ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರ ಕ್ರಿಕೆಟ್‌ ಟೂರ್ನಿ: ಹರಾಜು

Last Updated 8 ಮಾರ್ಚ್ 2021, 5:29 IST
ಅಕ್ಷರ ಗಾತ್ರ

ವಿರಾಜಪೇಟೆ: ಪಟ್ಟಣದಲ್ಲಿ ಮಾರ್ಚ್‌ 19 ರಿಂದ ನಡೆಯಲಿರುವ ಐಪಿಎಲ್ ಮಾದರಿಯ ಹಿರಿಯರ ಲೆಜೆಂಡ್ಸ್ ಕ್ರಿಕೆಟ್‌ ಲೀಗ್‌ನ ಹರಾಜು ಪ್ರಕ್ರಿಯೆ ಸಮೀಪದ ಪೆರುಂಬಾಡಿಯಲ್ಲಿ ಭಾನುವಾರ ನಡೆಯಿತು.

ಈಗಾಗಲೇ ನೋಂದಾಣಿ ಮಾಡಿಸಿಕೊಂಡಿದ್ದ ಸುಮಾರು 168 ಆಟಗಾರರನ್ನು ಟೂರ್ನಿಯಲ್ಲಿ ಭಾಗವಹಿಸುವ 12 ತಂಡಗಳ ಮಾಲೀಕರು ಪಾಯಿಂಟ್‌ ಲೆಕ್ಕದಲ್ಲಿ ಖರಿದಿಸಿದರು.

ಭಾನುವಾರ ಬೆಳಿಗ್ಗೆ ಆರಂಭಗೊಂಡ ಹರಾಜು ಪ್ರಕ್ರಿಯೆ ಸಂಜೆಯವರೆಗೂ ನಡೆಯಿತು. ಟೂರ್ನಿಯಲ್ಲಿ ಎಂ.ವೈ.ಸಿ.ಸಿ ಕ್ರೌನ್ಸ್, ಚಾಲೆಂಜರ್ಸ್, ರೈಸಿಂಗ್ ಲೆಜೆಂಡ್ಸ್, ಸಿಟಿ ಸ್ಟಾರ್, ಸಿ.ಡಿ ಕ್ರಿಕೆಟರ್ಸ್, ಕಲ್ಲು ಸ್ಟಾರ್ಸ್, ಆರ್.ಇ.ಎಫ್ ಕ್ರಿಕೆಟರ್ಸ್, 3 ಸ್ಟಾರ್ಸ್, ಬೂಮ್ ಇಲೆವೆನ್, ಲ್ಯಾಂಪಿಯಾರ್ಡ್ ಹಾಗೂ ಅಭಿಮನ್ಯು ಕ್ರಿಕೆಟರ್ಸ್ ತಂಡಗಳು ಭಾಗವಹಿಸಲಿವೆ.

ಪಟ್ಟಣದ ಕೌಬಾಯ್ಸ್ ತಂಡದ ಸಾರಥ್ಯದಲ್ಲಿ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಮೈದಾನದಲ್ಲಿ ಮಾರ್ಚ್‌ 19 ರಿಂದ 21 ರವರೆಗೆ ಟೂರ್ನಿ ನಡೆಯಲಿದೆ. ಟೂರ್ನಿ ವಿಶೇಷವೆಂದರೆ ಕನಿಷ್ಠ 35 ವರ್ಷ ಮೇಲ್ಪಟ್ಟವರು ಮಾತ್ರ ಭಾಗವಹಿಸಲಿದ್ದಾರೆ. ಲೀಗ್ ಮಾದರಿಯಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಪಂದ್ಯ 6 ಓವರ್‌ಗಳಿಗೆ ಸೀಮಿತವಾಗಿದೆ.

ಅಂತರರಾಷ್ಟ್ರೀಯ ರಗ್ಬಿ ಆಟಗಾರ ಹಾಗೂ ಚಾಲೆಂಜರ್ಸ್ ತಂಡದ ತಿಮ್ಮಯ್ಯ ಮಾತನಾಡಿ, ‘ಹೊರ ದೇಶದಲ್ಲಿ ಹಿರಿಯರ ವಿವಿಧ ರೀತಿಯ ಕ್ರೀಡಾಕೂಟಗಳು ಆಗಾಗ ನಡೆಯುತ್ತಿರುತ್ತದೆ. ಆದರೆ, ನಮ್ಮ ದೇಶದಲ್ಲಿ ಇಂಥ ಕ್ರೀಡಾಕೂಟಗಳು ಅಪರೂಪ. ಹಿರಿಯರ ಕ್ರೀಡಾಕೂಟಗಳು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ’ ಎಂದರು.

ಎಂ.ವೈ.ಸಿ.ಸಿ ತಂಡದ ಸುದೇಶ್ ಮಾತನಾಡಿ, ‘ಟೂರ್ನಿ ಆಯೋಜಿಸುವುದರಿಂದ ಹಲವು ವರ್ಷಗಳ ಬಳಿಕ ಮತ್ತೆ ಮೈದಾನದ ಕಡೆ ಮುಖ ಮಾಡಲು ಪ್ರೇರೇಪಿಸಿದಂತಾಗುತ್ತದೆ. ಹಿರಿಯರೆಲ್ಲ ಜೊತೆ ಸೇರುವುದರಿಂದ ಹಳೆಯ ನೆನೆಪುಗಳು ಮರುಕಳಿಸಿ ಸಂತಸದ ಕ್ಷಣಗಳನ್ನು ಕಳೆಯಲು ಸಾಧ್ಯವಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಲ್ಲು ಸ್ಟಾರ್ಸ್ ತಂಡದ ಆರ್.ಕೆ. ಅಬ್ದುಲ್ ಸಲಾಂ, ಚಾಲೆಂಜರ್ಸ್ ತಂಡದ ಶ್ರೀಕಾಂತ್ ಮತ್ತಿರರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT