ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶಾಲನಗರ | ನದಿಯಲ್ಲಿ ನೀರು ಕ್ಷೀಣ: ಚಲಚರ ರಕ್ಷಣೆ ಕಾರ್ಯಾಚರಣೆ

Published 20 ಏಪ್ರಿಲ್ 2024, 3:13 IST
Last Updated 20 ಏಪ್ರಿಲ್ 2024, 3:13 IST
ಅಕ್ಷರ ಗಾತ್ರ

ಕುಶಾಲನಗರ: ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ತಾಪಮಾನಕ್ಕೆ ಕಾವೇರಿ ನದಿಯಲ್ಲಿ ನೀರು ಸಂಪೂರ್ಣ ಕ್ಷೀಣಿಸಿದ್ದು, ಈ ಹಿನ್ನೆಲೆಯಲ್ಲಿ ಮೀನುಗಾರಿಕೆ ಇಲಾಖೆ ಹಾಗೂ ಅರಣ್ಯ ಇಲಾಖೆಯ ಜಂಟಿ ಕಾರ್ಯಚರಣೆ ಮೂಲಕ ಕಾವೇರಿ ನಿಸರ್ಗಧಾಮದ ಸೇತುವೆಯ ಕೆಳ ಭಾಗದ ನದಿಯಲ್ಲಿ ಅಳಿವಿನಂಚಿನಲ್ಲಿರುವ ಜಲಚರಗಳ ರಕ್ಷಣೆ ಕಾರ್ಯಾಚರಣೆ ಆರಂಭಿಸಿದೆ.

ಅಳಿವಿನಂಚಿನಲ್ಲಿರುವ ಅಪರೂಪದ ತಳಿ ಸರ್ಕಾರದ ರಕ್ಷಣೆಯಲ್ಲಿರುವ ಮಹಶೀರ್ ಮೀನು ಹಾಗೂ ರಾಜ್ಯದ ಮೀನು ಎಂದು ಕರೆಯಲ್ಪಡುವ ಗೆಂಡೆಮೀನ್ , ಸಣ್ಣ ಜಾತಿಯ ಮೀನುಗಳು ಸೇರಿದಂತೆ ಹಲವು ಮೀನುಗಳನ್ನು ರಕ್ಷಿಸಿ ಹಾರಂಗಿ ಜಲಾಶಯದ ಮುಂಭಾಗದಲ್ಲಿ ಇರುವ ನದಿಗೆ ಬಿಡಲಾಯಿತು.

ಹಾರಂಗಿ ಮೀನುಮರಿ ಉತ್ಪಾದನಾ ಕೇಂದ್ರದ ಸಹಾಯಕ ನಿರ್ದೇಶಕ ಸಚ್ಚಿನ್ ಮಾತನಾಡಿ, ಬಿಸಿಲಿನ ತಾಪಮಾನಕ್ಕೆ ಕಾವೇರಿ ನದಿಯಲ್ಲಿ ನೀರು ಕ್ಷೀಣಿಸುತ್ತಿದೆ. ಈ ಹಿನ್ನಲೆ ಅಳಿವಿನಂಚಿನಲ್ಲಿರುವ ಮೀನುಗಳ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಮಹಶೀರ್, ಗೆಂಡೆಮೀನು ಸೇರಿದಂತೆ ಹಲವು ಜಾತಿಯ ಮೀನುಗಳನ್ನು ರಕ್ಷಿಸಲಾಗಿದೆ ಎಂದರು.

ಮೀನುಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಚರಣ್, ಅರಣ್ಯ ವೀಕ್ಷಕ ರಾಕೇಶ್, ಅರಣ್ಯ ರಕ್ಷಕ ಹನುಮಂತ ರಾಯಪ್ಪ ಸೇರಿದಂತೆ ಮೀನುಗಾರಿಕೆ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT