ಮಡಿಕೇರಿ: ಕೊಡಗು ಜಿಲ್ಲೆಯ ಇಬ್ಬರು ಸಾಧಕರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಕೊಡಗು ಜಿಲ್ಲೆಯ ಅಮ್ಮತಿಯ ನೆಲ್ಲಮಕ್ಕಡ ಗಣೇಶ್ ಮುತ್ತಪ್ಪ ಮತ್ತು ಸರೋಜಾ ಅವರ ಪುತ್ರಿ ಬೊಳ್ಳರಿ ಮಾಡ್ ಪುಟ್ಟಿಚಂಡ ಬಬಿನಾ ನಂದ (ಡಾ.ಎನ್.ಎಂ.ಬಬಿನಾ) ಹಾಗೂ ಸೋಮವಾರಪೇಟೆ ಸಮೀಪದ ಕಾರೆಕೊಪ್ಪದ ನಟ ಜೈಜಗದೀಶ್ ಅವರ ಪತ್ನಿ ನಿರ್ಮಾಪಕಿ, ನಟಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.

ಡಾ.ಎನ್.ಎಂ.ಬಬಿನಾ ಅವರು ಈಗ ಬೆಂಗಳೂರಿನ 550 ಹಾಸಿಗೆಗಳ ಜಿಂದಾಲ್ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯಲ್ಲಿ  ಮುಖ್ಯ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ನೀಡುವುದು, ಕನ್ನಡದಲ್ಲಿ ಪುಸ್ತಕಗಳು, ಲೇಖನಗಳು, ಉಪನ್ಯಾಸಗಳು, ಟಿವಿ ಕಾರ್ಯಕ್ರಮಗಳನ್ನು ನೀಡುವುದು ಹಾಗೂ ಕನ್ನಡದಲ್ಲಿ ಆರೋಗ್ಯ ವಿಷಯಗಳ ಕುರಿತ ಮಾಧ್ಯಮ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಕನ್ನಡ ಭಾಷೆಯ ಸೇವೆಯಲ್ಲಿ ತೊಡಗಿದ್ದಾರೆ.

ಮಹಿಳಾ ಆರೋಗ್ಯ ಸಮಸ್ಯೆಗಳು, ಶ್ವಾಸಕೋಶ ಸಂಬಂಧಿತ ರೋಗಗಳು, ಜೀರ್ಣ ಮತ್ತು ನಿವಾರಣಾ ವ್ಯವಸ್ಥೆ, ತಡೆಯಬಹುದಾದ ರೋಗಗಳು, ಜೀವನಶೈಲಿ ಸಂಬಂಧಿತ ರೋಗಗಳು ಪುಸ್ತಕಗಳನ್ನು ರಚಿಸಿದ್ದಾರೆ.

ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಮ್ಮತ್ತಿಯಲ್ಲಿ, ಪ್ರೌಢಶಿಕ್ಷಣವನ್ನು ಮೈಸೂರಿನ ಕ್ರೈಸ್ಟ್ ದಿ ಕಿಂಗ್ ಕಾನ್ವೆಂಟ್ನಲ್ಲಿ, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಶ್ರೀ ಧರ್ಮಸ್ಥಳ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಕೋವಿಡ್–19 ಕಾಲಘಟ್ಟದಲ್ಲಿ ಇವರು ರೋಗನಿರೋಧಕ ಶಕ್ತಿ ವೃದ್ಧಿ ಹಾಗೂ ಉಸಿರಾಟ ಸಂಬಂಧಿತ ಸಮಸ್ಯೆಗಳ ನಿರ್ವಹಣೆಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆಗಳ ಪ್ರಾಯೋಗಿಕ ಮಾರ್ಗಗಳನ್ನು ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ದರು.

ಇದಲ್ಲದೇ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಅನೇಕ ಯೋಗ ಶಿಬಿರಗಳು ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಸಾವಿರಾರು ಜನರಿಗೆ ಆರೋಗ್ಯ ಸುಧಾರಣೆಯ ಮಾರ್ಗದರ್ಶನ ನೀಡಿದ್ದಾರೆ. ಪೊಲೀಸ್ ಇಲಾಖೆ, ಆದಾಯ ತೆರಿಗೆ ಇಲಾಖೆ, ರೋಟರಿ, ಲಯನ್ಸ್ ಕ್ಲಬ್, ಕಾಲೇಜುಗಳು, ಗ್ರಾಮೀಣ ಪ್ರದೇಶಗಳಿಗೆ ಆರೋಗ್ಯ ಉಪನ್ಯಾಸಗಳನ್ನು ನೀಡಿದ್ದಾರೆ.

ಇದುವರೆಗೂ ಅವರು ಸುಮಾರು 3 ಲಕ್ಷಕ್ಕೂ ಹೆಚ್ಚು ಒಳರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಬಡ ಹಾಗೂ ಹಿಂದುಳಿದ ವರ್ಗಗಳಿಗೆ ಉಚಿತ ಶಿಬಿರಗಳು, ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸಂಶೋಧನಾ ಕಾರ್ಯಗಳಿಂದ ಆಯುಷ್ ಪದ್ಧತಿಯ ವೈಜ್ಞಾನಿಕತೆ ಸಾಬೀತುಪಡಿಸಿ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತುತಪಡಿಸಿದ್ದಾರೆ.

ನಟಿ, ನಿರ್ಮಾಪಕಿ, ನಿರ್ದೇಶಕಿಗೆ ಒಲಿದ ಪ್ರಶಸ್ತಿ

ಕೊಡಗಿನ ಸೋಮವಾರಪೇಟೆ ಸಮೀಪದ ಕಾರೆಕೊಪ್ಪದ ಜೈಜಗದೀಶ್ ಅವರ ಪತ್ನಿ ವಿಜಯಲಕ್ಷ್ಮಿ ಸಿಂಗ್ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ಇವರು 48 ವರ್ಷಕ್ಕೂ ಹೆಚ್ಚು ಕಾಲ ಸುಮಾರು 60 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಪಿತಾಮಹ ವೀರ ಪರಂಪರೆ ರಾಜಕುಮಾರ ಬೆಂಕಿಯಲ್ಲಿ ಅರಳಿದ ಹೂವು ಮೊದಲಾದ ಚಿತ್ರಗಳಲ್ಲಿ ಮನೋಜ್ಞ ಅಭಿನಯ ಇವರದು. ‘ಈ ಬಂಧನ’ ‘ಮಳೆ ಬರಲಿ ಮಂಜು ಇರಲಿ’ ‘ವಾರೆವ’ ಯಾನ ಸ್ವೀಟಿ ನನ್ನ ಜೋಡಿ ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಒಟ್ಟು 25 ಚಿತ್ರಗಳನ್ನು ನಿರ್ಮಿಸಿರುವುದು ಇವರ ಹೆಗ್ಗಳಿಕೆ. ಇವರ ‘ಮುಂಗಾರಿನ ಮಿಂಚು’ ಚಲನಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ‘ಕುರಿಗಳು ಸಾರ್ ಕುರಿಗಳು’ ಚಲನಚಿತ್ರಕ್ಕೆ ರಾಜ್ಯಪ್ರಶಸ್ತಿ ‘ಕೋತಿಗಳು ಸಾರ್ ಕೋತಿಗಳು’ ಚಲನಚಿತ್ರಕ್ಕೆ ರಾಜ್ಯಪ್ರಶಸ್ತಿ ಹಾಗೂ ಫಿಲಂ ಫೇರ್ ಪ್ರಶಸ್ತಿ ಭೂಮಿ ತಾಯಿ ಚೊಚ್ಚಲ ಮಗ ಚಿತ್ರಕ್ಕೆ ಪರಿಸರ ರಾಜ್ಯ ಪ್ರಶಸ್ತಿ ಹೂ ಹಣ್ಣು ಚಿತ್ರಕ್ಕೆ ರಾಜ್ಯ ಪ್ರಶಸ್ತಿಗಳು ಕಾಂಚನಗಂಗಾ ಚಿತ್ರಕ್ಕೆ ರಾಜ್ಯಪ್ರಶಸ್ತಿ ಲಭಿಸಿವೆ.

ಕಿರುತೆರೆಯಲ್ಲೂ ತಮ್ಮ ಅಭಿನಯದ ಮೂಲಕ ಜನರ ಗಮನ ಸೆಳೆದಿದ್ದಾರೆ. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಪದವಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.