ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಕ್ ಬಾಕ್ಸಿಂಗ್‌ನಲ್ಲಿ ಕೊಡಗಿನ ಪ್ರತಿಭೆಗಳು ಅಂತರರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆ

ಕುಶಾಲನಗರದ ಅಮಿತ್, ನವೀನ್ ಅವರ ಸಾಧನೆ
Last Updated 13 ಜನವರಿ 2020, 14:24 IST
ಅಕ್ಷರ ಗಾತ್ರ

ಮಡಿಕೇರಿ: ಕಿಕ್ ಬಾಕ್ಸಿಂಗ್‌ನಲ್ಲಿ ಕೊಡಗಿನ ಇಬ್ಬರು ಪ್ರತಿಭೆಗಳೂ ಅಂತರರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಕುಶಾಲನಗರದ ಅಮಿತ್ ಕಳೆದ ಡಿಸೆಂಬರ್‌ನಲ್ಲಿ ಗೋವಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್‌ನ 60 ಕೆ.ಜಿ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ಇಂಡಿಯನ್ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ಫೆಡರೇಷನ್ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಾರತದ ವಿವಿಧ ರಾಜ್ಯಗಳ ನೂರಾರು ಫೈಟರ್ಸ್‌ಗಳು ಪಾಲ್ಗೊಂಡಿದ್ದರು. ಅಮಿತ್ ಅಂತಿಮವಾಗಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಮುಂದಿನ ತಿಂಗಳು ಮೈಸೂರಿನಲ್ಲಿ ದೇಶದ ಪ್ರಮುಖ ಚಾಂಪಿಯನ್ಸ್‌ಗಳ ಮಧ್ಯೆ ಫೈಟ್ ನಡೆಯಲಿದ್ದು ಅದರಲ್ಲಿ ಆಯ್ಕೆಯಾಗುವವರು ಸಿಂಗಾಪುರದಲ್ಲಿ ನಡೆಯುವ ಅಂತರರಾಷ್ಟ್ರೀಯ ಸ್ಪರ್ಧೆಗೆ ಅವಕಾಶ ಗಿಟ್ಟಿಸಲಿದ್ದಾರೆ.

ಕಳೆದ ಒಂಭತ್ತು ವರ್ಷಗಳಿಂದ ಈ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ಇವರು ಮೈಸೂರಿನಲ್ಲಿ ಸ್ಯಾಂ ಅವರಿಂದ ತರಬೇತಿ ಪಡೆದು ಮೈಸೂರು ಜಿಲ್ಲೆಯನ್ನು ಪ್ರತಿನಿಧಿಸಿ ಹಲವು ಪದಕಗಳನ್ನು ಜಯಿಸಿದ್ದಾರೆ.

ನವೀನ್ ಕೂಡ ನಾಸಿಕ್‌ನಲ್ಲಿ ನಡೆದ ಸ್ಪರ್ಧೆಯ 56 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಈ ಮೂಲಕ ಕೊಡಗು ಜಿಲ್ಲೆಗೆ ಕಿಕ್ ಬಾಕ್ಸಿಂಗ್‌ನಲ್ಲಿ ಮೊತ್ತ ಮೊದಲ ಪದಕ ತಂದ ಕೀರ್ತಿ ಇವರದ್ದು.

ಇತರ ಕ್ರೀಡೆಗಳಿಗೆ ಹೋಲಿಸಿದ್ದಲ್ಲಿ ಇದು ಬಹಳಷ್ಟು ಅಪಾಯಕಾರಿ ಮತ್ತು ಸವಾಲಿನ ಕ್ರೀಡೆ ಕಿಕ್‌ ಬಾಕ್ಸಿಂಗ್‌ ಎನ್ನುತ್ತಾರೆ ಪರಿಣಿತರು.

ಈ ಕ್ರೀಡೆಯಲ್ಲಿ ದೈಹಿಕ ಕ್ಷಮತೆ ಕಾಪಾಡಿಕೊಳ್ಳಲು ಪ್ರತಿದಿನ ಪೌಷ್ಟಿಕಯುಕ್ತ ಆಹಾರ ಸೇವಿಸಲು ಮತ್ತು ತರಬೇತಿ ಪಡೆಯಲು ಸಾವಿರಾರು ರೂಪಾಯಿ ವೆಚ್ಚ ಮಾಡಬೇಕು. ಆದರೆ, ಆರ್ಥಿಕವಾಗಿ ಅಷ್ಟೇನು ಸದೃಢರಲ್ಲದ ಇಬ್ಬರು ಕ್ರೀಡಾಪುಟಗಳು ಬಹಳಷ್ಟು ಬಾರಿ ಸಂಕಷ್ಟಕ್ಕೆ ಸಿಲುಕಿದ್ದೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT