ವಿರಾಜಪೇಟೆ: ಹೆಗ್ಗಳ ಗ್ರಾಮದಲ್ಲಿರುವ ಎಡಮಕ್ಕಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ ಹಾಗೂ ವಾರ್ಷಿಕ ಮಹೋತ್ಸವವು ಶನಿವಾರ ಶ್ರದ್ಧಾ ಭಕ್ತಿಯಿಂದ ಮುಕ್ತಾಯಗೊಂಡಿತು.

ಮೂರು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಮಹೋತ್ಸವದಲ್ಲಿ ಮೊದಲ ದಿನ ಮಹಾಪೂಜೆ, ಪ್ರಸಾದ, ಶುದ್ಧಿ ಕ್ರಿಯೆ ಹಾಗೂ ಸೇವೆಗಳು ನಡೆದವು. ಶುಕ್ರವಾರ ಬೆಳಿಗ್ಗೆ ಮಹಾ ಗಣಪತಿ ಹೋಮ, ಉಷಃಪೂಜೆ, ಕಲಶಾಭಿಷೇಕ, ಬ್ರಹ್ಮ ಕಳಸ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ ಮಹಾಪೂಜೆ ಜರುಗಿತು. ಸಂಜೆ ಹೋಮ, ದೀಪಾರಾಧನೆ, ಕಲಶಾಧಿವಾಸ ಸೇವೆ ನಡೆಯಿತು.

ರಾಮನಗರದ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಆಡಳಿತ ಮಂಡಳಿಯವರು ಸಂಪ್ರದಾಯದಂತೆ ತೆರಳಿ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು. ಡಮಕ್ಕಿ ಸಾರ್ವಜನಿಕ ಮೈದಾನದಿಂದ ತಾಲಪೊಲಿ ಮೆರವಣಿಗೆಯಲ್ಲಿ ಭಕ್ತರು ಹೂವು, ದೀಪ ಬೆಳಗಿಸಿ ಗಳನ್ನು ತಟ್ಟೆಗಳಲ್ಲಿ ಇರಿಸಿ ಮೆರವಣಿಗೆಯಲ್ಲಿ ಸಾಗಿದರು. ಸಂಜೆ ಮಹಾಪೂಜೆ, ತಾಯಂಬಕಂ (ವಾದ್ಯ) ಸೇವೆ ಜರುಗಿತು. ಧಾರ್ಮಿಕ ಸಭೆ, ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಹೇಶ್, ಮಹೀ ಕೂರ್ಗ್ ಅವರಿಂದ ಆಕರ್ಷಕ ಸಿಡಿ ಮದ್ದಿನ ಪ್ರದರ್ಶನ ಜರುಗಿತು.

ಮೂರನೇ ದಿವಸ ಬೆಳಿಗ್ಗೆ ಮಹಾ ಗಣಪತಿ ಹೋಮ, ಉಷಃಪೂಜೆ ನಡೆಯಿತು. ಶಾಸ್ತ್ರೋಕ್ತವಾಗಿ ಬ್ರಹ್ಮ ಕಲಶಾಭಿಷೇಕ, ಮಧ್ಯಾಹ್ನ ಮಹಾ ಪೂಜೆ, ಸಂಜೆ ದೀಪಾರಾಧನೆ, ಮಹಾಪೂಜೆ ನಡೆದವು. ಮನರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕ್ಷೇತ್ರದ ಪ್ರಧಾನ ತಂತ್ರಿ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿ, ಪ್ರಧಾನ ಅರ್ಚಕ ವೇಣುಗೋಪಾಲ್ ಭಟ್ ಪೂಜೆಗಳನ್ನು ನೆರವೇರಿಸಿದರು. ಕೇರಳದ ಚೆಂಡೆ ಬಳಗದಿಂದ ಚಂಡೆ ಸೇವೆಯು ನಡೆಯಿತು. ಮಧ್ಯಾಹ್ನ ಹಾಗೂ ಸಂಜೆ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ದೇವಸ್ಥಾನವನ್ನು ಅಲಂಕರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.