ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುಂಟಿಕೊಪ್ಪ: ದೇವಿಯ ಪಾದುಕೆ‌ ಪೂಜೆ

Published 24 ಜೂನ್ 2024, 4:57 IST
Last Updated 24 ಜೂನ್ 2024, 4:57 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ಇಲ್ಲಿನ ಶ್ರೀಪುರಂ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ದುರ್ಗಾಲಕ್ಷ್ಮಿ ದೇವಿಯ ಪಾದುಕ ಪೂಜೆ ದೇವಾಲಯದ ಆವರಣದಲ್ಲಿ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ನೆರವೇರಿತು.

ದೇವಾಲಯದ ಪ್ರಧಾನ ಆರ್ಚಕ ಗಣೇಶ್‌ಭಟ್ ಅವರ ನೇತೃತ್ವದಲ್ಲಿ ಸ್ಥಳ ಶುದ್ಧಿಪೂಜೆ ನಡೆದು ನಂತರ ದಕ್ಷಿಣ ಕನ್ನಡ ಜಿಲ್ಲೆಯ ವಾಸ್ತುಶಿಲ್ಪಿ ಜಗನ್ನಿಬವಾಸುದೇವ್ ಅವರು ದೇವಿಯ ಪಾದುಕೆ ಕಲ್ಲನ್ನು ದೇವಸ್ಥಾನ ಆಡಳಿತ ಮಂಡಳಿಗೆ ಒಪ್ಪಿಸಿ ಅದಕ್ಕೆ ಶುದ್ಧಿಪೂಜೆಯನ್ನು ಸಲ್ಲಿಸುವ ಮೂಲಕ ಗುಡಿಯ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

ಅಂದಾಜು ₹ 18ಲಕ್ಷದಿಂದ ₹20 ಲಕ್ಷ ವೆಚ್ಚದಲ್ಲಿ ದುರ್ಗಾಲಕ್ಷ್ಮಿ ಗುಡಿ, ನಾಗನಕಟ್ಟೆ, ಮುಖಮಂಟಪ ಹಾಗೂ ಮಹಾದ್ವಾರದ ಕಾಮಗಾರಿಯು ತ್ವರಿತಗತಿಯಲ್ಲಿ ಆರಂಭಿಸಲಾಗಿದ್ದು, ದಾನಿಗಳು ಹಾಗೂ ಭಕ್ತರು ಧನಸಹಾಯ ನೀಡುವಂತೆ ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರದ ಅಧ್ಯಕ್ಷ ಬಿ.ಎಂ. ಸುರೇಶ್ ಮನವಿ ಮಾಡಿದರು.

ಈ ಗುಡಿಗಳ ನಿರ್ಮಾಣ ಕಾರ್ಯವನ್ನು ದಕ್ಷಿಣ ಕನ್ನಡ ಮಾಣಿಯ ಶಿಲ್ಪಕಾರ ಕೃಷ್ಣಪ್ರಸಾದ್, ಜಗದೀಶ್ ದಯಾನಂದ್ ವಹಿಸಿಕೊಂಡಿದ್ದಾರೆ.

ದೇವಾಲಯದ ಪದಾಧಿಕಾರಿಗಳಾದ ಚಂದ್ರ, ಧನುಕಾವೇರಪ್ಪ, ಸಿ.ಬಿ. ಚಂದ್ರಶೇಖರ್, ಬಾಲಕೃಷ್ಣ, ಆರ್. ಶಾಂತರಾಮ್ ಕಾಮತ್, ವಿ.ಎ. ಸಂತೋಷ್, ವಿನೋದ್, ಶಶಿಕುಮಾರ್, ದಿನುದೇವಯ್ಯ, ಪಿ.ಆರ್. ಸುನಿಲ್‌ಕುಮಾರ್ ಇತರರು ಇದ್ದರು.

ಸುಂಟಿಕೊಪ್ಪ ಶ್ರೀ ಪುರಂ ಅಯ್ಯಪ್ಪ‌ಸ್ಚಾಮಿ ದೇವಾಲಯದಲ್ಲಿ ನಿರ್ಮಾಣಗೊಳ್ಳಲಿರುವ ದೇವಿ ಗುಡಿಯ ಮೊದಲ‌ಹಂತವಾಗಿ ಪಾದುಕೆಯನ್ನು ಸಮಿತಿಗೆ ವಾಸ್ತುಶಿಲ್ಪಿ ಜಗನ್ನಿ ವಾಸುದೇವ್ ಅವರು ಹಸ್ತಾಂತರಿಸಿದರು.
ಸುಂಟಿಕೊಪ್ಪ ಶ್ರೀ ಪುರಂ ಅಯ್ಯಪ್ಪ‌ಸ್ಚಾಮಿ ದೇವಾಲಯದಲ್ಲಿ ನಿರ್ಮಾಣಗೊಳ್ಳಲಿರುವ ದೇವಿ ಗುಡಿಯ ಮೊದಲ‌ಹಂತವಾಗಿ ಪಾದುಕೆಯನ್ನು ಸಮಿತಿಗೆ ವಾಸ್ತುಶಿಲ್ಪಿ ಜಗನ್ನಿ ವಾಸುದೇವ್ ಅವರು ಹಸ್ತಾಂತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT