ವಿರಾಜಪೇಟೆ: ಸಮೀಪದ ಮಗ್ಗುಲದಲ್ಲಿರುವ ಕೊಡಗು ದಂತ ಮಹಾ ವಿದ್ಯಾಲಯದ ಬೆಳ್ಳಿ ಮಹೋತ್ಸವದ ಅಂಗವಾಗಿ ಜರ್ಮನಿಯ ಹ್ಯಾನೋವರ್ನ್ ಇಂಟರ್ನ್ಯಾಷನಲ್ ಆರ್ಥೋಡಾಂಟಿಕ್ ಸೊಸೈಟಿಯ ಉಪಾಧ್ಯಕ್ಷ ಪ್ರೊ.ಜಾನ್ ವಿ. ರೈಮನ್ ಮತ್ತು ಆರ್ಥೋಡಾಂಟಿಸ್ಟ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಶಸ್ತ್ರಚಿಕಿತ್ಸಕ ಪ್ರೊ.ಅಲಾದಿನ್ ಸಬಾಗ್ ಅವರು ಈಚೆಗೆ ಭೇಟಿ ನೀಡಿದರು.

ಕಾಲೇಜಿನಲ್ಲಿರುವ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳ ಕಲಿಕೆಯ ಪ್ರಮಾಣವನ್ನು ಬೆಂಬಲಿಸಲು ಈ ಸಂದರ್ಭ ಅಗತ್ಯ ಕ್ರಮವನ್ನು ಕೈಗೊಳ್ಳಲಾಯಿತು. ಕೊಡಗು ದಂತ ಮಹಾವಿದ್ಯಾಲಯ ಮತ್ತು ಇಂಟರ್ ನ್ಯಾಷನಲ್ ಆರ್ಥೋಡಾಂಟಿಕ್ ಸೊಸೈಟಿಯ ಸಹಯೋಗದಲ್ಲಿ ಆಯೋಜಿಸಿರುವ ಹಲವು ಯೋಜನೆಗಳಿಗೆ ಈ ಸಂದರ್ಭ ಚಾಲನೆ ನೀಡಲಾಯಿತು.

ಯುರೋಪಿಯನ್ ಅಸೋಸಿಯೇಶನ್ ಆಫ್ ಆರ್ಥೋಡಾಂಟಿಸ್ಟ್ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಕೊಡಗು ದಂತ ವೈದ್ಯ ಮಹಾವಿದ್ಯಾಲಯದ ಡೀನ್ ಡಾ.ಸುನಿಲ್ ಮುದ್ದಯ್ಯ ಮತ್ತು ಡಾ.ಅನ್ಮೋಲ್ ಕಲ್ಹಾ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.