ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: 13ರಂದು ಎಎಲ್‌ಜಿ ಕ್ರೆಸೆಂಟ್ ಶಾಲೆಯ ವಾರ್ಷಿಕೋತ್ಸವ

ಶಾಲೆಯ ಪೋಷಕ ಶಿಕ್ಷಕ ಸಮಿತಿ ಸಭೆಯಲ್ಲಿ ತೀರ್ಮಾನ
Published 8 ಜನವರಿ 2024, 7:02 IST
Last Updated 8 ಜನವರಿ 2024, 7:02 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಎಎಲ್‌ಜಿ ಕ್ರೆಸೆಂಟ್ ಶಾಲೆಯ ವಾರ್ಷಿಕೋತ್ಸವವನ್ನು ಜ. 13ರಂದು ನಡೆಸಲು ನಿರ್ಧರಿಸಲಾಯಿತು.

ಶಾಲೆಯಲ್ಲಿ ಶನಿವಾರ ನಡೆದ ಪೋಷಕ ಶಿಕ್ಷಕ ಸಮಿತಿ ಸಭೆಯಲ್ಲಿ ಈ ಕುರಿತು ವಿಸ್ತೃತವಾದ ಚರ್ಚೆ ನಡೆಯಿತು. ಈ ಹಿಂದಿನಂತೆ ಶನಿವಾರ ನಿಗದಿಯಾಗಿದ್ದ ವಾರ್ಷಿಕೋತ್ಸವವನ್ನು ಮಳೆಯ ಕಾರಣಕ್ಕೆ ಮುಂದೂಡಿದ ಕ್ರಮವನ್ನು ಸ್ವಾಗತಿಸಿದ ಸದಸ್ಯರು ಸರ್ವಾನುಮತದಿಂದ ಜ. 13ರಂದು ನಡೆಸಲು ಒಪ್ಪಿಗೆ ಸೂಚಿಸಿದರು.

ಉಳಿದಂತೆ, ಹಿಂದಿನ ಸಭೆಯಲ್ಲಿ ಪ್ರಸ್ತಾಪಿಸಿದ್ದ ಶಾಲೆಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಶಾಲೆಯ ಕಟ್ಟಡಕ್ಕೆ ಬಣ್ಣ ಹಾಕಿರುವುದು, ಆವರಣದ ಗೇಟ್‌ನಲ್ಲಿ ಟೈಲ್ಸ್ ಹಾಕಿರುವುದು ಸೇರಿದಂತೆ ಶಾಲಾಭಿವೃದ್ಧಿ ಕುರಿತ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತವಾಯಿತು.

ಜೊತೆಗೆ, ವಾರ್ಷಿಕೋತ್ಸವಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಸಮಿತಿಯ ಸದಸ್ಯರು ತಿಳಿಸಿದರು.

ಶಾಲೆಯ ಕಾರ್ಯದರ್ಶಿ ಜಿ.ಎಚ್.ಮೊಹಮ್ಮದ್ ಹನೀಫ್, ಪ್ರಾಂಶುಪಾಲರಾದ ಜೋಯ್ಸಿ ವಿನಯ, ಪೋಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಗಿರೀಶ್, ಜಂಟಿ ಕಾರ್ಯದರ್ಶಿ ಸಾಧಿಯ ಸಿರಾಜ್, ಶಿಕ್ಷಕರಾದ ಸುಲ್ಹತ್, ಮುಬೀನಾ, ಸುಜ್ಯೋತಿ, ತೌಸೀನಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT