ಭಾನುವಾರ, ಮೇ 9, 2021
23 °C
ಎಎಸ್‌ಐ ಮೇಲೆ ಹಲ್ಲೆ: ಮದ್ಯ ವ್ಯಸನಿಯ ಬಂಧನ

ಹಾರಂಗಿ ಜಲಾಶಯಕ್ಕೆ ಹಾರಿ ಪ್ರೇಮಿಗಳ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಶಾಲನಗರ: ಪ್ರೇಮಿಗಳ ದಿನವಾದ ಶುಕ್ರವಾರವೇ, ಪ್ರೇಮಿಗಳಿಬ್ಬರು ಹಾರಂಗಿ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕೊತ್ತೇಗಾಲದ ನಾಗಣ್ಣ ಅವರ ಪುತ್ರ ಸಚಿನ್ (24) ಹಾಗೂ ಯಮಗುಂಬ ಗ್ರಾಮದ ಜಲೇಂದ್ರ ಅವರ ಪುತ್ರಿ ಸಿಂಧು (19) ಆತ್ಮಹತ್ಯೆ ಮಾಡಿಕೊಂಡವರು.

ಹಾರಂಗಿ ಜಲಾಶಯ ವೀಕ್ಷಣೆಗಾಗಿ ಬಂದಿದ್ದ ಇವರು, ಮಧ್ಯಾಹ್ನದವರೆಗೆ ಉದ್ಯಾನದಲ್ಲಿ ಸಮಯ ಕಳೆದಿದ್ದಾರೆ. ನಂತರ ಜಲಾಶಯದ ಎಡಭಾಗದ ಕಾಡಿನಿಂದ ತೆರಳಿ ಇಬ್ಬರೂ ಜಲಾಶಯಕ್ಕೆ ಜಿಗಿದಿದ್ದಾರೆ.

‘ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಸಿಂಧುಗೆ ಪಿರಿಯಾಪಟ್ಟಣ ಯುವಕನ ಜೊತೆ ವಿವಾಹ ನಿಶ್ಚಯವಾಗಿತ್ತು. ಭಾನುವಾರ ಮದುವೆ ನಿಗದಿಯಾಗಿತ್ತು. ಇದರಿಂದ ಮನನೊಂದು ಇಬ್ಬರೂ ಆತ್ಮಹತ್ಯೆಗೆ ನಿರ್ಧರಿಸಿರಬಹುದು’ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆಯ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಪೋಷಕರ ಅಕ್ರಂದನ ಮುಗಿಲು ಮುಟ್ಟಿತ್ತು. ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು