ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಗೋಶಾಲೆ: ಪ್ರಸ್ತಾವ ಸಲ್ಲಿಸಿ

ಪ್ರಾಣಿ ದಯಾ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಜಿಲ್ಲಾಧಿಕಾರಿ ಸತೀಶ ಸೂಚನೆ
Last Updated 29 ಡಿಸೆಂಬರ್ 2022, 3:13 IST
ಅಕ್ಷರ ಗಾತ್ರ

ಮಡಿಕೇರಿ: ‘ಕೊಡಗು ಜಿಲ್ಲೆಯಲ್ಲಿ ಮತ್ತೊಂದು ಗೋಶಾಲೆ ನಿರ್ಮಿಸಲು ಪ್ರಸ್ತಾವ ಸಲ್ಲಿಸುವಂತೆ’ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಪಶುಪಾಲನೆ ಇಲಾಖೆಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಪ್ರಾಣಿ ದಯಾ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಈ ಕುರಿತು ಮಾಹಿತಿ ನೀಡಿದ ಪಶುಪಾಲನಾ ಇಲಾಖೆ ಉಪನಿರ್ದೇಶಕ ಸುರೇಶ್ ಭಟ್ ಅವರು, ‘ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ನಾಗವಾರ ಗ್ರಾಮದ 1/1 ಸರ್ವೇ ನಂಬರಿನಲ್ಲಿ 40 ಎಕರೆ ಗೋಮಾಳ ಜಾಗವಿದ್ದು, ಅದನ್ನು ಕಾಯ್ದಿರಿಸಬೇಕು’ ಎಂದು ಕೋರಿದರು.

ಕರ್ನಾಟಕ ಜಾನುವಾರು ಪ್ರತಿಬಂಧಕ ಹಾಗೂ ಸಂರಕ್ಷಣಾ ನಿಯಮ ಅನುಷ್ಠಾನ, ತಾಲ್ಲೂಕು ಪ್ರಾಣಿ ಮಿತ್ರ ಮಂಡಳಿ ರಚನೆ, ಪ್ರಾಣಿ ಸಹಾಯಕರ ಮತ್ತು ಪ್ರಾಣಿ ರಕ್ಷಕರನ್ನು ನೇಮಿಸುವುದು, ಪ್ರಾಣಿ ಕಲ್ಯಾಣಕ್ಕೆ ಸಂಬಂಧಿಸಿದಂತೆ ವಿವಿಧ ಕಾಯ್ದೆ ಮತ್ತು ನಿಯಮಗಳ ಬಗ್ಗೆ ಅರಿವು ಮೂಡಿಸುವುದು, ಸರ್ಕಾರಿ ಗೋಶಾಲೆ ನಿರ್ವಹಣೆ ಮಾರ್ಗದರ್ಶಿ ನಿಯಮಗಳು, ನಿರ್ವಹಣಾ ಸಮಿತಿ, ಒಣ ಹುಲ್ಲು ಖರೀದಿ, ಪುಣ್ಯಕೋಟಿ ದತ್ತು ಯೋಜನೆ ಅನುಷ್ಠಾನ ಮತ್ತಿತರ ವಿಷಯಗಳ ಕುರಿತು ಸಭೆಯ ಗಮನಕ್ಕೆ ತಂದರು.

ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಸಂಯೋಜಕಿ ರಶ್ಮಿ ಡಿಸೋಜಾ ಮಾತನಾಡಿ, ‘ಕೊಡಗು ಜಿಲ್ಲೆಯು ರಾಜ್ಯದ ಗಡಿ ಪ್ರದೇಶ ಹೊಂದಿರುವುದರಿಂದ ಗಡಿಭಾಗದಲ್ಲಿ ಗೋರಕ್ಷಣೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಿದೆ’ ಎಂದು ಮನವಿ ಮಾಡಿದರು.

ಚಿಕ್ಕತೋಳೂರು ಕೃಷ್ಣ ಗೋಶಾಲೆಯ ಹರೀಶ್ ಆಚಾರ್ಯ ಮಾತನಾಡಿ, ‘ಗೋವುಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಗೋಶಾಲೆಯಲ್ಲಿ 62 ಜಾನುವಾರುಗಳು ಇವೆ. ಖಾಸಗಿಯಾಗಿ ಗೋಶಾಲೆ ನಿರ್ವಹಣೆ ಮಾಡುವವರಿಗೂ ಸರ್ಕಾರದ ದರದಂತೆ ಹಣ ಭರಿಸಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್, ಪ್ರಾಣಿದಯಾ ಸಂಘದ ಉಪಾಧ್ಯಕ್ಷ ಡಾ.ಕೆ.ಪಿ.ಅಯ್ಯಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಎನ್.ಮಧುರಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಂಗಧಾಮಯ್ಯ, ಶಿವಶಂಕರ್, ಪಶುಪಾಲನಾ ಇಲಾಖೆಯ ಪಾಲಿಕ್ಲಿನಿಕ್ ವಿಭಾಗದ ಉಪನಿರ್ದೇಶಕ ಡಾ.ಚಿದಾನಂದ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಸನ್ನ (ಮಡಿಕೇರಿ), ಬಾದಾಮಿ (ಸೋಮವಾರಪೇಟೆ), ಶ್ರೀದೇವು (ಕುಶಾಲನಗರ), ಡಾ.ಶಾಂತೇಶ್ (ಪೊನ್ನಂಪೇಟೆ), ಡಾ.ನವೀನ್ ಕುಮಾರ್ (ವಿರಾಜಪೇಟೆ), ಪೊಲೀಸ್ ಇನ್‌ಸ್ಪೆಕ್ಟರ್ ಮೇದಪ್ಪ, ಅನೂಪ್ ಮಾದಪ್ಪ, ನಗರಸಭೆ ಎಂಜಿನಿಯರ್ ಸೌಮ್ಯಾ, ರಂಜಿತ್ ಕವಲಪಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT