ಮಾಂಸ ಮೀನು ಖರೀದಿಸಲು ತೆರಳಿದರೆ ನಾಯಿಗಳು ದುರುಗುಟ್ಟಿ ನಿಲ್ಲುತ್ತವೆ. ಖರೀದಿ ಮಾಡಲು ಭಯಪಡುವಂತಾಗಿದೆ. ಸಂಬಂಧಪಟ್ಟವರು ಕೂಡಲೇ ಗಮನ ಹರಿಸಬೇಕಿದೆ
ಜಿ.ವಿ.ಕುಮಾರಿ ಸ್ಥಳೀಯ ನಿವಾಸಿ
ಮಳೆ ಕಡಿಮೆಯಾದ ಕೂಡಲೇ ಕ್ರಮ
ಬೇರೆ ಕಡೆಗಳಿಂದ ತಂದು ಸುಂಟಿಕೊಪ್ಪದಲ್ಲಿ ನಾಯಿಗಳನ್ನು ಬಿಡಲಾಗುತ್ತಿದೆ. ಆ ಕಾರಣದಿಂದ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು ಮಕ್ಕಳ ಮೇಲೆ ದಾಳಿ ನಡೆಸುತ್ತಿರುವುದನ್ನು ಮನಗಂಡು ನಾಯಿಗಳನ್ನು ಹಿಡಿಯುವ ತಂಡಕ್ಕೆ ಮಾಹಿತಿ ನೀಡಿದ್ದೇವೆ. ಆದರೆ ಮಳೆಗಾಲವಾದ್ದರಿಂದ ಹಿಡಿಯಲು ಸಾದ್ಯವಿಲ್ಲ. ಮಳೆ ಕಡಿಮೆಯಾದ ಕೂಡಲೇ ಆಗಮಿಸಲಿದ್ದಾರೆ ಎಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಹೇಳಿದರು.