ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲಿಬಾಲ್: ಮೈಸೂರಿನ ಟೀಮ್ ಬ್ರದರ್ ಚಾಂಪಿಯನ್

Published 29 ಜನವರಿ 2024, 14:11 IST
Last Updated 29 ಜನವರಿ 2024, 14:11 IST
ಅಕ್ಷರ ಗಾತ್ರ

ಸೋಮವಾರಪೇಟೆ: ತಾಲ್ಲೂಕಿನ ಕುಸುಬೂರು-ಕೆಂಚಮ್ಮನಬಾಣೆ ಭಾರತ್ ಮಾತಾ ಸೇವಾ ಸಂಘದಿಂದ ಕೆಂಚಮ್ಮನಬಾಣೆ ಭಾರತ್ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಮುಕ್ತ ಪುರಷರ ವಾಲಿಬಾಲ್ ಪ್ರಶಸ್ತಿಯನ್ನು ಮೈಸೂರಿನ ಟೀಮ್ ಬ್ರದರ್ ತಂಡ ಪಡೆದರೆ, ಮಂಗಳೂರಿನ ಜಿಯಾ ಪ್ರತಾಪ್ ತಂಡ ರನ್ನರ್ ಅಪ್ ಪಡೆದಿದೆ.

ಕಬಡ್ಡಿ ಪಂದ್ಯದಲ್ಲಿ ಕೆಂಚಮ್ಮನಬಾಣೆ ಟೀಮ್ ಬ್ರದರ್ ಎ ತಂಡ ಪ್ರಥಮ ಮತ್ತು ಬಿ ತಂಡ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ಥ್ರೋ ಬಾಲ್‌‌‌ನಲ್ಲಿ ಬಲಮುರಿ ಗಣಪತಿ ದೇವಾಲಯ ತಂಡ ಪ್ರಥಮ, ಕೆಂಚಮ್ಮನಬಾಣೆ 7 ಸ್ಟಾರ್ ತಂಡ ದ್ವೀತಿಯ ಸ್ಥಾನ ಗಳಿಸಿತು.

ಮಹಿಳೆಯರಿಗೆ ನಡೆದ ಹಗ್ಗ ಜಗ್ಗಾಟದಲ್ಲಿ ಟೀಮ್ ಬಲಮುರಿ ತಂಡ ಪ್ರಥಮ ಹಾಗೂ ಕೆಂಚಮ್ಮನಬಾಣೆ ಕೆಂಚಮ್ಮ ದೇವಿ ತಂಡ ದ್ವಿತೀಯ ಸ್ಥಾನ ಪಡೆಯಿತು.

ವೇದಿಕೆಯಲ್ಲಿದ್ದ ಸೇವಾ ಸಂಘದ ಅಧ್ಯಕ್ಷ ಕೆ.ಜೆ.ಸುನಿಲ್, ಮುಖಂಡರಾದ ಬಿ.ಎನ್.ಚಂದ್ರಶೇಖರ್, ಟಿ.ಪಿ.ಮೂರ್ತಿ, ಬೇಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಸುದರ್ಶನ್, ಭಾಸ್ಕರ್, ದಾನಿಗಳಾದ ಮುಂಜುನ ಆಶೋಕ್, ಆರ್.ಪುಟ್ಟಣ್ಣ ಪ್ರಮುಖರಾದ ಚಂದ್ರಿಕಾ ಕುಮಾರ್, ಜಯಲಲಿತ ಅವರು ಬಹುಮಾನ ವಿತರಿಸಿದರು.

ಸೋಮವಾರಪೇಟೆ ಸಮೀಪದ  ಕುಸುಬೂರು-ಕೆಂಚಮ್ಮನಬಾಣೆಯ ಭಾರತ್ ಮಾತಾ ಸೇವಾ ಸಂಘದ ವತಿಯಿಂದ ಕೆಂಚಮ್ಮನಬಾಣೆಯ ಭಾರತ್ ಮೈದಾನದಲ್ಲಿ ನಡೆದ ವಾಲಿಬಾಲ್ ಪಂದ್ಯದಲ್ಲಿ ಮಂಗಳೂರಿನ ಜಿಯಾ ಪ್ರತಾಪ್ ತಂಡ ರನ್ನರ್ ಅಫ್ ಆಯಿತು.
ಸೋಮವಾರಪೇಟೆ ಸಮೀಪದ  ಕುಸುಬೂರು-ಕೆಂಚಮ್ಮನಬಾಣೆಯ ಭಾರತ್ ಮಾತಾ ಸೇವಾ ಸಂಘದ ವತಿಯಿಂದ ಕೆಂಚಮ್ಮನಬಾಣೆಯ ಭಾರತ್ ಮೈದಾನದಲ್ಲಿ ನಡೆದ ವಾಲಿಬಾಲ್ ಪಂದ್ಯದಲ್ಲಿ ಮಂಗಳೂರಿನ ಜಿಯಾ ಪ್ರತಾಪ್ ತಂಡ ರನ್ನರ್ ಅಫ್ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT