ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರಸಂತೆ; ಅರಣ್ಯಕ್ಕೆ ಬೆಂಕಿ

Published 8 ಏಪ್ರಿಲ್ 2024, 5:28 IST
Last Updated 8 ಏಪ್ರಿಲ್ 2024, 5:28 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಶನಿವಾರಸಂತೆ (ಕೊಡಗು ಜಿಲ್ಲೆ): ಇಲ್ಲಿನ ಸಮೀಪದ ಅಪ್ಪಶೆಟ್ಟಳ್ಳಿ ಗ್ರಾಮದ ಅರಣ್ಯಕ್ಕೆ ಭಾನುವಾರ ಬೆಂಕಿ ತಗುಲಿದ್ದು, ಸುಮಾರು ಒಂದು ಎಕರೆಯಷ್ಟು ಕುರುಚಲು ಗಿಡಗಳಿರುವ ಅರಣ್ಯ ಭಸ್ಮಗೊಂಡಿದೆ.

ಬೆಂಕಿ ಉರಿಯುತ್ತಿರುವುದನ್ನು ಕಂಡ ಅರಣ್ಯದಂಚಿನ ಕಾಫಿ ತೋಟದ ಮಾಲೀಕ ಚಂದ್ರಕಾಂತ್ ತಕ್ಷಣವೇ ಶನಿವಾರಸಂತೆ ಅರಣ್ಯ ಇಲಾಖೆ ಮತ್ತು ಸೋಮವಾರಪೇಟೆ ಅಗ್ನಿಶಾಮಕ ದಳ ಮಾಹಿತಿ ತಿಳಿಸಿದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಈ ವೇಳೆ ಸಾರ್ವಜನಿಕರೂ ಕೈಜೋಡಿಸಿ, ಅಕ್ಕಪಕ್ಕದ ಕಾಫಿತೋಟಗಳಿಗೆ ಬೆಂಕಿ ಹರಡುವುದನ್ನು ತಡೆದರು.

ಸೋಮವಾರಪೇಟೆ ಅಗ್ನಿಶಾಮಕ ದಳದ ಠಾಣಾಧಿಕಾರಿ ಪಿ.ಎಸ್.ಸುರೇಶ್, ಸಿಬ್ಬಂದಿಯಾದ ಪಿ.ಈಶ್ವರ್, ಡಿ.ಎಂ.ಚೇತನ್, ಎಚ್.ಆರ್.ವಿನಯ್, ಪವನ್ ಕುಮಾರ್, ಶನಿವಾರಸಂತೆ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಆರ್.ಶ್ರೀನಿವಾಸ್, ಗಸ್ತು ವನಪಾಲಕ ಜಯಕುಮಾರ್, ಸಿಬ್ಬಂದಿಯಾದ ಕಾರ್ತಿಕ್, ನಾಗೇಶ್, ಬೆಂಕಿ ನಂದಿಸುವ ಕಾರ್ಯದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT