ಮಡಿಕೇರಿ: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್‌ನ 19ನೇ ವರ್ಷದ ಅಧ್ಯಕ್ಷರಾಗಿ ಪ್ರಮೋದ್ ಕುಮಾರ್ ರೈ ಮತ್ತು ಕಾರ್ಯದರ್ಶಿಯಾಗಿ ರತ್ನಾಕರ್ ರೈ ಆಯ್ಕೆಯಾಗಿದ್ದಾರೆ.
ಇವರ ಆಡಳಿತ ಮಂಡಳಿಯ ಪದಗ್ರಹಣ ಕಾರ್ಯಕ್ರಮ ಜುಲೈ 4 ರಂದು ಸಂಜೆ 6.30ಕ್ಕೆ ಮಡಿಕೇರಿಯ ಹೊರವಲಯದಲ್ಲಿನ ಆಹನ್ ಹಿಲ್ ಕಾಟೇಜ್‌ನಲ್ಲಿ ನಡೆಯಲಿದ್ದು, ರೋಟರಿ ಜಿಲ್ಲೆ 3181ರ ಮುಂದಿನ ಸಾಲಿನ ನಿಯೋಜಿತ ಗವರ್ನರ್ ವಿಕ್ರಂದತ್ತ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ.
ಸಹಾಯಕ ಗವರ್ನರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್, ನಿರ್ಗಮಿತ ಅಧ್ಯಕ್ಷ ಪ್ರಸಾದ್‌ಗೌಡ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.