ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆ: ಗೌರಿ ಗಣೇಶ ಹಬ್ಬಕ್ಕೆ ಸಿದ್ಧತೆ

Published 17 ಸೆಪ್ಟೆಂಬರ್ 2023, 13:48 IST
Last Updated 17 ಸೆಪ್ಟೆಂಬರ್ 2023, 13:48 IST
ಅಕ್ಷರ ಗಾತ್ರ

ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಗೌರಿ ಗಣೇಶ ಹಬ್ಬ ಆಚರಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ.

ಸೋಮವಾರ ಒಂದೇ ದಿನದಲ್ಲಿ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಹಬ್ಬದ ಆಚರಣೆ ನಡೆಯಲಿದೆ.  ಮಳೆ ನಡುವೆಯೂ ಪ್ರತಿಷ್ಠಾಪನೆಗೆ ಆಯೋಜಕರು ಪೆಂಡಾಲ್ ನಿರ್ಮಿಸುತ್ತಿರುವುದು ಕಂಡುಬಂತು. ಕೆಲ ಸ್ಥಳಗಳಲ್ಲಿ ದೇವಾಲಯಗಳಲ್ಲಿ ಪೂಜಿಸಲಾಗುತ್ತಿದೆ. ಮಳೆಯಾದರೂ ಜನರ ಉತ್ಸಾಹಕ್ಕೇನು ಕೊರತೆಯಾಗಿಲ್ಲ.

ಕಳೆದ ಬಾರಿ ಹೂವಿಗೆ ₹100 ರಿಂದ ₹120 ರಷ್ಟಿದ್ದರೂ, ಈ ಬಾರಿ ಮಾತ್ರ ₹10,₹20 ಹಾಗೂ ₹30ಕ್ಕೆ ಮಾರಾಟವಾಗುತ್ತಿದೆ. ಆದರೂ, ಹೂವಿನ ವ್ಯಾಪಾರ ಮಾತ್ರ ಹೆಚ್ಚಾಗಿಲ್ಲ. ಸಾಕಷ್ಟು ಹೂವಿನ ವ್ಯಾಪಾರಿಗಳು ಕಳೆದ ಎರಡು ದಿನಗಳಿಂದಲೇ ಪಟ್ಟಣದ ಹಲವೆಡೆ ಮಾರಾಟದಲ್ಲಿ ತೊಡಗಿದ್ದಾರೆ.

 ಕೊಣನೂರಿನ ಶ್ರೀನಿವಾಸ್ ಮಾತನಾಡಿ, ‘ಈ ಬಾರಿ ಹೂವಿನ ವ್ಯಾಪಾರ ಸಾಧಾರಣವಾಗಿದೆ. ಕಡಿಮೆ ಬೆಲೆಯಾದರೂ, ಕೊಳ್ಳುವವರ ಸಂಖ್ಯೆ ಕಡಿಮೆ ಇದೆ. ಇದರೊಂದಿಗೆ ಆಗಾಗ ಮಳೆಯಾಗುತ್ತಿರುವುದು ವ್ಯಾಪಾರಕ್ಕೆ ತೊಡಕಾಗಿದೆ’ ಎಂದು ಹೇಳಿದರು.

ಗೌರಿ, ಗಣೇಶ ಮಣ್ಣಿನ ಮೂರ್ತಿ ಭಾನುವಾರವೇ ಕೊಂಡೊಯ್ಯುತ್ತಿರುವುದು ಕಂಡು ಬಂತು. ಎಲ್ಲೆಡೆ ಪರಿಸರ ಪೂರಕ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದು, ಎಲ್ಲಿಯೂ ಪಿಒಪಿ ಮೂರ್ತಿ ಕಂಡುಬರಲಿಲ್ಲ. ಸೋಮವಾರ ಬೆಳಿಗ್ಗೆಯಿಂದಲೇ  ಹಬ್ಬದ ಕಾರ್ಯ ಪ್ರಾರಂಭವಾಗುತ್ತಿದ್ದು, ಮಧ್ಯಾಹ್ನ 12ರ ಒಳಗೆ ಹೆಚ್ಚಿನ ಮೂರ್ತಿಗಳ ಪ್ರತಿಷ್ಠಾಪನೆ ಪೂರ್ಣಗೊಳ್ಳಲಿದೆ.

‘ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಂದರೆ 85 ಸ್ಥಳದಲ್ಲಿ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆದಿದ್ದು, ಇನ್ನೂ ಕೆಲವರು ಅನುಮತಿಗೆ ಬರುತ್ತಿದ್ದಾರೆ’ ಎಂದು ಇನ್ಸ್ ಪೆಕ್ಟರ್ ರಾಮಚಂದ್ರ ನಾಯಕ್ ತಿಳಿಸಿದರು.

ಸೋಮವಾರಪೇಟೆ ಪಟ್ಟಣದಲ್ಲಿ ಹೂವಿನ ವ್ಯಾಪಾರ ನಿರಸವಾಗಿದ್ದರಿಂದ ವ್ಯಾಪಾರಿಯೊಬ್ಬರು ಹೂವಿನ ವ್ಯಾಪಾರಕ್ಕೆ ಕಾಯುತ್ತಿರುವುದು.
ಸೋಮವಾರಪೇಟೆ ಪಟ್ಟಣದಲ್ಲಿ ಹೂವಿನ ವ್ಯಾಪಾರ ನಿರಸವಾಗಿದ್ದರಿಂದ ವ್ಯಾಪಾರಿಯೊಬ್ಬರು ಹೂವಿನ ವ್ಯಾಪಾರಕ್ಕೆ ಕಾಯುತ್ತಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT