ಮಡಿಕೇರಿ: ಈ ಬಾರಿ ದೆಹಲಿಯಲ್ಲಿ ನಡೆಯುವ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೊಡಗು ಜಿಲ್ಲೆಯ ಮೂರ್ನಾಡುವಿನ ಯಶಸ್ ರೈ ಆಯ್ಕೆಯಾಗಿದ್ದಾರೆ.
ADVERTISEMENT
ADVERTISEMENT
ದೇಶದ ಪ್ರತಿ ರಾಜ್ಯದಿಂದ 15 ವರ್ಷದಿಂದ 28 ವರ್ಷ ವಯೋಮಿತಿವರೆಗಿನ ಈ ಅವಕಾಶದಲ್ಲಿ ಕರ್ನಾಟಕದಿಂದ ಈ ಬಾರಿ ಕೊಡಗು ಹಾಗೂ ದಕ್ಷಿಣಕನ್ನಡ ಜಿಲ್ಲೆ ಈ ಸ್ಥಾನ ಪಡೆದುಕೊಂಡಿದೆ.
ಇವರು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿಶೇಷ ರಾಯಭಾರಿಯಾಗಿ ಕರ್ನಾಟಕದಿಂದ ಪಾಲ್ಗೊಳ್ಳಲಿದ್ದಾರೆ.
ಬಿ.ಎನ್.ಲವಕುಮಾರ್ ಹಾಗೂ ಬಿ.ಬಿ.ಜಯಂತಿ ಅವರ ಪುತ್ರರಾಗಿರುವ ಇವರು ಸುಳ್ಳ ಕೆವಿಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಪಿ.ಪಿ.ಸುಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.