ಶನಿವಾರ, ಜನವರಿ 18, 2020
22 °C

ಮಡಿಕೇರಿಯ ಸೂಕ್ಷ್ಮ ಪ್ರದೇಶದಲ್ಲಿ ಭದ್ರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಬಾಬರಿ ಮಸೀದಿ ಧ್ವಂಸಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕೋಮಿನವರು ಕರಾಳ ದಿನಾಚರಣೆ ಹಾಗೂ ವಿಜಯೋತ್ಸವ ಆಚರಣೆ ಮಾಡಬಹುದೆಂಬ ಕಾರಣಕ್ಕೆ ನಗರವೂ ಸೇರಿದಂತೆ ಜಿಲ್ಲೆಯ ಸೂಕ್ಷ್ಮ ಪ್ರದೇಶದಲ್ಲಿ ಶುಕ್ರವಾರ ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿತ್ತು.

ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಪೊಲೀಸರು ವ್ಯಾಪಕ ಕ್ರಮ ಕೈಗೊಂಡಿದ್ದರು. ಮಡಿಕೇರಿಯಲ್ಲಿ ನಿಷೇಧಾಜ್ಞೆಯನ್ನೂ ಜಾರಿಗೊಳಿಸಲಾಗಿತ್ತು. ನಗರದ ಪೇಟೆ ಶ್ರೀರಾಮಮಂದಿರ, ಚೌಕಿ ಹಾಗೂ ಜನರಲ್‌ ತಿಮ್ಮಯ್ಯ ವೃತ್ತ ಹಾಗೂ ಮಹದೇವಪೇಟೆಯಲ್ಲಿ ಹೆಚ್ಚಿನ ಪೊಲೀಸರು ಕಂಡುಬಂದರು. ಎಲ್ಲಿಯೂ ಅಹಿತಕರ ಘಟನೆ ನಡೆದಿಲ್ಲ.

ಪ್ರತಿಕ್ರಿಯಿಸಿ (+)