ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿಯ ನಲ್ವತ್ತೇಕರೆ ನಿವಾಸಿ ಪೊನ್ನಮ್ಮ ಎಂಬವರ ಮಗಳು ದಿವ್ಯಾ (35) ಚೂರಲ್ ಮಲ ಗೆ ವಿವಾಹವಾಗಿದ್ದರು. ಭೂಕುಸಿತದಲ್ಲಿ ದಿವ್ಯಾ ಸೇರಿದಂತೆ ಕುಟುಂಬದ 9 ಮಂದಿ ನಾಪತ್ತೆಯಾಗಿದ್ದರು. ಮಗಳು ಹಾಗೂ ಕುಟುಂಬಸ್ಥರನ್ನು ಹುಡುಕಿಕೊಡುವಂತೆ ಪೊನ್ನಮ್ಮ ಮನವಿ ಮಾಡಿದ್ದರು. ಶುಕ್ರವಾರ ಸಂಜೆ ಕುಟುಂಬದ 9 ಮಂದಿಯ ಪೈಕಿ 8 ಮಂದಿಯ ಮೃತದೇಹ ಪತ್ತೆಯಾಗಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ದಿವ್ಯಾ ಹಾಗೂ ಮಗ ಲಕ್ಷಿತ್ ಮೃತದೇಹ ಒಟ್ಟಿಗೆ ಪತ್ತೆಯಾಗಿದೆ. ದಿವ್ಯಾ ವಯನಾಡುವಿನ ಮಿಮ್ಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.