ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಬಹುದಾದ ಪ್ರದೇಶಗಳಲ್ಲಿರುವ ರೆಸಾರ್ಟ್ಗಳನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲದಿದ್ದರೆ, ಪ್ರತಿಭಟನೆ ನಡೆಸಲಾಗುವುದು ಎಂದು ಪರಿಸರವಾದಿಗಳು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಪರಿಸರವಾದಿ ಎನ್ವಿರಾಮೆಂಟ್ ಹಾಗೂ ಹೆಲ್ತ್ ಫೌಂಡೇಷನ್ನಿನ ನಿವೃತ್ತ ಕರ್ನಲ್ ಸಿ.ಪಿ.ಮುತ್ತಣ್ಣ ಮಾತನಾಡಿ, ‘2018ರಲ್ಲಿ ಭೂಕುಸಿತ ಸಂಭವಿಸಿದ ನಂತರವೂ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಬಹುದಾದ ಸ್ಥಳಗಳಲ್ಲಿ ರೆಸಾರ್ಟ್ಗಳು ತಲೆ ಎತ್ತಿವೆ. ಹಿಂದಿನ ಜಿಲ್ಲಾಧಿಕಾರಿ ಸುಮಾರು 33 ಎಕರೆ ಪ್ರದೇಶವನ್ನು ಭೂಪರಿವರ್ತನೆ ಮಾಡಿ ರೆಸಾರ್ಟ್ ನಿರ್ಮಿಸಲು ಅನುವು ಮಾಡಿಕೊಟ್ಟಿದ್ದಾರೆ. ಪ್ರಕೃತಿಯ ಎಚ್ಚರಿಕೆ ಗಂಟೆ ಅಧಿಕಾರಿಗಳ ಕಿವಿ ತಲುಪಿಲ್ಲ’ ಎಂದು ಕಿಡಿಕಾರಿದರು.

ಕೆಲವು ರೆಸಾರ್ಟ್ಗಳ ಸ್ಥಾಪನೆಗೆ ಅನುಮತಿ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿಯಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಉತ್ತರ ಬಂದಿದೆ. ಹಾಗಿದ್ದರೆ, ಜಿಲ್ಲಾಧಿಕಾರಿ ಮೌನ ವಹಿಸಿರುವುದಾದರೂ ಏಕೆ ಎಂದು ಪ್ರಶ್ನಿಸಿದರು.

ಅಕ್ರಮವಾಗಿ ರೆಸಾರ್ಟ್ ನಿರ್ಮಾಣಗೊಳ್ಳಲು ಕಾರಣರಾದ ತಪ್ಪು ಮಾಡಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು, ಅಕ್ರಮ ರೆಸಾರ್ಟ್ಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಈ ಕುರಿತ ಕಾನೂನು ಹೋರಾಟಕ್ಕೂ ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕೊಡಗನ್ನು ಉಳಿಸುವುದಕ್ಕಾಗಿ ಅಖಿಲ ಕೊಡವ ಸಮಾಜ, ಗೌಡ ಸಮಾಜಗಳು ಸೇರಿದಂತೆ ಎಲ್ಲ ಜಾತಿ, ಜನಾಂಗದ ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸಬೇಕಿದೆ. ಈ ಕುರಿತ ಬೃಹತ್ ಹೋರಾಟವನ್ನು ರೂಪಿಸಲಾಗುವುದು ಎಂದರು.

ಸಮಾಜ ಸೇವಕ ವೈ.ಡಿ.ಗೋಪಿನಾಥ್ ಮಾತನಾಡಿ, ‘ಹೊರಗಡೆಯಿಂದ ಬಂದು ಇಲ್ಲಿ ಬೆಟ್ಟದ ಮೇಲೆ ರೆಸಾರ್ಟ್ ನಿರ್ಮಿಸುವವರಿಗೆ ಹೊರಗೆ ಹೋಗಿ ಎಂದು ಹೇಳದ ಜಿಲ್ಲಾಡಳಿತ ಬೆಟ್ಟದ ಕೆಳಗೆ ವಾಸಿಸುವ ಇಲ್ಲಿನ ಮೂಲನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ತೆರಳಿ ಎಂದು ಸೂಚನೆ ಕೊಡುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಕ್ಕಳ ಗುಡಿ ಬೆಟ್ಟದ ಸಮೀಪ 2018ರಲ್ಲಿ ಭೂಕುಸಿತ ಉಂಟಾಗಿತ್ತು. ಇದಕ್ಕೆ ಸಮೀಪದಲ್ಲೇ ರೆಸಾರ್ಟ್ ನಿರ್ಮಿಸಲು ಜಿಲ್ಲಾಡಳಿತ ಭೂಪರಿವರ್ತನೆ ಮಾಡಿಕೊಟ್ಟಿದೆ. ಈ ವಿಚಾರ ಕುರಿತು ಕಿರಗಂದೂರು ಗ್ರಾಮಾಡಳಿತ ಮಂಡಳಿ ವತಿಯಿಂದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತ್ರವಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಿರಗಂದೂರು ಗ್ರಾಮಾಡಳಿತ ಮಂಡಳಿಯ ಅಧ್ಯಕ್ಷ ಸಿ.ಕೆ.ಚಿದಾನಂದ, ಕಾರ್ಯದರ್ಶಿ ಬಿ.ಬಿ.ರಷಿನ್ಕುಮಾರ್, ಗ್ರಾಮಸ್ಥರಾದ ಕೆ.ಜಿ.ನಿತಿನ್, ಎಸ್.ಸಿ.ಗಿರೀಶ್ ಭಾಗವಹಿಸಿದ್ದರು.

2018ರ ಭೂಕುಸಿತದ ನಂತರವೂ ರೆಸಾರ್ಟ್ಗಳ ನಿರ್ಮಾಣ ಬೆಟ್ಟದ ಮೇಲೆ, ಅಪಾಯಕಾರಿ ಸ್ಥಳದಲ್ಲಿ ಕಾಮಗಾರಿ ಮೌನ ವಹಿಸಿದ ಜಿಲ್ಲಾಡಳಿತದ ವಿರುದ್ಧ ಆಕ್ರೋಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.