ್ಲೂಕಿನ ಬೋಳ್ಳರಿಮಾಡಿನ ಕೊಡವ ಕುಟುಂಬದ ಅಧ್ಯಕ್ಷ ಜಯಕುಮಾರ್ ಹಾಗೂ ನಳಿನಿ ದಂಪತಿ ಹಿರಿಯ ಪುತ್ರ ಶರತ್ ಪೊನ್ನಪ್ಪ (38) ಮದುವೆಯಾದ ಯುವಕ. ಇತ ಅಮೆರಿಕದಲ್ಲಿ ವೈದ್ಯರಾಗಿದ್ದಾರೆ. ಕಳೆದ ಸೆ.25ರಂದು ಉತ್ತರ ಭಾರತದ ತರುಣ ಸಂದೀಪ್ ದೋಸಾಂಜ್ ಜೊತೆಗೆ ಕ್ಯಾಲಿಫೋರ್ನಿಯಾದಲ್ಲಿ ಸಲಿಂಗ ವಿವಾಹ ಮಾಡಿಕೊಂಡಿದ್ದಾರೆ.

ಮದುವೆಯ ವಿಡಿಯೊ, ಫೋಟೊಗಳು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿವೆ. ಇಬ್ಬರೂ ಕೊಡವ ಉಡುಪಿನಲ್ಲಿ ಇರುವುದು ಕಂಡುಬಂದಿದೆ. ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಕೊಡವ ಮುಖಂಡ ಎಂ.ಬಿ. ದೇವಯ್ಯ ಮಾತನಾಡಿ, ‘ಕೊಡಗಿನ ಸಂಸ್ಕೃತಿಗಳನ್ನು ಉಳಿಸಬೇಕಾದ ಯುವಕರು ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಕೊಡವ ಸಮುದಾಯಕ್ಕೆ ತನ್ನದೇ ಸಂಸ್ಕೃತಿ, ಅಚಾರ– ವಿಚಾರ, ಪದ್ಧತಿ, ಪರಂಪರೆ ಇದೆ. ಇವರಿಗೆ ಅದರ ಅರಿವು ಇದ್ದಂತೆ ಕಾಣಿಸುತ್ತಿಲ್ಲ. ಇವರನ್ನೂ ಯಾರೂ ಕ್ಷಮಿಸಬಾರದು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು