ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಲ್ಡ್ ಫ್ಲವರ್, ಕೂರ್ಗ್ ಯುನೈಟೆಡ್‌ಗೆ ಜಯ

ಮಡಿಕೇರಿಯಲ್ಲಿ ನಡೆಯುತ್ತಿರುವ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್’ ಪಂದ್ಯಾವಳಿ
Published 6 ಮೇ 2024, 4:57 IST
Last Updated 6 ಮೇ 2024, 4:57 IST
ಅಕ್ಷರ ಗಾತ್ರ

ಇಂದಿನ ಪಂದ್ಯಗಳು

ಬೆಳಿಗ್ಗೆ 8.30;ಎಂಟಿಬಿ ರಾಯಲ್ಸ್ ಮತ್ತು ಟೀಮ್ ಲಿವರೆಜ್

ಮಧ್ಯಾಹ್ನ 1.30;ಅಂಜಿಗೇರಿ ನಾಡ್ ಮತ್ತು ಕೊಡವ ಟ್ರೈಬ್

***

ಮಡಿಕೇರಿ: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಇಲ್ಲಿನ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ ‘ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್’ ಪಂದ್ಯಾವಳಿಯಲ್ಲಿ ಭಾನುವಾರ ವೈಲ್ಡ್ ಫ್ಲವರ್ ಮತ್ತು ಕೂರ್ಗ್ ಯುನೈಟೆಡ್ ತಂಡಗಳು ಜಯ ಸಾಧಿಸಿದವು.

ಅಂಜಿಗೇರಿ ನಾಡ್ ಮತ್ತು ವೈಲ್ಡ್ ಫ್ಲವರ್ ತಂಡಗಳ ಮಧ್ಯೆ ನಡೆದ ಪಂದ್ಯದಲ್ಲಿ ವೈಲ್ಡ್ ಫ್ಲವರ್ ತಂಡ 16 ರನ್‍ಗಳ ಅಂತರದಿಂದ ರೋಚಕ ಗೆಲುವು ಪಡೆಯಿತು.

ಟಾಸ್ ಗೆದ್ದ ಅಂಜಿಗೇರಿ ನಾಡ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್‌ಗೆ ಇಳಿದ ವೈಲ್ಡ್ ಫ್ಲವರ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 144 ರನ್‌ಗಳನ್ನು ಗಳಿಸಿತು. ಗುರಿಯನ್ನು ಬೆನ್ನತ್ತಿದ ಅಂಜಿಗೇರಿ ನಾಡ್ ತಂಡ 18.4 ಓವರ್‌ಗಳಲ್ಲಿ 128 ರನ್ ಗಳಿಸಿ ಗೆಲುವಿನ ಹೊಸ್ತಿಲಲ್ಲಿ ಎಡವಿತು.

21 ರನ್ ಗಳಿಸಿ, 3 ವಿಕೆಟ್ ಪಡೆದ ವೈಲ್ಡ್ ಫ್ಲವರ್ ತಂಡದ ನಿತಿನ್ ಬೋಪಣ್ಣ ಪಂದ್ಯ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು.

ಕೂರ್ಗ್ ಯುನೈಟೆಟ್‌ಗೆ 6 ವಿಕೆಟ್‍ಗಳ ಜಯ

ಪ್ರಗತಿ ಕ್ರಿಕೆಟರ್ಸ್ ತಂಡದ ಎದುರು ಕೂರ್ಗ್ ಯುನೈಟೆಟ್‌ 6 ವಿಕೆಟ್‍ಗಳ ಜಯ ಸಾಧಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪ್ರಗತಿ ಕ್ರಿಕೆಟರ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು149 ರನ್ ಗಳಿಸಿತು. ಗುರಿ ಬೆನ್ನತ್ತಿದ ಕೂರ್ಗ್ ಯುನೈಟೆಡ್ 14.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 150 ರನ್‌ಗಳನ್ನು ಗಳಿಸಿ ಜಯದ ನಗೆ ಬೇರಿತು.

50 ಎಸೆತಗಳಲ್ಲಿ 90 ರನ್ ಗಳಿಸಿದ ಸಿ.ಆರ್.ಅಯ್ಯಪ್ಪ ಅವರು ಪಂದ್ಯ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT