ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರವಾಸೋದ್ಯಮ ದಿನಾಚರಣೆ; ಸ್ವಚ್ಛತಾ ಕಾರ್ಯ

Published : 28 ಸೆಪ್ಟೆಂಬರ್ 2024, 7:01 IST
Last Updated : 28 ಸೆಪ್ಟೆಂಬರ್ 2024, 7:01 IST
ಫಾಲೋ ಮಾಡಿ
Comments

ಮಡಿಕೇರಿ: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಾಗೂ ‘ಸ್ವಚ್ಛತೆಯೇ ಸೇವೆ’ ಅಂಗವಾಗಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಶುಕ್ರವಾರ ದಿನವಿಡೀ ನಗರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಬೆಳಿಗ್ಗೆಯೇ ಗದ್ದಿಗೆಯಿಂದ ಆರಂಭವಾದ ಸ್ವಚ್ಛತಾ ಕಾರ್ಯದ ಅಭಿಯಾನವು ಮಧ್ಯಾಹ್ನ ಇಂದಿರಾಗಾಂಧಿ ವೃತ್ತ (ಚೌಕಿ)ವನ್ನು ತಲುಪಿತು. ನಂತರ ಸಂಜೆಯ ಹೊತ್ತಿಗೆ ರಾಜಾಸೀಟ್ ಉದ್ಯಾನ ತಲುಪಿತು.

ದಾರಿಯುದ್ದಕ್ಕೂ ಸುಮಾರು 100ಕ್ಕೂ ಅಧಿಕ ಮಂದಿ ಮೂಟೆಗಟ್ಟಲೆ ಕಸವನ್ನು ಸಂಗ್ರಹಿಸಿದರು.

ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಡಿಕೇರಿ ನಗರಸಭೆ, ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆ ಇಲಾಖೆ, ಕೊಡಗು ಜಿಲ್ಲಾ ಛೇಂಬರ್ ಆಫ್ ಕಾಮರ್ಸ್, ಹೋಂ-ಸ್ಟೇ ಆಸೋಷಿಯೇಷನ್, ಹೋಟೆಲ್ ಆಸೋಷಿಯೇಷನ್, ಟೂರ್ ಮತ್ತು ಟ್ರಾವೆಲ್ಸ್ ಆಸೋಷಿಯೇಷನ್, ಎಫ್.ಎಂ.ಸಿ ಕಾಲೇಜು ಪ್ರವಾಸೋದ್ಯಮ ವಿಭಾಗ, ಸಂತ ಮೈಕಲ್ ಶಾಲೆ, ಸಂತ ಜೋಸೆಫ್ ಶಾಲೆಗಳು ಸಹಭಾಗಿತ್ವ ನೀಡಿದ್ದವು.

ರಾಜಸೀಟ್ ಉದ್ಯಾನದಲ್ಲಿ ‘ನನ್ನ ಪ್ರತಿಜ್ಞೆ ಶೂನ್ಯ ತ್ಯಾಜ್ಯ ಪ್ರವಾಸ’ ಎಂಬ ಪೋಟೋ ಫ್ರೇಮ್‌ ಅನ್ನು ಅನಾವರಣಗೊಳಿಸಲಾಯಿತು. ಪ್ರವಾಸಿಗರಲ್ಲಿ ಶೂನ್ಯ ತ್ಯಾಜ್ಯ ಪ್ರವಾಸ ಕುರಿತು ಜಾಗೃತಿ ಮೂಡಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT