ಕುಶಾಲನಗರ: ಉತ್ತರ ಕೊಡಗಿನ ಅರೆಮಲೆನಾಡು ಹಾಗೂ ಬಯಲುಸೀಮೆ ಪ್ರದೇಶವಾದ ಶಿರಂಗಾಲದಲ್ಲಿ ಸೋಮವಾರ ಹೊಳೆಗುಂಡಿ ಜಾತ್ರೆ ಎಂದೇ ಪ್ರಸಿದ್ಧಿಯಾಗಿರುವ ಉಮಾಮಹೇಶ್ವರ ಸ್ವಾಮಿ ವಾರ್ಷಿಕ ರಥೋತ್ಸವ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಗ್ರಾಮದ ಕಾವೇರಿ ನದಿ ದಂಡೆ ಮೇಲಿರುವ ಇತಿಹಾಸ ಪ್ರಸಿದ್ಧ ಉಮಾಮಹೇಶ್ವರ ದೇವಾಲಯ ಹಾಗೂ ಮಂಟಿಗಮ್ಮ ದೇವಾಲಯ ಸಮಿತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ವೈಶಿಷ್ಟ್ಯಪೂರ್ಣವಾಗಿ ರಥೋತ್ಸವ ಆಚರಿಸಿ ಸಂಭ್ರಮಿಸಿದರು.

ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಅರ್ಚಕ ಗಣೇಶ್ ಹಾಗೂ ಸಚಿನ್ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು. ದೇವಸ್ಥಾನದ ವಾರ್ಷಿಕ ರಥೋತ್ಸವದಲ್ಲಿ ಕೊಡಗು ಜಿಲ್ಲೆ ಸೇರಿದಂತೆ ನೆರೆಯ ಹಾಸನ ಮತ್ತು ಮೈಸೂರು ಜಿಲ್ಲೆಗಳ ಗಡಿಭಾಗದ ಗ್ರಾಮಗಳ
ಭಕ್ತರು ಭಾಗಿಯಾಗಿ ತೇರು ಎಳೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು.

ಪುಷ್ಪ ಹಾಗೂ ವಿವಿಧ ಧ್ವಜಗಳಿಂದ ಅಲಂಕೃತಗೊಂಡಿದ್ದ ತೇರಿನಲ್ಲಿ ಉಮಾಮಹೇಶ್ವರ ದೇವರ ವಿಗ್ರಹ ಪ್ರತಿಷ್ಠಾಪಿಸಲಾಯಿತು. ಅಲಂಕೃತ ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಧ್ಯಾಹ್ನ 1 ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಕಲಾವಿದ ಉದ್ದೂರು ಹೊಸಳ್ಳಿಯ ರವಿ ನೇತೃತ್ವದ ವೀರಗಾಸೆ ಕುಣಿತ ಮತ್ತು ಮಂಡ್ಯದ ಡೊಳ್ಳು ಕುಣಿತ ಕಲಾಪ್ರದರ್ಶನ ರಥೋತ್ಸವಕ್ಕೆ ಮೆರುಗು ನೀಡಿತು.

ಭಕ್ತರು ರಥವನ್ನು ದೇವಾಲಯ ಬಳಿಯಿಂದ ಗ್ರಾಮದ ಪ್ರಮುಖ ಬೀದಿ ಮೂಲಕ ಸಂತೆಮಾಳದವರೆಗೂ ಎಳೆದರು. ರಥೋತ್ಸವದ ಮೆರವಣಿಗೆಯಲ್ಲಿ ಪೂಜೆ ಸಲ್ಲಿಸಿದರು. ಈಡುಗಾಯಿ, ಹಣ್ಣು ಜವನ ರಥಕ್ಕೆ ಎಸೆದು ಭಕ್ತಿ ಮೆರೆದರು.

ಮೆರವಣಿಗೆ ಸಂದರ್ಭ ಗ್ರಾಮಸ್ಥರು ಭಕ್ತರಿಗೆ ಮಜ್ಜಿಗೆ, ಪಾನಕ ವಿತರಿಸಿದರು. ಈ ಜಾತ್ರೆ ಸುತ್ತಮುತ್ತಲಿನ ಅಪಾರ ಭಕ್ತರು ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿ ಪುನೀತರಾದರು. ಭಕ್ತರಿಗೆ ದೇವಾಲಯ ಸಮಿತಿಯಿಂದ ಅನ್ನಸಂತರ್ಪಣೆ ನೆರವೇರಿಸಲಾಯಿತು.

ರಥೋತ್ಸವದ ಅಂಗವಾಗಿ ದೇವಸ್ಥಾನವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ಹಸಿರು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನ ಸಮಿತಿ ಅಧ್ಯಕ್ಷ ನೇಮೇಶ್ ಕಾರ್ಯದರ್ಶಿ ಎಸ್.ಟಿ.ವೆಂಕಟೇಶ್ ನೇತೃತ್ವದಲ್ಲಿ ವಾರ್ಷಿಕ ರಥೋತ್ಸವದ ವಿವಿಧ ಪೂಜಾ ಕೈಂಕರ್ಯಗಳು ನಡೆದವು.

ದೇವಾಲಯ ಸಮಿತಿ ಉಪಾಧ್ಯಕ್ಷ ಬೋಜರಾಜ್, ಮುಖಂಡರಾದ ಉಮೇಶ್, ಎಸ್.ಎಸ್.ಕಾಳಿಂಗಪ್ಪ, ಎಸ್.ಕೆ.ಪ್ರಸನ್ನ, ಬಿ.ಎಸ್.ಬಸವಣ್ಣಯ್ಯ, ಬಸವರಾಜು, ಎಸ್.ವಿ.ನಂಜುಂಡಪ್ಪ, ಜಯಪ್ರಕಾಶ್, ಎಸ್.ವಿ.ಶಿವಾನಂದ, ಧರಣೇಂದ್ರ ಕುಮಾರ್, ಸಿ.ಎನ್.ಲೋಕೇಶ್, ಯೋಗೇಶ್, ರಮೇಶ್, ಪ್ರಸನ್ನ, ಷಡಕ್ಷರಿ, ಚೇತನ್, ಶಿವಾನಂದ, ಮಹೇಶ್, ವೀರಭದ್ರಪ್ಪ, ಸೋಮಣ್ಣ, ಹರ್ಷ ಇದ್ದರು. ರಥೋತ್ಸವ ಅಂಗವಾಗಿ ಯುವಕ ಸಂಘದಿಮದ ವಾಲಿಬಾಲ್ ಕ್ರೀಡಾಕೂಟ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.