ನಾಪೋಕ್ಲು: ಪಟ್ಟಣದ ಮನೆಯೊಂದರ ಮುಂದೆ ಸುವರ್ಣಧಾರೆ ಹೂಗಳ ರಾಶಿ ಅರಳಿದ್ದು ಸೌಂದರ್ಯದಿಂದ ಕಂಗೊಳಿಸುತ್ತಿವೆ. ಇವು ಚಳಿಗಾಲದ ಹೂಗಳು. ಚಳಿ ಹೆಚ್ಚಿದಷ್ಟೂ ಹೂಗಳು ಅರಳುವುದು ಹೆಚ್ಚು. ಸುವರ್ಣಧಾರೆ ಹೂಗಳು ಈಗ ಮನೆಗಳ, ಮನೆಗಳ ಗೋಡೆಗಳ ಅಂದವನ್ನು ಹೆಚ್ಚಿಸಿ ಆಕರ್ಷಿಸುತ್ತಿವೆ.

ಉದ್ಯಾನ ಕಲೆಯತ್ತ ಒಲವು ಹೆಚ್ಚುತ್ತಿರುವ ಈ ದಿನಗಳಲ್ಲಿ ಮನೆಯ ಮುಂದೆ ಅಂದದ ಹೂದೋಟ ನಿರ್ಮಿಸಿ ಮನೆಯ ಸೌಂದರ್ಯ ಇಮ್ಮಡಿಸುವಂತೆ ಮಾಡುವವರು ಹಲವರು. ಕಾಲಕಾಲಕ್ಕೆ ತಕ್ಕಂತೆ ಅರಳುವ ಹೂಗಿಡಗಳನ್ನು ನೆಟ್ಟು ಪೋಷಿಸಿದರೆ ಮನೆ ಉದ್ಯಾನವಾಗಿ ಕಣ್ಮನ ಸೆಳೆಯುತ್ತದೆ. ಸುವರ್ಣಧಾರೆಯು ಮನೆಯ ಸೌಂದರ್ಯವನ್ನು ಹೆಚ್ಚಿಸುವ ಬಳ್ಳಿ. ಮನೆಯೆದುರಿನ ಗೇಟಿಗೆ, ಕಾಂಪೌಂಡಿಗೆ, ಮನೆಯ ಮಾಡಿಗೆ ಬಳ್ಳಿಯನ್ನು ಹಬ್ಬಿಸಿದರೆ ಆ ಮನೆಯತ್ತ ದೃಷ್ಟಿ ಹಾಯಿಸದೇ ಇರುವವರೇ ಇಲ್ಲ. ಏಕೆಂದರೆ ಮನೆಯ ಎದುರು ಚಳಿಗಾಲದಲ್ಲಿ ಹೂಗಳ ರಾಶಿಯನ್ನೇ ಕಾಣಬಹುದು. ನಾಪೋಕ್ಲು ಪಟ್ಟಣದ ರಫೀಕ್ ಅವರು ವಾಹನ ನಿಲುಗಡೆಗೆ ನಿರ್ಮಿಸಿರುವ ಶೆಡ್ ಹಾಗೂ ಮನೆಯ ಗೋಡೆಗಳಲ್ಲಿ ಈ ಹೂವಿನ ಬಳ್ಳಿ ಹಬ್ಬಿದ್ದು ಕಿತ್ತಳೆ ಹಳದಿ ಬಣ್ಣದ ಹೂಗಳಿಂದ ಮನಸೆಳೆಯುತ್ತಿದೆ.

ಸುವರ್ಣಧಾರೆ ಚಳಿಗಾಲದಲ್ಲಿ ಅರಳುವ ಹೂಗಳು. ಇದರ ವೈಜ್ಞಾನಿಕ ಹೆಸರು ಬಿಗ್ನೋನಿಯ. ಹೂವಿನ ಆಕಾರ ನಾಳದಂತೆ. ಹೂ ಬಿಡುವಾಗ ಎಲೆಗಳಲ್ಲವೂ ಹೂವಿನಿಂದ ಮುಚ್ಚಿ ಹೋಗುತ್ತದೆ. ಹೂವುಗಳು ಗೊಂಚಲು ಗೊಂಚಲಾಗಿ ಹಾರದಂತೆ ಇಳಿಬಿದ್ದು ನೋಡುಗರ ಮನಸೆಳೆಯುತ್ತವೆ. ಸುವರ್ಣಧಾರೆಯ ಬಳ್ಳಿಗಳನ್ನು ಗೋಡೆಗಳನ್ನು ಮುಚ್ಚಲು, ಮನೆಯ ಮುಂದಿನ ಗೇಟುಗಳಲ್ಲಿ ಹಬ್ಬಿಸಲು ಬೆಳೆಸುತ್ತಾರೆ. ಇವು ಹಗುರ ಬಳ್ಳಿಗಳಾಗಿದ್ದು ಸುಲಭವಾಗಿ ಬೆಳೆದು ಹರಡಬಲ್ಲವು. ನಾಳಾಕಾರದ ಹೂಗಳ ತುದಿಯಲ್ಲಿ ಐದು ದಳಗಳು ಹರಡಿರುತ್ತವೆ. ನಿತ್ಯ ಹಸುರಿನ ಬಳ್ಳಿಯಾಗಿದ್ದು ಬಹುಬೇಗನೆ ಹಬ್ಬಿ ಮುಚ್ಚುತ್ತವೆ. ಚಳಿಗಾಲದಲ್ಲಿ ಎಲೆಗಳೆಲ್ಲಾ ಹೂವಿನಿಂದಲೇ ಮುಚ್ಚಿಹೋಗುವುದರಿಂದ ಆಲಂಕಾರಿಕ ಹೂಗಳು ಸೊಬಗು ತೋರುತ್ತವೆ. ಇದನ್ನು ಗೋಲ್ಡನ್ ಶವರ್ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಪೈರೋ ಸ್ಟೀಜಿಯಾ ವೆನುಸ್ಟಾ ಎಂಬುದು ಸಸ್ಯಶಾಸ್ತ್ರೀಯ ಹೆಸರು.

ಗೋಡು ಮಣ್ಣು ಮರಳು ಹಾಗೂ ಗೊಬ್ಬರ ಮಿಶ್ರಿತ ಮಣ್ಣಿನಲ್ಲಿ ಚೆನ್ನಾಗಿ ಹಬ್ಬಿ ಬೆಳೆಯುತ್ತದೆ. ಸಾಕಷ್ಟು ನೀರು ಬೇಕು. ಈ ಬಳ್ಳಿಯನ್ನು ಒಣಗುವುದಕ್ಕೆ ಬಿಡಬಾರದು. ಸುವರ್ಣಧಾರೆಯ ಬಳ್ಳಿಯ ಕೃಷಿ ಸುಲಭ ತುಂಡುಗಳಿಂದ ಹೆಚ್ಚಿಸಿಕೊಳ್ಳಬಹುದು. ಸೂರ್ಯನ ಬೆಳಕು ಧಾರಾಳವಾಗಿ ಸಿಕ್ಕಿದಲ್ಲಿ ರಾಶಿ ರಾಶಿ ಹೂಗಳು ಬಿಡುತ್ತವೆ. ಮನೆಯ ಗೋಡೆಗಳಲ್ಲಿ ಚಾವಣಿಯಲ್ಲಿ ಕಿತ್ತಳೆ ಬಣ್ಣದ ಸುವರ್ಣಧಾರೆ ಹಬ್ಬಿ ಹೂ ಅರಳಿತೆಂದರೆ ಸೌಂದರ್ಯರಾಶಿಯೇ ಮೈದಳೆದಂತೆ.

ಬಿಗ್ನೋನಿಯ ಬಳ್ಳಿಗಳಲ್ಲಿ ಇನ್ನೂ ಸಾಕಷ್ಟು ವಿಧಗಳಿವೆ. ಅಗಲವಾಗಿ ಹರಡಿಕೊಂಡು ಬೆಳೆಯುವ ಬಿಗ್ನೋನಿಯ ಚೆಂಬರ್ಲೇನ್ಐ, ಗೋಡೆಗಳಲ್ಲಿ ತಾನಾಗಿಯೇ ಹತ್ತಿ ಬೆಳೆಯುವ ಬಿಗ್ನೋನಿಯಗ್ರಾಸಿಲಿಸ್, ಹೊಳಪಿನಿಂದ ಕೂಡಿದ ಬಿಗ್ನೋನಿಯ ಚಿರೆರೆ, ವರ್ಷದಲ್ಲಿ ಹಲವು ಬಾರಿ ಹೂಗಳನ್ನು ಬಿಡುವ ಬಿಗ್ನೋನಿಯ ಪರಫ್ಯೂರಿಯ, ಬೇಸಿಗೆಯಲ್ಲಿ ಹೆಚ್ಚಾಗಿ ಹೂ ಬಿಡುವ ಗೊಂಚಲು ಗೊಂಚಲಾದ ಹೂಗಳ ಬಿಗ್ನೋನಿಯ ಮ್ಯಾಗ್ನಿಫಿಕಾ, ಹಾಗೂ ನೀಲಿಕೆಂಪು ಪಟ್ಟಿಗಳಿರುವ ಹೂಗಳಲ್ಲಿ ಬಿಗ್ನೋನಿಯ ಇನ್ಕಾರ್ನೇಟ್ ಉತ್ತಮವಾದ ಬಳ್ಳಿಗಳು. ಮನೆಯ ಅಲಂಕಾರಕ್ಕೆ ಹೇಳಿ ಮಾಡಿಸಿದ ಬಳ್ಳಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.