ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಶಾಲನಗರ: ವಿಜೃಂಭಣೆಯ ದೊಡ್ಡಮ್ಮ ತಾಯಿ ರಥೋತ್ಸವ

ಬೆಂಕಿಕೊಂಡ ಹಾಯ್ದು ಭಕ್ತಿ ಮೆರೆದ ಭಕ್ತರು
Published 4 ಜೂನ್ 2024, 2:24 IST
Last Updated 4 ಜೂನ್ 2024, 2:24 IST
ಅಕ್ಷರ ಗಾತ್ರ

ಕುಶಾಲನಗರ: ಕೂಡುಮಂಗಳೂರು ಮತ್ತು ಕೂಡ್ಲೂರು ಗ್ರಾಮದ ಗ್ರಾಮ ದೇವತೆ ದೊಡ್ಡಮ್ಮ ತಾಯಿಯ ರಥೋತ್ಸವ ಮತ್ತು ಜಾತ್ರೋತ್ಸವ ಶ್ರಧ್ಧಾಭಕ್ತಿಯೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಗ್ರಾಮ ದೇವತೆ ಹಬ್ಬದ ಅಂಗವಾಗಿ ದೇವಾಲಯದ ಆವರಣದಲ್ಲಿ ಅರ್ಚಕರಾದ ಸುಬ್ಬರಾವ್ ನೇತೃತ್ವದ ತಂಡದವರಿಂದ ವಿವಿಧ ಹೋಮ ಹವನಗಳು ನಡೆದವು. ದೇವಾಲಯದ ಪೂಜಾ ಕೈಂಕರ್ಯಗಳನ್ನು ಪ್ರಧಾನ ಅರ್ಚಕ ಕರಿಯಪ್ಪ ನೆರವೇರಿಸಿದರು.

ಕೂಡುಮಂಗಳೂರು ಮತ್ತು ಕೂಡ್ಲೂರು ಗ್ರಾಮದ ಗ್ರಾಮ ದೇವತೆಯಾಗಿದ್ದು, ಈ ಎರಡೂ ಗ್ರಾಮಗಳ ದೇವಾಲಯಗಳಿಂದ ರಾತ್ರಿ 12 ಗಂಟೆಗೆ ಎರಡು ಗ್ರಾಮಗಳ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ನಡೆದ ನಂತರ ಅಲಂಕೃತವಾದ ಭವ್ಯ ರಥದಲ್ಲಿ ತಾಯಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಗ್ರಾಮದ ಪ್ರಮುಖ ರಸ್ತೆಯಲ್ಲಿ ರಥವನ್ನು ದೊಡ್ಡಮ್ಮ ಬನದ ವರೆಗೆ ಎಳೆದುಕೊಂಡು ಬಂದರು. ದೊಡ್ಡಮ್ಮ ತಾಯಿ ದೇವಾಲಯ ಮುಂಭಾಗದ ಹಾಕಲಾಗಿದ್ದ ಬೆಂಕಿ ಕೊಂಡದಲ್ಲಿ ಹರಕೆ ಹೊತ್ತ ಭಕ್ತರು ಬೆಂಕಿಕೊಂಡ ಹಾಯ್ದು ಭಕ್ತಿ ಮೆರೆದರು. ನಂತರ ಬಲಿಪೂಜೆಯು ನಡೆಯಿತು.

ನಂತರ ದೇವಾಲಯದ ಅವರಣದಲ್ಲಿ ಜಾತ್ರೋತ್ಸವ ಕಾರ್ಯಕ್ರಮಗಳು ನಡೆದವು. ಹಬ್ಬದ ಅಂಗವಾಗಿ ಕೂಡುಮಂಗಳೂರು, ಕೂಡ್ಲೂರು ಗ್ರಾಮದ ಪ್ರಮುಖ ಬೀದಿಗಳು, ಹಾಗೂ ಹಾಸನ ಹೆದ್ದಾರಿಯ ರಸ್ತೆಯ ಎರಡೂ ಬದಿಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ರಥೋತ್ಸವದಲ್ಲಿ ಕೂಡಿಗೆ, ಕೂಡುಮಂಗಳೂರು, ಕೂಡ್ಲೂರು, ಸುಂದರನಗರ, ಬಸವತ್ತೂರು, ವಿಜಯನಗರ , ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಸಾವಿರಾರು ಭಕ್ತರು ಭಾಗವಹಿಸಿದರು. ಈ ಸಂದರ್ಭದಲ್ಲಿ ದೊಡ್ಡಮ್ಮ ತಾಯಿ ದೇವಾಲಯ ಸಮಿತಿಯ ಅಧ್ಯಕ್ಷ ಪವನ್ ಕುಮಾರ್, ಉಪಾಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಹರೀಶ್, ಸುರೇಶ್ ಸೇರಿದಂತೆ ಸಮಿತಿ ನಿರ್ದೇಶಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಕುಶಾಲನಗರ ಸಮೀಪದ ಕೂಡುಮಂಗಳೂರು ಮತ್ತು ಕೂಡ್ಲೂರು ಗ್ರಾಮದ ಗ್ರಾಮ ದೇವತೆ ಶ್ರೀ ದೊಡ್ಡಮ್ಮ ತಾಯಿಯನ್ನು ವಿವಿಧ ಪುಷ್ಪಗಳಿಂದ ಶೃಂಗಾರಿಸಲಾಗಿದ್ದುಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು‌
ಕುಶಾಲನಗರ ಸಮೀಪದ ಕೂಡುಮಂಗಳೂರು ಮತ್ತು ಕೂಡ್ಲೂರು ಗ್ರಾಮದ ಗ್ರಾಮ ದೇವತೆ ಶ್ರೀ ದೊಡ್ಡಮ್ಮ ತಾಯಿಯನ್ನು ವಿವಿಧ ಪುಷ್ಪಗಳಿಂದ ಶೃಂಗಾರಿಸಲಾಗಿದ್ದುಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT